Breaking News

ಜಿಲ್ಲೆ

ಏಕಾಏಕಿ ಶಾಲೆಯ ಮೈದಾನಕ್ಕೆ ಬಂದು ಬಿದ್ದ ಅನಾಮಧೇಯ ಡ್ರೋನ್…!!! ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ಶಾಲಾ ಸಿಬ್ಬಂದಿ

  ಏಕಾಏಕಿ ಶಾಲೆಯ ಮೈದಾನಕ್ಕೆ ಬಂದು ಬಿದ್ದ ಅನಾಮಧೇಯ ಡ್ರೋನ್… ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ಶಾಲಾ ಸಿಬ್ಬಂದಿ ಭೂತರಾಮನಹಟ್ಟಿ ಬಳಿಯ ಫಿನಿಕ್ಸ್ ಶಾಲೆಯಲ್ಲಿ ಘಟನೆ ಕಾಕತಿ ಪೊಲೀಸರಿಂದ ಪರಿಶೀಲನೆ ಶಾಲಾ ಆವರಣದಲ್ಲಿ ಬಿದ್ದ ಅನಾಮಧೇಯ ಡ್ರೋನ್ ನಿಂದ ಎರಡು ಗಂಟೆಗಳ ಕಾಲ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಕಾಲ ಕಳೆದ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯ ಫಿನಿಕ್ಸ್ ಶಾಲೆಯಲ್ಲಿ ಸೋಮವಾರ ನಡೆದಿದೆ. ಶಾಲೆ ಬಿಡುವ ಸಂದರ್ಭದಲ್ಲಿ ಏಕಾಏಕಿ ಮೈದಾನದಲ್ಲಿ ಬಿದ್ದ …

Read More »

ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗಾಗಿ 100 ಕೋಟಿ

100 ಕೋಟಿ…ಚರ್ಚೆಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ DEVELOPMENT OF ECONOMIC TOURIST CENTRE TO GLOBAL SCALE ಯೋಜನೆಯಡಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನದ ಮಂಜೂರಾಗಿದ್ದು, ದೇವಸ್ಥಾನದ ಸಕಲ ಅಭಿವೃದ್ಧಿ ಹಾಗೂ ಭಕ್ತಾದಿಗಳಿಗೆ ಮೂಲ ಸೌಕರ್ಯ ಒದಗಿಸುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಅಧಿಕಾರಿಗಳೊಂದಿಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸಂಸದರಾದ ಜಗದೀಶ ಶೆಟ್ಟರ …

Read More »

ಕಾಗವಾಡ ತಾಲೂಕಿನ ಕೂಸಿನ ಮನೆಗಳುವ ರಾಜ್ಯಕ್ಕೆ ಮಾದರಿಯಾಗಲಿ: ಜಿ ಎಸ್. ಮಠದ

ಕಾಗವಾಡ ತಾಲೂಕಿನ ಕೂಸಿನ ಮನೆಗಳುವ ರಾಜ್ಯಕ್ಕೆ ಮಾದರಿಯಾಗಲಿ: ಜಿ ಎಸ್. ಮಠದ ಅಥಣಿ: ಆರೈಕೆದಾರರು ಸಮಗ್ರ ತರಬೇತಿ ಪಡೆದುಕೊಂಡು ಕಾಗವಾಡ, ಅಥಣಿ ತಾಲೂಕಿನ ಕೂಸಿನ ಮನೆಗಳನ್ನು ರಾಜ್ಯದಲ್ಲಿ ಮಾದರಿಯಾಗಿಸಬೇಕು ಎಂದು ಸಹಾಯಕ ನಿರ್ದೇಶಕ ಜಿ.ಎಸ್.ಮಠದ ಹೇಳಿದರು. ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಅಥಣಿ, ಕಾಗವಾಡ ತಾಲೂಕಿನ ಎರಡನೇ ಹಂತದ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ರೇಣುಕಾ ಹೊಸಮನಿ ಮಾತನಾಡಿ, ಈಗಾಗಲೇ ನಾಲ್ಕು ಜನ ಆರೈಕೆದಾರರಿಗೆ …

Read More »

ವೈದ್ಯೆಗೆ ವಂಚನೆ: ಐಶ್ವರ್ಯ ಗೌಡ ಸೇರಿ ನಾಲ್ವರ ವಿರುದ್ಧ ಮತ್ತೊಂದು ಎಫ್ಐಆರ್

ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ವಂಚಿಸುತ್ತಿದ್ದ ಐಶ್ವರ್ಯ ಗೌಡ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಹಣ ಮತ್ತು ಚಿನ್ನಾಭರಣಗಳು ಸೇರಿದಂತೆ 5.03 ಕೋಟಿ ರೂ ವಂಚಿಸಿರುವುದಾಗಿ ಡಾ.ಮಂಜುಳಾ ಪಾಟೀಲ್ ಎಂಬವರು ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದು, ಐಶ್ವರ್ಯಾ ಗೌಡ, ಅವರ ಪತಿ ಹರೀಶ್ ಕೆ.ಎನ್, ಕಾರು ಚಾಲಕ ಧನಂಜಯ್ ಹಾಗೂ ಅಶ್ವಥ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿರುವ ಮಂಜುಳಾ ಪಾಟೀಲ್ ಅವರಿಗೆ …

