Breaking News

ಜಿಲ್ಲೆ

ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ!

ಬನಹಟ್ಟಿಯಲ್ಲಿ ವಿಚಿತ್ರ ಘಟನೆ… ಅರಳಿ ಮರ ಕಡಿಯಲು ಹೋದವರಿಗೆ ಆಂಜನೇಯನ ದರ್ಶನ! ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಸೋಮವಾರಪೇಟೆಯ ನಾಮದೇವ ಗಲ್ಲಿಯಲ್ಲಿ ಇರುವ ಹನುಮ ದೇವಾಲಯದಲ್ಲಿ ಧಾರ್ಮಿಕ ನಂಬಿಕೆಗಳನ್ನು ಪುಷ್ಟಿಪಡಿಸುವ ರೀತಿಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ದೇವಸ್ಥಾನದ ಜೀರ್ಣೋದ್ಧಾರದ ಭಾಗವಾಗಿ ಮುಂಭಾಗದಲ್ಲಿದ್ದ ಅರಳಿ ಮರವನ್ನು ಕಡಿದು ಕಟ್ಟಡ ನಿರ್ಮಿಸಲು ಆಡಳಿತ ಸಮಿತಿ ಮುಂದಾಗಿತ್ತು. ಮರ ಕಡಿತದ ವೇಳೆ ಮರದ ಕಾಂಡ ಕಡಿದು, ಮುಂದಿನ ಭಾಗವನ್ನು ಕತ್ತರಿಸಲು ಪ್ರಯತ್ನಿಸಿದಾಗ ಗರಗಸ ಸೇರಿದಂತೆ ಬಳಸಿದ …

Read More »

ಸಿಂಗದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ಶಿಷ್ಟಾಚಾರ ಉಲ್ಲಂಘಿಸಿ ಆಯೋಜಿಸಲಾಗಿದೆ’: ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಗಂದೂರು ಸೇತುವೆ ಲೋಕಾರ್ಪಣೆ ಹಾಗೂ ವಿವಿಧ ಯೋಜನೆಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಶಿವಮೊಗ್ಗದ ಈ ಲೋಕಾರ್ಪಣೆ ಕಾರ್ಯಕ್ರಮದ ಬಗ್ಗೆ ಬೇರೆ ಮೂಲದಿಂದ ತಿಳಿದುಕೊಂಡಿದ್ದೇನೆ. ಬಳಿಕ ನಾನು ವೈಯಕ್ತಿಕವಾಗಿ ಮಾತನಾಡುವುದರ ಜೊತೆಗೆ ಜು.11ರಂದು ಕೇಂದ್ರ ರಸ್ತೆ ಸಾರಿಗೆ ಸಚಿವರಿಗೆ ಪತ್ರ ಬರೆದು ವಿಜಯಪುರದಲ್ಲಿ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ಶಿವಮೊಗ್ಗದ ಕಾರ್ಯಕ್ರಮವನ್ನು ಮುಂದೂಡುವಂತೆ ಮನವಿ ಮಾಡಿದ್ದೆನು. …

Read More »

ಪಾರ್ಟಿಯ ವೇಳೆ ಸ್ನೇಹಿತರು ಯುವಕನೊಬ್ಬನ ಮೇಲೆ ಹಲ್ಲೆ

ಬೆಂಗಳೂರು : ಎಣ್ಣೆ ಪಾರ್ಟಿಯಲ್ಲಿ ಜೊತೆಗೂಡಿದ ಸ್ನೇಹಿತರು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹೊಡೆದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಜುಲೈ 11ರಂದು ರಾತ್ರಿ ಚಾಮರಾಜಪೇಟೆ ಠಾಣೆ ವ್ಯಾಪ್ತಿಯ ರುದ್ರಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿದ್ದು, ದುಷ್ಕರ್ಮಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ತೇಜಸ್ (24) ಎಂಬಾತನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ನೇಹಿತನ ಸ್ನೇಹಿತರಿಂದ ಹಲ್ಲೆ : ಆಟೋ ಚಾಲಕನಾಗಿದ್ದ ತೇಜಸ್, ಶುಕ್ರವಾರ ರಾತ್ರಿ ಕೆಲಸ ಮುಗಿದ ಬಳಿಕ ಸ್ನೇಹಿತ ಸಂತೋಷ್ ಜೊತೆ ರುದ್ರಪ್ಪ …

