Breaking News

ಜಿಲ್ಲೆ

ಬಾಗಲಕೋಟೆ ರಣಕಣದಲ್ಲಿ ‘ಕುರಿಗಾಯಿ’ ಕಲಿ: ಸಿದ್ದರಾಮಯ್ಯಗೆ ‘ಟಗರು’ ಗಿಫ್ಟ್ ನೀಡಿದ ಅಭಿಮಾನಿಗಳು!

ಬಾಗಲಕೋಟೆ ಉಪಚುನಾವಣೆಯ ಪ್ರಚಾರ ಕಣದಲ್ಲಿ ಇಂದು ವಿಶೇಷ ದೃಶ್ಯವೊಂದು ಕಂಡುಬಂದಿದೆ. ಮುಗಳೊಳ್ಳಿ ಗ್ರಾಮದಲ್ಲಿ ಎರಡನೇ ದಿನದ ಪ್ರಚಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಅಚ್ಚರಿಯ ಉಡುಗೊರೆಯೊಂದನ್ನು ನೀಡಿದ್ದಾರೆ. ಬಾಗಲಕೋಟೆ ಉಪಸಮರದ ಅಖಾಡದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಮುಗಳೊಳ್ಳಿ ಗ್ರಾಮದ ವೇದಿಕೆಯಲ್ಲಿ ಅವರಿಗೆ ಗ್ರಾಮಸ್ಥರು ‘ಟಗರು’ ಉಡುಗೊರೆ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ಕಂಬಳಿ ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿದ ಬೆನ್ನಲ್ಲೇ ಸಿದ್ದರಾಮಯ್ಯನವರ ಆಪ್ತ ಗುರುತಾಗಿರುವ …

Read More »

ಅಂಗನವಾಡಿ ಕಾರ್ಯಕರ್ತೆಯರ ಬೇಸಿಗೆ ರಜೆ ಕಡಿತಕ್ಕೆ ಆಕ್ರೋಶ: ಒಂದು ತಿಂಗಳ ರಜೆಗಾಗಿ ಬೆಳಗಾವಿ ತಾಲೂಕು ಸಮಿತಿ ಆಗ್ರಹ

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಬಾರಿ ಬೇಸಿಗೆ ರಜೆ ಕಡಿತಗೊಳಿಸಿರುವ ಸರ್ಕಾರದ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಪೂರ್ಣ ಒಂದು ತಿಂಗಳ ರಜೆ ನೀಡಬೇಕೆಂದು ಒತ್ತಾಯಿಸಿ ಬೆಳಗಾವಿ ತಾಲೂಕು ಸಮಿತಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಗ್ರಹಿಸಿದೆ. ಬೆಳಗಾವಿ ತಾಲೂಕಿನ ಅಂಗನವಾಡಿ ನೌಕರರ ಸಂಘ (CITU) ಸರ್ಕಾರಕ್ಕೆ ಪ್ರಬಲ ಒತ್ತಾಯವೊಂದನ್ನು ಮಂಡಿಸಿದೆ. 2025ನೇ ಸಾಲಿನಲ್ಲಿ ನೀಡಲಾಗಿದ್ದ ಒಂದು ತಿಂಗಳ ಪೂರ್ಣ ಬೇಸಿಗೆ ರಜೆಯನ್ನು …

Read More »

ಧಾರವಾಡದ ಹಳ್ಳಿಗಳಲ್ಲಿ ಅಕ್ರಮ ಮದ್ಯದ ಹಾವಳಿ: ಅಬಕಾರಿ ಅಧಿಕಾರಿಗಳಿಗೆ ಶಾಸಕ ವಿನಯ್ ಕುಲಕರ್ಣಿ ತರಾಟೆ

ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಕೆಂಡಾಮಂಡಲವಾಗಿದ್ದಾರೆ. ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ ಶಾಸಕರು, ಇಲಾಖೆಯ ನಿರ್ಲಕ್ಷ್ಯಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಧಾರವಾಡದಲ್ಲಿ ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆಯ ವೈಫಲ್ಯಗಳು ಅನಾವರಣಗೊಂಡವು. ಹಳ್ಳಿ ಹಳ್ಳಿಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ನಿತ್ಯ ನೂರಾರು ದೂರುಗಳು …

Read More »

ಮನೆಗಳ ಕರ ಸುಲಾತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾಗವಾಡ ತಾಲೂಕ ಪ್ರಥಮ ಸ್ಥಾನ.

ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ 15 ತಾಲೂಕಿನ ತಾಲೂಕಾ ಪಂಚಾಯಿತಿಗಳ ಪೈಕಿ ಕಾಗವಾಡ ತಾಲೂಕ ಪಂಚಾಯಿತಿ ವತಿಯಿಂದ ಗ್ರಾಮ ಪಂಚಾಯಿತಿಗಳ ಮುಖಾಂತರ ಮನೆಗಳ ಕರ ವಸುಲಾತಿಎಲ್ಲಿ ಶೇಕಡಾ 122 ರಷ್ಟು ಸಾಧನೆ ಮಾಡಿ ಜಿಲ್ಲೆಯಲ್ಲಿ ಪುನ ಪ್ರಥಮ ಕ್ರಮಾಂಕ ಪಡೆದು ಸಾಧನೆ ಮಾಡಿದೆ. ಬೆಳಗಾವಿ ಜಿಲ್ಲೆಯ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಹಾಗೂ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಇವರ ಮಾರ್ಗದರ್ಶನದಲ್ಲಿ ಕಾಗವಾಡ ತಾಲೂಕ ಪಂಚಾಯತಿ …

Read More »

ಮದುವೆಯಾಗಿ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತ

ಉಡುಪಿ : ಸಂಶಯದ ಸುಳಿಯಲ್ಲಿ ಯುವಕನ ಆತ್ಮಹತ್ಯೆ? ಮದುವೆಯಾಗಿ ಒಂದೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ ಸುದೀಪ್ ಶೆಟ್ಟಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ನಡೆದ ಘಟನೆ ಮೃತ ಸುದೀಪ್ ಮೂಲತಃ ನೆಲ್ಯಾಡಿ ನಿವಾಸಿ. ಮೃತನ ಪತ್ನಿಯ ವಿರುದ್ಧ ದೂರು ನೀಡಿದ ಸುದೀಪ್ ತಂದೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಸೊಸೆಯ ವಿರುದ್ಧವೇ ದೂರು ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸುದೀಪ್ ಹಾಗೂ ಸೌಮ್ಯ ಶೆಟ್ಟಿ ನಾಟಕ ಕಲಾವಿದೆ ಹಾಗೂ ಮೇಕಪ್ …

Read More »

ಬೆಳಗಾವಿ-ಖಾನಾಪುರದಲ್ಲಿ ಅಕ್ರಮ ಗಣಿಗಾರಿಕೆ ದಂಧೆ: ಜಿಲ್ಲಾಧಿಕಾರಿಗೆ ರಾಜಕುಮಾರ ಟೋಪಣ್ಣವರ, ಸುಜೀತ್ ಮುಳಗುಂದ ದೂರು

ಖಾನಾಪುರ, ಬೆಳಗಾವಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ತಡೆಯುವಂತೆ ಆಗ್ರಹಿಸಿ ಮಂಗಳವಾರ ರಾಜಕುಮಾರ ಟೋಪಣ್ಣವರ ಹಾಗೂ ಸುಜೀತ್ ಮುಳಗುಂದ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಬಾಕ್ಸೈಟ್, ಲೇಟರೈಟ್ ಮತ್ತು ಸಿಲಿಕಾ ಖನಿಜಗಳನ್ನು ವ್ಯಾಪಕವಾಗಿ ಅಕ್ರಮವಾಗಿ ತೆಗೆಯಲಾಗುತ್ತಿದೆ. ಬೆಳಗುಂಡಿ, ಬಕನೂರು, ಬೀಜಗರ್ಣಿ, ಗೋಳ್ಯಾಳಿ, ಅಮಟೆ, ಬೆಟಗೇರಿ, ಕಿಣಯೆ, ಇನಾಮ ಬಡಸ್ ಹಾಗೂ ಖಾನಾಪುರ ತಾಲ್ಲೂಕಿನ ತೋರಳಿ ಗ್ರಾಮಗಳಲ್ಲಿ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎನ್ನಲಾಗಿದೆ. ರೈತರ ಅನುಮತಿ ಇಲ್ಲದೆ ಅವರ ಕೃಷಿಭೂಮಿಗಳಲ್ಲೇ ಗಣಿಗಾರಿಕೆ ನಡೆಸಲಾಗುತ್ತಿದ್ದು, …

Read More »

​ಹಿರೇಕುಂಬಿಯ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ!

​ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪ. ಇಂದು ಕ್ಷೇತ್ರದ ಹಿರೇಕುಂಬಿ ಗ್ರಾಮದ ಪರಮ ಪವಿತ್ರ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ CMIDP ಯೋಜನೆಯಡಿ ಸುಮಾರು 49.00 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸಮುದಾಯ ಭವನಕ್ಕೆ ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ​ಗ್ರಾಮೀಣ ಭಾಗದ ದೇವಸ್ಥಾನಗಳು ಕೇವಲ ಭಕ್ತಿಯ ಕೇಂದ್ರಗಳಲ್ಲ, ಅವು ಸಾಮಾಜಿಕ ಚಟುವಟಿಕೆಗಳ ತಾಣಗಳೂ ಹೌದು. ಈ …

Read More »