Read More »

ಬಿಬಿಎಂಪಿ ಮುಖ್ಯ ಇಂಜಿನಿಯರ್ ಕಚೇರಿ ಮೇಲೆ ಇಡಿ ದಾಳಿ,

ಬೆಂಗಳೂರು: ಕೊಳವೆ ಬಾವಿ ಕೊರೆಯುವ ಹಾಗೂ ನೀರು ಸಂಸ್ಕರಣಾ ಘಟಕಗಳ (ಆರ್.ಒ) ಸ್ಥಾಪನೆಯಲ್ಲಿ ಹಣಕಾಸು ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ‌. ಹಡ್ಸನ್ ವೃತ್ತದ ಬಳಿಯಿರುವ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿರುವ ಚೀಫ್ ಇಂಜಿನಿಯರ್ ಕಚೇರಿಯ ಮೇಲೆ ಬೆಳಗ್ಗೆ 11 ಗಂಟೆಗೆ 7 ಜನರಿದ್ದ ಅಧಿಕಾರಿಗಳ ತಂಡ ದಾಳಿ ನಡೆಸಿ, ದಾಖಲಾತಿ ಪರಿಶೀಲನೆ …

Read More »

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು : ನಿಗದಿತ ವೇತನ, ಸರ್ಕಾರದಿಂದ ಪ್ರೋತ್ಸಾಹ ಧನಕ್ಕೆ ಆಗ್ರಹಿಸಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ‌. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯದಲ್ಲಿರುವ 42,000 ಜನ ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಹಲವು ವರ್ಷಗಳಿಂದ ಈಡೇರಿಲ್ಲ. ಆದ್ದರಿಂದ ಕೆಲಸ ಸ್ಥಗಿತಗೊಳಿಸಿ ಧರಣಿಗೆ ನಿರ್ಧರಿಸಿದ್ದೇವೆ ಎಂದು ಪ್ರತಿಭಟನಾ ನಿರತರು ತಿಳಿಸಿದರು. ಬೇಡಿಕೆಗಳೇನು? ಆಶಾ ಕಾರ್ಯಕರ್ತೆಯರಿಗೆ 15 ಸಾವಿರ ರೂ. ಗೌರವಧನ ನೀಡಬೇಕು. ನಗರ ಪ್ರದೇಶದಲ್ಲಿ …

Read More »

ನಾಲ್ಕು ಮಂತ್ರಿಗಳು ಒಂದೆಡೆ ಊಟಕ್ಕೆ ಸೇರಿದರೆ ಮಾಧ್ಯಮದವರಿಗೆ ಅದೊಂದು ಸುದ್ದಿಯೇ?C.M

ಬೆಂಗಳೂರು: ಪತ್ರಿಕಾ ಗೋಷ್ಠಿ ನಡೆಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಮೂಡ್ ನಲ್ಲಿದ್ದರೆ ಜೋಕ್ ಗಳನ್ನು ಕಟ್ ಮಾಡುತ್ತ ಮಾತಾಡುತ್ತಾರೆ. ಸತೀಶ್ ಜಾರಕಿಹೊಳಿ ಮನೆಗೆ ಅವರು ಹೊಸ ವರ್ಷದಂದು ಊಟಕ್ಕೆ ಹೋಗಿದ್ದು ಬಹಳ ಚರ್ಚೆಯಾಗುತ್ತಿದೆ. ಏನ್ಸಾರ್ ವಿಶೇಷ ಅಂತ ಕೇಳಿದರೆ, ಮಂತ್ರಿಗಳು ಶಾಸಕರು ಜೊತೆಯಾಗಿ ಊಟ ಮಾಡಿದರೆ ನಿಮಗೆ ಅದೊಂದು ಸುದ್ದಿಯೇ ಎಂದು ವಾಪಸ್ಸು ಪ್ರಶ್ನಿಸುತ್ತಾರೆ. ಉಳಿದವರು ಔತಣದಲ್ಲಿ ಯಾಕಿರಲಿಲ್ಲ ಅಂದರೆ, ಯಾರನ್ನು ಅವರು ಕರೆದಿದ್ದರೋ, ಅವರು ಮಾತ್ರ ಇದ್ದರು, ಆಹ್ವಾನ …

Read More »

ಸಿದ್ದಿ ಸಾಧನೆಗಾಗಿ ಬಬಲಾದಿ ಅಜ್ಜನವರು ಮದ್ಯವನ್ನು ಸೇವಿಸುತ್ತಿದ್ದರು,ಆದರೆ ಯಾರು ಕೂಡಾ ಮದ್ಯವನ್ನು ಸೇವಿಸಬಾರದು:ಗುರು ಸಿದ್ದರಾಮಯ್ಯ ಅಜ್ಜನವರು

