Breaking News

ಜಿಲ್ಲೆ

ಸುವರ್ಣ ರಾಜ್ಯ ಪ್ರಶಸ್ತಿಗೆ ಚಲವಾದಿ ಆಯ್ಕೆ

ಖಾನಾಪುರ: ಕರ್ನಾಟಕ ಸಂಭ್ರಮ ಸುವರ್ಣ ಮಹೋತ್ಸವ ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಘೋಷಿಸಿದ ರಾಜ್ಯ ಪ್ರಶಸ್ತಿಗೆ ತಾಲ್ಲೂಕಿನ ಮಂಗೇನಕೊಪ್ಪ ಗ್ರಾಮದ ನಿವಾಸಿ, ನಿವೃತ್ತ ಅರಣ್ಯ ಅಧಿಕಾರಿ ಎಸ್.ಎಂ ಚಲವಾದಿ ಆಯ್ಕೆಯಾಗಿದ್ದಾರೆ. ಚಲವಾದಿಯವರು ಮೂರೂವರೆ ದಶಕ ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ಅರಣ್ಯ ಸಂರಕ್ಷಣೆ, ಪರಿಸರ ರಕ್ಷಣೆಯ ಕುರಿತು ಕಾಳಜಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. …

Read More »

ದೀಪಾವಳಿಗೆ ಆಕಾಶಬುಟ್ಟಿ ಹೊಳಪು

ಧಾರವಾಡ: ‘ಬೆಳಕಿನ ಹಬ್ಬ’ ದೀಪಾವಳಿಗೆ ಕಣ್ಣು ಕೋರೈಸುವ `ದೇಸಿ ಆಕಾಶಬುಟ್ಟಿ’ಗಳು ಮತ್ತು ತರಹೇವಾರಿ `ಮಣ್ಣಿನ ಹಣತೆ’ಗಳು ನಗರದ ಮಾರುಕಟ್ಟೆಗೆ ಬಂದಿದ್ದು, ಗ್ರಾಹಕರಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ. ಬಟ್ಟೆ, ಕಟ್ಟಿಗೆ, ಮಿಂಚಿನ ಹಾಳೆ, ಉಲನ್ ದಾರದಿಂದ ತಯಾರಿಸಿದ ವಿಭಿನ್ನ ಶೈಲಿಯ ಆಕಾಶಬುಟ್ಟಿಗಳನ್ನು ನೋಡುಗರ ಗಮನ ಸೆಳೆಯುತ್ತಿವೆ. ಸ್ಟಾರ್, ಗಣಪ, ಲಕ್ಷ್ಮೀ ಬಣ್ಣದ ಬಟ್ಟೆಗಳು ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಬಗೆಯ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಪ್ರತಿ ವರ್ಷ ಚೀನಾದ ಆಕಾಶಬುಟ್ಟಿಗಳು ಮಾರುಕಟ್ಟೆಗೆ …

Read More »

ಚಿಕ್ಕೋಡಿ | ಯಮನವ್ವಗೆ ಸುವರ್ಣ ಕರ್ನಾಟಕ ಪ್ರಶಸ್ತಿ

ಚಿಕ್ಕೋಡಿ: ತಾಲ್ಲೂಕಿನ ಧುಳಗನವಾಡಿ ಗ್ರಾಮದ ಹಿರಿಯ ಬಯಲಾಟ ಕಲಾವಿದೆ ಯಮನವ್ವಾ ಕಲಾಚಂದ್ರ(86) ಅವರ ಕಲೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2024ನೇ ಸಾಲಿನ ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಯಮನವ್ವಾ ಅವರು ವಿವಿಧ ಕಲಾ ಪ್ರಕಾರಗಳಲ್ಲಿ 6 ದಶಕಗಳಿಂದ ಕಲಾಸೇವೆ ಸಲ್ಲಿಸಿದ್ದಾರೆ. 2015-16ನೇ ಸಾಲಿನಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಪ್ರಶಸ್ತಿ ಪಡೆದುಕೊಂಡ ಅವರಿಗೆ ಸುವರ್ಣ ಕರ್ನಾಟಕದ ಸಂಭ್ರಮದಲ್ಲಿ ಸುವರ್ಣ ಕರ್ನಾಟಕ ಪ್ರಶಸ್ತಿ ಲಭಿಸಿದ್ದು ಚಿಕ್ಕೋಡಿ ಭಾಗದ ಕಲಾವಿದರಿಗೆ …