ಮಹಾವೀರ ಜಯಂತಿ ಮೆರವಣಿಗೆ – ಗಮನ ಸೆಳೆದ ಬುರುಡೆ ಕೇಸ್‌ ಟ್ಯಾಬ್ಲೋ

ಬೆಳಗಾವಿ: ಮಹಾವೀರ ಜಯಂತಿಯ ಮೆರವಣಿಗೆಯಲ್ಲಿ ಧರ್ಮಸ್ಥಳದ ಬುರುಡೆ ಪ್ರಕರಣದ ಗ್ಯಾಂಗ್ ) ಟ್ಯಾಬ್ಲೋ ಎಲ್ಲರ ಗಮನ ಸೆಳೆದಿದೆ. ಸತ್ಯಕ್ಕೆ ಜಯ ಸುಳ್ಳಿಗೆ ಸೋಲು ಎನ್ನುವ ನ್ಯಾಯ ತಕ್ಕಡಿಯನ್ನು ಟ್ಯಾಬ್ಲೋ ಪ್ರದರ್ಶನ ಮಾಡಲಾಗಿದೆ. ತಕ್ಕಡಿಯಲ್ಲಿ ಒಂದು ಕಡೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾವಚಿತ್ರವನ್ನು ಹಾಕಲಾಗಿದ್ದು, ಇನ್ನೊಂದು ಕಡೆ ಧರ್ಮಸ್ಥಳ ವಿರುದ್ಧ ಬುರುಡೆ ಕಥೆ ಕಟ್ಟಿದ್ದ ಆರೋಪಿ ಮುಸುಕುಧಾರಿ ಸೇರಿ ಮೂವರ ಭಾವಚಿತ್ರವನ್ನು ಪ್ರದರ್ಶಿಸಲಾಗಿತ್ತು. ಬೆಳಗಾವಿ ನಗರದ ಜೈನ ಸಮುದಾಯದಿಂದ ಆಯೋಜಿಸಿದ್ದ …

Read More »

ಹಳ್ಳಿಗಳಿಗೂ ಗ್ಯಾಸ್‌ ತಂದ್ರು, ಈಗ ಸಿಟಿಗಳಲ್ಲಿ ಸೌದೆ ಎಲ್ಲಿಂದ ತರೋದು: ಕೇಂದ್ರಕ್ಕೆ ಡಿಕೆಶಿ ಪ್ರಶ್ನೆ

ಬೆಂಗಳೂರು: ಸೌದೆ ಮುಕ್ತ ಭಾರತ ಮಾಡ್ತೀವಿ ಅಂತ ಎಲ್ಲಾ ಕಡೆ ಗ್ಯಾಸ್ (Gas) ತಂದ್ರು. ಹಳ್ಳಿಗಳಲ್ಲೂ ಗ್ಯಾಸ್‌ ಬಂತು. ಈಗ ಸಿಟಿಗಳಲ್ಲಿ ಸೌದೆ ಎಲ್ಲಿಂದ ತರೋದು? ಎಂದು ಡಿಸಿಎಂ ಡಿಕೆ ಶಿವಕುಮಾರ್‌  ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ  ಒಂದು ಪ್ರಶ್ನೆ ಹಾಕ್ತೀನಿ, ಎಲೆಕ್ಷನ್ ನಡೆಯುತ್ತಿದೆ, ಅಚ್ಚೇದಿನ್ ಅಂತ ಹೇಳಿದ್ರು, ಬಂತಾ? ಟೋಲ್ ದರ ಹೆಚ್ಚಳ ಆಗಿದೆ, 28.30 …

Read More »

ಬೀದರ್‌ನಲ್ಲಿ ಸಿಡಿಲು ಬಡಿದು ಯುವರೈತ ಸ್ಥಳದಲ್ಲೇ ಸಾವು

ಬೀದರ್: ಕೃಷಿ ಚಟುವಟಿಕೆಗಾಗಿ ಜಮೀನಿಗೆ ಹೋಗಿದ್ದಾಗ ಸಿಡಿಲು  ಬಡಿದು ಯುವರೈತ  ಸಾವನ್ನಪ್ಪಿದ ದಾರುಣ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ನಡೆದಿದೆ. ರಾಹುಲ್ ಭಾಸ್ಕರ್ (25) ಸಿಡಿಲಿಗೆ ಬಲಿಯಾದ ಯುವರೈತ. ಕೆಲಸದ ನಿಮಿತ್ತ ರಾಹುಲ್ ತಮ್ಮ ಜಮೀನಿಗೆ ತೆರಳಿದ್ದ ವೇಳೆ ಏಕಾಏಕಿ ಸಿಡಿಲು ಸಹಿತ ಮಳೆ ಆರಂಭವಾಗಿ ಜಮೀನಿನಲ್ಲಿದ್ದ ರಾಹುಲ್‌ಗೆ ಸಿಡಿಲು ಬಡಿದು ದುರಂತ ಸಂಭವಿಸಿದೆ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಯುವಕನ ಸಾವಿನಿಂದ ಪೋಷಕರು ಕಂಗಾಲಾಗಿದ್ದಾರೆ. ಬೀದರ್, ಔರಾದ್, …

Read More »