ಬೆಳಗಾವಿ: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಉತ್ತರ ಕರ್ನಾಟಕದವರನ್ನೇ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂಬ ಕೂಗು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ. ಈ ಭಾಗದ ಸಾಹಿತಿಗಳು, ಕವಿಗಳು, ಲೇಖಕರು ಜಾಲತಾಣಗಳಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು, ‘ಉತ್ತರ ಕರ್ನಾಟಕದವರಿಗೆ ಅವಕಾಶ ನೀಡಬೇಕು’ ಎಂದು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಕೆಲವರು ಇಂಥವರನ್ನೇ ಆಯ್ಕೆ ಮಾಡಬೇಕೆಂದು ತಿಳಿಸಿದ್ದಾರೆ. ಈ ಕುರಿತಾಗಿ ನಡೆಯುತ್ತಿರುವ ಚರ್ಚೆಯೂ ಕಾವೇರುತ್ತಿದೆ. ‘ಈವರೆಗೆ ನಡೆದಿರುವ ಅಖಿಲ ಭಾರತ …
Read More »ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ವಿಜಯಪುರ: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ನಗರದ ಶ್ರೀಸಿದ್ದೇಶ್ವರ ದೇವಸ್ಥಾನ ಹತ್ತಿರ ವಕ್ಫ್ ಕಾಯ್ದೆ ವಿರೋಧಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ನಮೋ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡಿದ್ದಾರೆ. ಸಾರ್ವಜನಿಕರ, ರೈತರ, ಸಂಘ-ಸಂಸ್ಥೆಗಳ, ದೇವಸ್ಥಾನಗಳ, ಸರ್ಕಾರಿ ಆಸ್ತಿ, ಜಮೀನುಗಳನ್ನು ವಕ್ಪ್ ಆಸ್ತಿ ಎಂದು ಉತಾರೆಯಲ್ಲಿ ನಮೂದಿಸುವುದನ್ನು ಕೈಬಿಡುವಂತೆಯೂ …
Read More »ಅತ್ಯಾಚಾರ ಕೇಸ್ : ಸಂತ್ರಸ್ತೆ ಮಹಿಳೆಯ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಆಪ್ತನಿಂದ ದೂರು ದಾಖಲು!
ಹುಬ್ಬಳ್ಳಿ : ಮಹಿಳಾ ರೈತ ಮುಖಂಡೆಯ ಮೇಲೆ ಶಾಸಕ ವಿನಯ ಕುಲಕರ್ಣಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಮಹಿಳೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದರು.ಇದೀಗ ವಿನಯ್ ಕುಲಕರ್ಣಿ ಅವರ ಆಪ್ತ ಸಂತ್ರಸ್ತೆ ಮಹಿಳೆಯ ವಿರುದ್ಧವೇ ಪ್ರತಿ ದೂರು ದಾಖಲಿಸಿದ್ದಾರೆ. ಹೌದು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಹಾಗೂ ಆಪ್ತ ಅರ್ಜುನ್ ಗುಡ್ಡದ …
Read More »ಹೆಸರಿಗಷ್ಟೇ ಹೆದ್ದಾರಿ: ಸವಾರರಿಗೆ ಕಿರಿಕಿರಿ