Read More »

22 ಅವಿರೋಧ, 11 ಸ್ಥಾನಕ್ಕೆ ಚುನಾವಣೆ

ಸವದತ್ತಿ: ಇಲ್ಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸೋಮವಾರ ನಡೆದ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆಯಲ್ಲಿ 34 ಸ್ಥಾನಗಳ ಪೈಕಿ 22 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. ಐದು ವರ್ಷದಿಂದ ಸದಸ್ಯತ್ವ ಶುಲ್ಕ ಪಾವತಿಸದೇ ಇರುವ ನೀರಾವರಿ ಇಲಾಖೆಯಿಂದ ಅರ್ಹ ನೌಕರರಿಲ್ಲದ ಕಾರಣ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. ಆರೋಗ್ಯ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಭಾಗದ ಉಳಿದ 11 ಸ್ಥಾನಗಳಿಗೆ ಚುನಾವಣೆ ಜರುಗಿತು. 1,135 ಮತಗಳಿರುವ ಪ್ರಾಥಮಿಕ ಶಾಲಾ …

Read More »

ವಕ್ಫ್‌ ಆಸ್ತಿ ವಿವಾದ: ರೈತರಿಂದ ಅಹೋರಾತ್ರಿ ಧರಣಿ

ವಿಜಯಪುರ: ಜಿಲ್ಲೆಯ ರೈತರ ಜಮೀನಿನ ಉತಾರೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ವಿರೋಧಿಸಿ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ರಾತ್ರಿ ದೀಪಗಳನ್ನು ಬೆಳಗಿಸಿ, ಪ್ರತಿಭಟನೆ ನಡೆಸುವ ಮೂಲಕ ಆಹೋರಾತ್ರಿ ಧರಣಿ ಕೈಗೊಂಡರು.   ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ಜಿಲ್ಲಾಧಿಕಾರಿಗಳ ಕಚೇರಿಗೆ ಸಂಜೆ ಆಗಮಿಸಿದರು. ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್‌ ಅಹಮ್ಮದ್ ಅವರ …

Read More »

ಇತಿಹಾಸದಲ್ಲಿಯೇ ಪಿಎಲ್‌ಡಿ ಬ್ಯಾಂಕ್ ತನ್ನ ಶೇಅರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ- ಜಿಲ್ಲೆಯ ಇತಿಹಾಸದಲ್ಲಿಯೇ ಪಿಎಲ್‌ಡಿ ಬ್ಯಾಂಕ್ ತನ್ನ ಶೇಅರುದಾರರಿಗೆ ಡಿವಿಡೆಂಡ್ ನೀಡುವ ಮೂಲಕ ರೈತ ವರ್ಗದವರಿಗೆ ಗೋಕಾಕ ಪಿಎಲ್ಬಡಿ ಬ್ಯಾಂಕು ದೀಪಾವಳಿ ಹಬ್ಬದ ಕೊಡುಗೆ ನೀಡಿದೆ ಎಂದು ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಮಂಗಳವಾರದಂದು ಇಲ್ಲಿಯ ಎಪಿಎಂಸಿ ರಸ್ತೆಯಲ್ಲಿರುವ ದಿ. ಗೋಕಾಕ ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ಪಿ.ಎಲ್.ಡಿ.) ನಿಂದ ಪ್ರಸ್ತುತ ಸಾಲಿನ ಲಾಭಾಂಶದಲ್ಲಿ …

Read More »

ನಾವು ಗೆಲುವಿನ ಅಂತರ ನೋಡುತ್ತಿಲ್ಲ, ಗೆಲುವು ಮಾತ್ರ ನೋಡುತ್ತಿದ್ದೇವೆ : ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ

ಹಾವೇರಿ : ಮುಂದಿನ ತಿಂಗಳು ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ, ಹಾವೇರಿ ಜಿಲ್ಲೆಯ ಶಿಗ್ಗಾವಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.ಇಂದು ಹಾವೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ಅವರು ಮಾತನಾಡಿ, ನಾವು ಗೆಲುವಿನ ಅಂತರ ನೋಡುತ್ತಿಲ್ಲ. ಗೆಲುವು ಮಾತ್ರ ನೋಡುತ್ತಿದ್ದೇವೆ ಎಂದು ತಿಳಿಸಿದರು. ಈ ಬಾರಿ ಶಿಗ್ಗಾವಿಯಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಹಾವೇರಿ ಜಿಲ್ಲೆಯ …

