ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಯಮಕನಮರಡಿ ಗ್ರಾಮದ ದಿ ಗುಡುಸಾಬ ಚಿಕ್ಕೋಡಿ ಇವರಿಗೆ ಮಂಜೂರಾದ ಮೀನುಗಾರಿಕೆ ಇಲಾಖೆ ಸಂಕಷ್ಟ್ ಪರಿಹಾರ ನಿಧಿ ಮಂಜೂರಾದ ರೂ 3.00 ಲಕ್ಷ ಗಳ ಆದೇಶ ಪತ್ರವನ್ನು ಮೃತರ ವಾರಸುದಾರ ಮಸಾಬಿ ಗುಡುಸಾಬ ಚಿಕ್ಕೋಡಿ ಮತ್ತು ಅಮಾನುಲ್ಲಾ ರಿಯಾಜ ಸೊಲ್ಲಾಪುರೆ ಇವರಿಗೆ ವೈದ್ಯಕೀಯ ವೆಚ್ಚ ರು 19581/- ಆದೇಶ ಪತ್ರವನ್ನು ವಿತರಿಸಿದರು ವಸಂತ ಹೆಗಡೆ ಮೀನುಗಾರಿಕೆ ಉಪ …
Read More »ರಾಯಬಾಗ: ಕೆರೆ-ಕೊಳ್ಳಗಳು ಭರ್ತಿ
ರಾಯಬಾಗ: ಕೆರೆ-ಕೊಳ್ಳಗಳು ಭರ್ತಿಯಾದರೆ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿ ಜನರಿಗೆ ನೀರಿನ ಬವಣೆ ತಪ್ಪುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಹೇಳಿದರು. ತಾಲ್ಲೂಕಿನ ನಂದಿಕುರಳಿ ಗ್ರಾಮದಲ್ಲಿ ಕೆರೆಗೆ ಬಾಗಿನ ಅರ್ಪಣೆ ಮಾಡಿ ಅವರು ಮಾತನಾಡಿದರು. ಶಿವನಗೌಡ ಪಾಟೀಲ ಮಾತನಾಡಿ, ‘ವರುಣನ ಕೃಪಾ ಕಟಾಕ್ಷದಿಂದ ಮಳೆ ಬಂದು ಹಲವಾರು ಕೆರೆ, ಕಟ್ಟೆಗಳಿಗೆ ನೀರು ಅಲ್ಪ ಸ್ವಲ್ಪ ಬಂದಿದೆ. ಹಳ್ಳ ಕೊಳ್ಳಗಳು ಹರಿದಿರುವುದರಿಂದ ಕುಡಿಯುವ ನೀರಿನ ಅಭಾವ ತಪ್ಪಿದಂತಾಗಿದೆ. ದನ ಕರುಗಳಿಗೆ ಮೇವಿನ …
Read More »ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ. BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ
ಬಾಗಲಕೋಟೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಸಿಐಡಿ ವಿಚಾರಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿಕೆಯೊಂದನ್ನು ನೀಡಿದ್ದಾರೆ. ಮುಧೋಳದಲ್ಲಿ ಮಾತನಾಡಿದ ಅವರು ಲೈಂಗಿಕ ಕಿರುಕುಳ ನೀಡಿರುವ ವಿಚಾರದ ಬಗ್ಗೆ ಯಡಿಯೂರಪ್ಪ ಅವರನ್ನು ಇಲಾಖೆ ವಿಚಾರಣೆ ಮಾಡುತ್ತಿದೆ, ತನಿಖೆಯಲ್ಲಿ ಸತ್ಯಾಸತ್ಯತೆ ಏನಿದೆಯೋ ಹೊರಬರಲಿ ಎಂದು ಹೇಳಿದ್ದಾರೆ. ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಆಗಬಾರದು. ಇದು ಒಳ್ಳೆಯದೂ ಅಲ್ಲ, …
Read More »ತೈಲ ಬೆಲೆ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ
ಕಲಬುರಗಿ: ರಾಜ್ಯ ಸರಕಾರ ಪೆಟ್ರೋಲ್, ಡಿಸೆಲ್ ದರ ಏರಿಕೆ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್, ಕಲ್ಯಾಣ ಕರ್ನಾಟಕವು ಸೇರಿದಂತೆ ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿರುವ ಅಕ್ಷರ ಆವಿಷ್ಕಾರ ಯೋಜನೆಯ ಕುರಿತು ಅಪಸ್ವರ ಎತ್ತಿದ್ದಾರೆ. ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆ ಕಲ್ಯಾಣ ಕರ್ನಾಟಕದ 800ಕ್ಕೂ ಹೆಚ್ಚು ಶಾಲೆಗಳಲ್ಲಿ ಜಾರಿಗೆ ತರುತ್ತಿರುವುದು ನಮಗೆ ಗೊತ್ತಿಲ್ಲ. ಅದೂ ಅಲ್ಲದೆ ಬಹುತೇಕ ಶಾಸಕರಿಗೂ ಈ ವಿಷಯ …
Read More »ಮತ್ತೆ ಗರಿಗೆದರಿದ ಮೀನುಗಾರಿಕೆ
ಚಿಕ್ಕೋಡಿ: ಬೇಸಿಗೆಯಲ್ಲಿ ಹನಿ ನೀರಿಲ್ಲದೆ ಬರಡು ಭೂಮಿಯಂತಾಗಿದ್ದ ಕೃಷ್ಣಾ ನದಿಗೆ ಈಗ ಮತ್ತೆ ಜೀವ ಕಳೆ ಬಂದಿದೆ. ಬೇಸಿಗೆಯಲ್ಲಿ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರು ಇಲ್ಲದ್ದರಿಂದ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಮಹಾರಾಷ್ಟ್ರದಲ್ಲಿ ವರುಣ ಅಬ್ಬರಿಸುತ್ತಿದ್ದು, ಕಳೆದೊಂದು ವಾರದಿಂದ ಕೃಷ್ಣೆಗೆ ನೀರು ಹರಿದುಬರುತ್ತಿದೆ. ಹಾಗಾಗಿ ಯಡೂರ, ಕಲ್ಲೋಳ, ಮಾಂಜರಿ, ಅಂಕಲಿ ಸೇರಿದಂತೆ ಕೃಷ್ಣಾ ನದಿ ತಟದ ಗ್ರಾಮಗಳಲ್ಲಿ ಯುವಕರು ಗುರುವಾರ ಮೀನು ಹಿಡಿಯುವಲ್ಲಿ ನಿರತರಾಗಿರುವುದು ಕಂಡುಬಂತು. ‘ಕೃಷ್ಣಾ ನದಿಗೆ ನೀರು ಹರಿದು …
Read More »ಶಾರ್ಟ್ ಸರ್ಕ್ಯೂಟ್’ ನಿಂದ ಹೊತ್ತಿ ಉರಿದ ಮನೆಗಳು : ಮದುವೆಗೆಂದು ತಂದಿಟ್ಟಿದ್ದ 6 ಲಕ್ಷ ನಗದು ಭಸ್ಮ!
ಶಾರ್ಟ್ ಸರ್ಕ್ಯೂಟ್’ ನಿಂದ ಹೊತ್ತಿ ಉರಿದ ಮನೆಗಳು : ಮದುವೆಗೆಂದು ತಂದಿಟ್ಟಿದ್ದ 6 ಲಕ್ಷ ನಗದು ಭಸ್ಮ! ಬೆಳಗಾವಿ : ಶಾರ್ಟ್ ಸರ್ಕ್ಯೂಟ್ ನಿಂದ ಅಕ್ಕ ಪಕ್ಕದಲ್ಲಿ ಇದ್ದಂತಹ ಎರಡು ಮನೆಗಳು ಸುಟ್ಟು ಭಸ್ಮವಾಗಿದ್ದು ಮದುವೆಗೆ ಎಂದು ತಂದಿಟ್ಟದ 6 ಲಕ್ಷ ರೂಪಾಯಿ ನಗದು ಹಣ ಕೂಡ ಈ ವೇಳೆ ಸುಟ್ಟು ಬೂದಿಯಾಗಿರುವ ಘಟನೆ ಇಂದು ಬೆಳಗಾವಿಯ ಹೊಸೂರ ಹರಿಜನ ಗಲ್ಲಿಯಲ್ಲಿ ನಡೆದಿದೆ. ಹೌದು ಬೆಳಗಾವಿಯ ಶಿವರಾಜ್ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.
ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..! ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲ್ಲೂಕಿನ ಓಬಲದಿನ್ನಿ ಗ್ರಾಮದ ಶ್ರೀ ಲಕ್ಕಮ್ಮಾ ದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ …
Read More »ಎಚ್ಚರಿಕೆ ಕೊಟ್ಟಿದ್ದೆ ಅಷ್ಟೇ, ಕೊಲೆ ಮಾಡಿಲ್ಲ: ದರ್ಶನ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಖಾಕಿ ಖೆಡ್ಡಕ್ಕೆ ಬಿದ್ದಿರುವ ನಟ ದರ್ಶನ್ ಮತ್ತು ತಂಡವು ಕೃತ್ಯ ನಡೆದ ಘಟನೆಯನ್ನು ಎಳೆಎಳೆಯಾಗಿ ಪೊಲೀಸರ ಮುಂದೆ ಬಿಡಿಸಿಟ್ಟಿದೆ. ಕೊಲೆಯಾಗುತ್ತಾರೆ ಎಂಬ ಕಲ್ಪನೆ ಇರಲಿಲ್ಲ ಎಂದು ಪವಿತ್ರಾ ಹೇಳಿದರೆ, ರೇಣುಕಾ ಸ್ವಾಮಿ ಕೊಲೆಗೂ ನನಗೂ ಸಂಬಂಧವಿಲ್ಲ ಎಂದು ದರ್ಶನ್ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ತನಿಖಾಧಿಕಾರಿಗಳು ಹೇಳಿಕೆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ರೇಣುಕಾ ಸ್ವಾಮಿ …
Read More »ಮೂಡಲಗಿ: ಸಮಗ್ರ ಕೃಷಿಯಲ್ಲಿ ಬಸವಣ್ಣಿ ಖುಷಿ
ಮೂಡಲಗಿ: ತಾಲ್ಲೂಕಿನ ಗುರ್ಲಾಪುರ ಗ್ರಾಮದ ರೈತ ಬಸವಣ್ಣಿ ಚಿಣ್ಣಪ್ಪ ಮುಗಳಖೋಡ ಒಂದೇ ಬೆಳೆ ನೆಚ್ಚಿಕೊಳ್ಳದೆ, ವಿವಿಧ ಬೆಳೆಗಳನ್ನು ಬೆಳೆಯುತ್ತ ಸಮಗ್ರ ಕೃಷಿಯಲ್ಲಿ ಯಶ ಕಂಡಿದ್ದಾರೆ. ಜತೆಗೆ, ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಬಿ.ಎಸ್ಸಿ ಪದವೀಧರರಾದ ಬಸವಣ್ಣಿ 40 ಎಕರೆ ಜಮೀನು ಹೊಂದಿದ್ದಾರೆ. ನೌಕರಿಗಾಗಿ ಬೆನ್ನು ಹತ್ತದೆ, ಒಕ್ಕಲುತನದಲ್ಲೇ ಖುಷಿ ಕಾಣುತ್ತಿದ್ದಾರೆ. ‘ನಾನು ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 4 ಅಡಿ ಬಿಟ್ಟು, ಕಬ್ಬಿನ ಬೆಳೆ ನಾಟಿ ಮಾಡಿದ್ದೇನೆ. ಮಿಶ್ರ ಬೆಳೆಗಳಾಗಿ …
Read More »ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಕಲ್ಲೆದ್ದ ರಸ್ತೆಯಲ್ಲೇ ಮಕ್ಕಳ ನಡಿಗೆ!
ಚನ್ನಮ್ಮನ ಕಿತ್ತೂರು: ಕಾಲು ದಾರಿ ಮೇಲೆ ಮುಷ್ಟಿಗಾತ್ರದ ಚೂಪನೆಯ ಕಲ್ಲುಗಳು ಎದ್ದು ಕುಳಿತಿವೆ. ಸ್ಮಶಾನಕ್ಕೂ ಇದೇ ದಾರಿ ಅವಲಂಬನೆ. ಮಳೆಯಾದರೆ ಸಾಕು ಮನೆಯೊಳಗೆ ನೀರು ನುಗ್ಗಿ ಬದುಕೇ ಯಾತನಾಮಯ ಆಗುತ್ತದೆ. ಇದು ತಾಲ್ಲೂಕಿನ ಉಗರಖೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಿಮ್ಮಾಪುರ ಗ್ರಾಮದ ಅಂಬೇಡ್ಕರ್ ಕಾಲೊನಿ ಮಕ್ಕಳು ಮತ್ತು ನಾಗರಿಕರ ಗೋಳು. ‘ಕಾಲೊನಿಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಲು ಮಕ್ಕಳು ರಸ್ತೆ ಮೇಲೆ ಎದ್ದು …
Read More »
Laxmi News 24×7