ಕಾಗವಾಡ: ಇಲ್ಲಿಂದ ಅಥಣಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮುರಗುಂಡಿಯವರೆಗಿನ 40 ಕಿ.ಮೀ. ರಸ್ತೆ ಸಂಪೂರ್ಣ ಹದಗಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಇದು ಮೇಲ್ದರ್ಜೆಗೆ ಏರಿದ್ದರೂ, ಕಿರಿದಾಗಿರುವ ಕಾರಣ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ. ವಿಜಯಪುರದಿಂದ ಬೆಳಗಾವಿ, ಮಹಾರಾಷ್ಟ್ರದ ಮೀರಜ್, ಸಾಂಗ್ಲಿ, ಕೊಲ್ಹಾಪುರಕ್ಕೆ ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ವಿಶೇಷವಾಗಿ ಆಸ್ಪತ್ರೆಗೆ ತೆರಳಲು ಮತ್ತು ವ್ಯಾಪಾರಕ್ಕೆ ಹೋಗಲು ಈ ರಸ್ತೆಯೇ ಆಸರೆ. ಆದರೆ, ಹಾಳಾದ ರಸ್ತೆ ಸುಧಾರಣೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು …
Read More »‘2ಎ’ ಮೀಸಲಾತಿ ಅ.18ರಂದು ಬೆಂಗಳೂರಿನಲ್ಲಿ ಧರಣಿ
ಬೆಳಗಾವಿ: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಮ್ಮ ಸಮುದಾಯಕ್ಕೆ ‘2ಎ’ ಮೀಸಲಾತಿ ನೀಡುವ ವಿಚಾರವಾಗಿ ಯಾವ ಪ್ರಗತಿಯಾಗಲಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮುದಾಯದ ಎಲ್ಲ ಪದಾಧಿಕಾರಿಗಳು ಅ.18ರಂದು ಬೆಂಗಳೂರಿನಲ್ಲಿ ಧರಣಿ ನಡೆಸಲಿದ್ದೇವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ …
Read More »ಗೋಕಾಕನ ಮಾರ್ಕಂಡೇಯ ನದಿಯಲ್ಲಿ ಆಯತಪ್ಪಿ ಕಾಲು ಜಾರಿ ಬಿದ್ದ ಯುವಕ
ಗೋಕಾಕನ ಮಾರ್ಕಂಡೇಯ ನದಿಯಲ್ಲಿ ಆಯತಪ್ಪಿ ಕಾಲು ಜಾರಿ ಬಿದ್ದ ಯುವಕ ನದಿಯಲ್ಲಿ ಕಣ್ಮರೆಯಾದ ಯುವಕನಿಗಾಗಿ ಅಗ್ನಿಶಾಮಕ ಹಾಗೂ ಪೊಲೀಸರ ಹುಡುಕಾಟ. ಸಾಗರ ಮಾರುತಿ ಗೌಳಿ(೧೬) ನದಿಯಲ್ಲಿ ಕಣ್ಮರೆಯಾಗಿರೋ ಯುವಕ. ಗೋಕಾಕನ ಮಾರ್ಕಂಡೇಯ ನದಿಯಲ್ಲಿ ನಡೆದ ಘಟನೆ. ನಿನ್ನೆ ಮಧ್ಯಾಹ್ನ ನದಿಗೆ ಆಯತಪ್ಪಿ ಬಿದ್ದಿರುವ ಯುವಕ. ನಿನ್ನೆಯಿಂದ ಸತತವಾಗಿ ಯುವಕನಿಗಾಗಿ ಕುಡುಕಾಟ ನಡೆಸ್ತಿರೋ ಅಗ್ನಿಶಾಮಕ ಸಿಬ್ಬಂಧಿ. ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
Read More »ಇಂದು ಸಿಎಂ ಸಿದ್ದರಾಮಯ್ಯ `ಬಳ್ಳಾರಿ ಜಿಲ್ಲೆ’ ಪ್ರವಾಸ
ಬಳ್ಳಾರಿ : ಅ.14 ರ ಇಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು ಬೆಳಿಗ್ಗೆ 10.50 ಗಂಟೆಗೆ ತೋರಣಗಲ್ಲಿನ ಜಿಂದಾಲ್ ಏರ್‌ಸ್ಟ್ರಿಪ್ ಗೆ ಆಗಮಿಸುವರು. ಬಳಿಕ ಮುಖ್ಯಮಂತ್ರಿಗಳು ಬೆಳಿಗ್ಗೆ 11.15 ಗಂಟೆಗೆ ಸಂಡೂರಿಗೆ ಆಗಮಿಸಿ, ಬಳ್ಳಾರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಇವರ ವತಿಯಿಂದ ಸಂಡೂರು ಪಟ್ಟಣದ ಅಗ್ನಿಶಾಮಕದಳ ಮುಂಭಾಗದ ವಿಶ್ವಾಸ್ ಯು.ಲಾಡ್ ಮೈದಾನದ ಆವರಣದಲ್ಲಿ ಆಯೋಜಿಸಿರುವ ಸಂಡೂರು ತಾಲ್ಲೂಕಿನ ಸಾಧನಾ …