Read More »

ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯು ಆಸ್ತಿ ವಶಕ್ಕಾಗಿ ರೈತರಿಗೆ ನೋಟಿಸ್‌ ನೀಡಿರುವ ಸಂಬಂಧ ಅಲ್ಲಿಗೆ ಭೇಟಿ ನೀಡಿ ನೊಂದ ರೈತರ ಅಹವಾಲು ಆಲಿಸುವ ಬಿಜೆಪಿ ತಂಡದ ಬಗ್ಗೆ ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ರಚಿಸಿದ್ದ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪುನಾರಚನೆ ಮಾಡಿದ್ದಾರೆ.   ಈಗಾಗಲೇ ಇರುವ ಸದಸ್ಯರ ಜೊತೆಗೆ ಸಂಸದ ರಮೇಶ್‌ ಜಿಗಜಿಣಗಿ, ಶಾಸಕ …

Read More »

ಕರಾಳ ದಿನಕ್ಕೆ ಅವಕಾಶ ಇಲ್ಲ: ರಾಜೇಶ ಬುರ್ಲಿ

ಕಾಗವಾಡ: ಪ್ರತಿಯೊಬ್ಬರು ಮಾತೃಭಾಷಾಭಿಮಾನ ಹೊಂದಿರಬೇಕು. ಆದರೆ ಇತರ ಭಾಷೆಗಳನ್ನು ದ್ವೇಷಿಸಬಾರದು. ಎಲ್ಲರೂ ಸೇರಿ ಕರ್ನಾಟಕ ರಾಜೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ. ಕರಾಳ ದಿನಕ್ಕೆ ಅವಕಾಶ ಇಲ್ಲ‌ ಎಂದು ತಹಶೀಲ್ದಾರ್‌ ರಾಜೇಶ ಬುರ್ಲಿ ಹೇಳಿದರು. ಶುಕ್ರವಾರ ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಮಂಗಸೂಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕುರಿತು ನಡೆದ ಶಾಂತಿ ಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.   ಮರಾಠಿ ಭಾಷಿಕರೇ ಹೆಚ್ಚಾಗಿರುವ ಮಂಗಸೂಳಿ ಗ್ರಾಮದಲ್ಲಿ ಕಳೆದ ಅನೇಕ ವರ್ಷಗಳಿಂದ ನ.1 …

Read More »

ವಕ್ಫ್‌ ಬೋರ್ಡ್‌-ರೈತರ ಜಟಾಪಟಿ, ಸಚಿವ ಎಂ.ಬಿ.ಪಾಟೀಲ್‌ ಮಹತ್ವದ ಮಾಹಿತಿ

ವಿಜಯಪುರ ಜಿಲ್ಲೆಯಲ್ಲಿನ ರೈತರಿಗೆ ವಕ್ಫ್‌ ಬೋರ್ಡ್‌ ನೋಟಿಸ್‌ ನೀಡಿದ್ದು, ಹಲವು ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡಿದ್ದ ಭೂಮಿಯು ವಕ್ಫ್‌ ಬೋರ್ಡ್‌ಗೆ ಸೇರಿದ್ದು ಎಂದು ನೋಟಿಸ್‌ನಲ್ಲಿ ತಿಳಿಸಿದೆ. ಇದೇ ವಿಚಾರವಾಗಿ ವಕ್ಫ್‌ ಹಾಗೂ ರೈತರ ನಡುವೆ ಜಟಾಪಟಿ ಮುಂದುವರಿದಿದೆ. ಮತ್ತೊಂದೆಡೆ ಇದು ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿದೆ. ವಕ್ಫ್‌ ಬೋರ್ಡ್‌ನಿಂದ ರೈತರಿಗೆ ನೋಟಿಸ್‌ ನೀಡಿರುವ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಇದೇ ವಿಚಾರವಾಗಿ ಕಾಂಗ್ರೆಸ್‌ …

Read More »