ಚಿಕ್ಕೋಡಿ:ಬಬಲಾದಿಯ ಸದಾಶಿವ ಅಜ್ಜನವರು ಮುಂದೆ ಆಗುವುದನ್ನು ಹೇಳಿದ್ದಾರೆ. ಹಿಂದೆ ಆಗಿ ಹೋಗಿದ್ದನ್ನು ಬರೆದಿಟ್ಟಿದ್ದಾರೆ. ಅವರ ಕಾರ್ಯಸಿದ್ದಿಗಾಗಿ ಮದ್ಯವನ್ನು ಸೇವಿಸುತ್ತಿದ್ದರು. ಆದರೆ ಯಾರು ಕೂಡಾ ಮದ್ಯವನ್ನು ಸೇವಿಸಬಾರದೆಂದು ಮೂಲಮಹಾ ಸಂಸ್ಥಾನ ಮಠದ ಬಬಲಾದಿಯ ಒಡೆಯರಾದಂತಹ ಶ್ರೀಗುರು ಸಿದ್ದರಾಮಯ್ಯ ಅಜ್ಜನವರು ಹೇಳಿದರು. ಅವರು ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ರುದ್ರ ಭೂಮಿಯ ಉದ್ಘಾಟನೆ ಹಾಗೂ ಬಿಲ್ವಪತ್ರೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಲಕ್ಷ್ಮೀದೇವಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.ಸದ್ಯದ ಪ್ರಪಂಚದಲ್ಲಿ ಒಂದು …

Read More »

ರಾಜ್ಯದಲ್ಲಿ ಹೊಸ ಎಚ್.ಎಂ.ಪಿ. ವೈರಸ್ ; ಲಾಕಡೌನ್ ಆಗುತ್ತಾ???

ರಾಜ್ಯದಲ್ಲಿ ಹೊಸ ಎಚ್.ಎಂ.ಪಿ. ವೈರಸ್ ; ಲಾಕಡೌನ್ ಆಗುತ್ತಾ??? ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿದ್ದೇನು?? ರಾಜ್ಯದಲ್ಲಿ ಹೊಸ ಎಚ್.ಎಂ.ಪಿ. ವೈರಸ್ ಯಾವುದೇ ರೀತಿ ಭಯ ಪಡುವ ಅಗತ್ಯತೆಯಿಲ್ಲ ಎಚ್ಚರಿಕೆಯಿಂದ ಇರಬೇಕು ಅಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಹೇಳಿಕೆ ಚಳಿಗಾಲದಲ್ಲಿ ಸಹಜವಾಗಿ ಶೀತ, ಕೆಮ್ಮು, ಕಫ ಇದ್ದೇ ಇರುತ್ತೆ. ಆದರೆ ಇಂತಹ ಆರೋಗ್ಯ ಲಕ್ಷಣ ಹೆಚ್ಎಂಪಿವಿ ಪ್ರಕರಣವಲ್ಲ. . 2001ರಲ್ಲಿ ಪ್ರಥಮ ಬಾರಿಗೆ ಹೆಚ್ಎಂಪಿ ವೈರಸ್ ಪತ್ತೆಹಚ್ಚಲಾಗಿದೆ. 8 …

Read More »

ಬೆಳಗಾವಿ ಜಿಲ್ಲಾಡಳಿತದ ವಿರೋಧ ನಡುವೆಯೂ ಸಂಭಾಜಿ ಮಹಾರಾಜ ಪ್ರತಿಮೆ ಅನಾವರಣ

ಬೆಳಗಾವಿ: ಜಿಲ್ಲಾಡಳಿತದ ವಿರೋಧದ ನಡುವೆಯೂ ಭಾನುವಾರ ರಾತ್ರಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಂಡಿತು. ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಶಿವೇಂದ್ರರಾಜೇ ಭೋಸ್ಲೆ, ಶಾಸಕ ಅಭಯ್ ಪಾಟೀಲ ಸೇರಿ ಸಾವಿರಾರು ಜನರು ಇದಕ್ಕೆ ಸಾಕ್ಷಿಯಾದರು. ಕಳೆದ ಐದಾರು ದಿನಗಳಿಂದ ಬೆಳಗಾವಿಯ ಅನಗೋಳದ ಸಂಭಾಜಿ ವೃತ್ತದಲ್ಲಿ 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಶಾಸಕ ಅಭಯ ಪಾಟೀಲ ಹಾಗೂ ಪಾಲಿಕೆ ಸದಸ್ಯರು ವಿಶೇಷ ತಯಾರಿ ನಡೆಸಿದ್ದರು. ಆದರೆ, ಇದಕ್ಕೆ …

Read More »