Read More »ಅರಮನೆಗೆ ಜನರ ಲಗ್ಗೆ
ಮೈಸೂರು: ವಿಜಯದಶಮಿ ಮೆರವಣಿಗೆ ವೀಕ್ಷಣೆ ಪಾಸ್ ಇದ್ದವರನ್ನು ಅರಮನೆ ಆವರಣದೊಳಗೆ ಬಿಡಲು ಸಾಕಷ್ಟು ಹೊತ್ತು ಕಾಯಿಸಿದ್ದಲ್ಲದೆ, ಎಲ್ಲ ಆಸನಗಳು ಭರ್ತಿಯಾಗಿವೆ ಎಂದು ಗೇಟ್‌ನಲ್ಲಿನ ಸಿಬ್ಬಂದಿ ತಿಳಿಸಿದ್ದರಿಂದ ಇಲ್ಲಿನ ವರಾಹ ದ್ವಾರದ ಬಳಿ ಶನಿವಾರ ಜನರು ಹಾಗೂ ಪೊಲೀಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರವೇಶ ಗೊಂದಲದಿಂದ ಆಕ್ರೋಶಗೊಂಡ ಜನರು ವರಾಹ ದ್ವಾರದ ಗೇಟ್ ತಳ್ಳಿ ಒಳ ನುಗ್ಗಿದರು. ಅರಮನೆ ಉದ್ಯಾನದ ಗುಲಾಬಿ ತೋಟದಲ್ಲೆಲ್ಲಾ ಅಡ್ಡಾದಿಡ್ಡಿಯಾಗಿ ಓಡಾಡಿದರು. ಭದ್ರತಾ ಸಿಬ್ಬಂದಿಯೂ …
Read More »ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು’ ಎಂದ ವಿಜಯೇಂದ್ರ
ಬೆಳಗಾವಿ: ‘ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಡಾ ಹಗರಣದ ಕಾರ್ಮೋಡ ಮುಖ್ಯಮಂತ್ರಿ ಕುರ್ಚಿ ಆವರಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಅವರೇ ಒಪ್ಪಿಕೊಂಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಅವರ ಸ್ಥಾನದ ಮೇಲೆ ಕಣ್ಣಿಟ್ಟಿರುವರು, ತಮಗೆ ಬೆಂಬಲ ಕೋರಿ ರಹಸ್ಯ ಸಭೆ ನಡೆಸುತ್ತಿದ್ದಾರೆ’ ಎಂದರು. ‘ವಿಜಯೇಂದ್ರ ಅವರನ್ನು ಬಿಜೆಪಿ …
Read More »ದಸರಾ ವೇಳೆಯೇ ಮೈಸೂರು ರಾಜಮನೆತನಕ್ಕೆ ಮತ್ತೊಂದು ಕುಡಿ, ದುಪ್ಪಟ್ಟಾಯ್ತು ಸಂಭ್ರಮ
ಮೈಸೂರು ರಾಜವಂಶಸ್ಥರಾದ ಒಡೆಯರ್ ಅವರಿಂದಾಗಿ ದಸರಾ ಜಗದ್ವಿಖ್ಯಾತಿಯಾಗಿದೆ. ಹಬ್ಬದ ಸಮಯದಲ್ಲೇ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿ ಅವರು ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸದ್ಯ ದಸರಾ ಹೊತ್ತಲ್ಲೇ ಒಡೆಯರ್ ಕುಟುಂಬದಲ್ಲಿ ಡಬಲ್ ಧಮಾಕಾದ ಸಂಭ್ರಮ ಮನೆಮಾಡಿದೆ. ಯದುವೀರ್ ಹಾಗೂ ಪತ್ನಿ ರಾಣಿ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರೂ ಕ್ಷೇಮವಾಗಿದ್ದಾರೆ ಎಂದು …
Read More »
Laxmi News 24×7