Read More »

ಪಂಚಮಸಾಲಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ಪ್ರಕರಣ: ಏಕ ಸದಸ್ಯ ಪಿಠದ ತನಿಖೆ ಆದೇಶ ಎತ್ತಿ ಹಿಡಿದ ಹೈಕೋರ್ಟ್

ಚಿಕ್ಕೋಡಿ (ಬೆಳಗಾವಿ) : ಕಳೆದ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಸಮಯದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಟನೆಕಾರರ ಮೇಲೆ ನಡೆಸಿದ ಲಾಠಿ ಚಾರ್ಜ್ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್​ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ. ಈ ಮೂಲಕ ಸರ್ಕಾರದ ಅರ್ಜಿಯನ್ನು ಇತ್ಯರ್ಥಪಡಿಸಿದೆ. ಇದರಿಂದ ನಮಗೆ ಎರಡನೇ ಬಾರಿಗೆ ಕಾನೂನಾತ್ಮಕವಾಗಿ ಜಯ ಸಿಕ್ಕಿದೆ ಎಂದು ಕೂಡಲಸಂಗಮ ಪೀಠದ ಪಂಚಮಸಾಲಿ ಸಮಾಜದ ಜಗದ್ಗುರು ಬಸವ …

Read More »

ಸಿಗ್ನಲ್‌ನಲ್ಲಿ ದಾರಿ ಬಿಡದಿದ್ದಕ್ಕೆ ಡೆಲಿವರಿ ಬಾಯ್ ಮೇಲೆ ಮೂವರಿಂದ ಹಲ್ಲೆ

ಬೆಂಗಳೂರು: ರಸ್ತೆ ಸಿಗ್ನಲ್‌ನಲ್ಲಿ ದಾರಿ ಬಿಡಲಿಲ್ಲ ಎಂದು ಫುಡ್​​ ಡೆಲಿವರಿ ಎಕ್ಸಿಕ್ಯೂಟಿವ್ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೋದಿ ಆಸ್ಪತ್ರೆ ಸಿಗ್ನಲ್ ಬಳಿ ನಡೆದಿದ್ದು, ಪೀಮ್‌ರಾಮ್ ಎಂಬಾತನ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ರಾಜಸ್ಥಾನ ಮೂಲದ ಪೀಮ್‌ರಾಮ್ ನಗರದಲ್ಲಿ ಫುಡ್​​ ಡೆಲಿವರಿ ಎಕ್ಸಿಕ್ಯೂಟಿವ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಭಾನುವಾರ ರಾತ್ರಿ ಮೋದಿ ಆಸ್ಪತ್ರೆ ಬಳಿ ರೆಡ್ ಸಿಗ್ನಲ್ ಇದ್ದಾಗ ಬೈಕ್ ನಿಲ್ಲಿಸಿದ್ದ. …

Read More »

ಮದುವೆಯಾದ ಖುಷಿಗೆ ಪಾರ್ಟಿ: ಚಿಕನ್ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯ

ಬೆಳಗಾವಿ: ಮದುವೆಯಾದ ಖುಷಿಗೆ ಯುವಕನೊಬ್ಬ ತನ್ನ ಸ್ನೇಹಿತರಿಗೆ ಎಣ್ಣೆ ಹಾಗೂ ನಾನ್ ವೆಜ್ ಪಾರ್ಟಿ ಇಟ್ಟುಕೊಂಡಿದ್ದ. ಈ ಪಾರ್ಟಿಯಲ್ಲಿ ಚಿಕನ್ ಪೀಸ್ ಜಾಸ್ತಿ ಹಾಕಲಿಲ್ಲ ಅಂತಾ ಸಣ್ಣ ಕಾರಣಕ್ಕೆ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಯರಗಟ್ಟಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ. ಯರಗಟ್ಟಿಯ ವಿನೋದ ಮಲಶೆಟ್ಟಿ(25) ಕೊಲೆಯಾದ ಯುವಕ. ವಿನೋದ ಸ್ನೇಹಿತ ಅಭಿಷೇಕ ಕೊಪ್ಪದ ಅವರ ಮದುವೆ ಎರಡು ತಿಂಗಳ ಹಿಂದೆಯಷ್ಟೇ ಆಗಿತ್ತು. ಅಂದಿನಿಂದ ಆತನ ಸ್ನೇಹಿತರು ಪಾರ್ಟಿ …

Read More »

ಶಾಸಕರ ಜೊತೆಗಿನ ಒನ್ ಟು ಒನ್ ಸಭೆ ಬಳಿಕ ಇದೀಗ ಸುರ್ಜೇವಾಲರಿಂದ ಮಿನಿಸ್ಟರ್​​​ ಜೊತೆ One to One ಸಭೆ

ಬೆಂಗಳೂರು: ಶಾಸಕರೊಟ್ಟಿಗಿನ ಒನ್ ಟು ಒನ್ ಸಭೆ ಬಳಿಕ ಇದೀಗ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸಚಿವರ ಜೊತೆ ಒನ್ ಒನ್ ಸಭೆ ಆರಂಭಿಸಿದ್ದಾರೆ.‌ ಸಚಿವರುಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಅನ್ನೋ ಶಾಸಕರ ಆರೋಪದ ಬೆನ್ನಲ್ಲೇ ಸಚಿವರ ಜೊತೆ ಸಭೆಗೆ ನಡೆಸುತ್ತಿರೋ ಸುರ್ಜೇವಾಲ ಸೋಮವಾರ ನಾಲ್ವರು ಸಚಿವರ ಜೊತೆ ಮಾತುಕತೆ ನಡೆಸಿದರು. ಶಾಸಕರ ಜೊತೆಗಿನ ಸಭೆಯಲ್ಲಿ ಸಚಿವರು ಸರಿಯಾಗಿ ಸ್ಪರ್ಧಿಸುತ್ತಿಲ್ಲ, ಉಸ್ತುವಾರಿ ಸಚಿವರುಗಳು ನಮ್ಮನ್ನು ಸರಿಯಾಗಿ ನಡೆಸಿಕೊಳ್ತಿಲ್ಲ, ನಮ್ಮ ಲೆಟರ್ ಗಳಿಗೆ ಬೆಲೆ …

Read More »

ಕಾಗವಾಡದಲ್ಲಿ ನಾರಿಶಕ್ತಿ ಸಡಗರ ಸಂಭ್ರಮ ಶಾಸಕ ರಾಜು ಕಾಗೆ ಭಾಗಿ

ಕಾಗವಾಡದಲ್ಲಿ ನಾರಿಶಕ್ತಿ ಸಡಗರ ಸಂಭ್ರಮ ಶಾಸಕ ರಾಜು ಕಾಗೆ ಭಾಗಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಇವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ನೀಡಿದ್ದು ಅದರಲ್ಲಿ ಮಹಿಳೆಯರಿಗಾಗಿ ಶಕ್ತಿ ಯೋಜನೆ, ಯಶಸ್ವಿಯಾಗಿದ್ದೆ. ರಾಜ್ಯದ ಒಟ್ಟು ಜನಸಂಖ್ಯೆ 6 ಕೋಟಿ ಅದರಲ್ಲಿಯ 3.50 ಕೋಟಿ ಮಹಿಳೆಯರಿದ್ದು ಕಳೆದ 20 ತಿಂಗಳದಲ್ಲಿ 500 ಊಟಿ ಮಹಿಳೆಯರು ಬಸವದಲ್ಲಿ ಪ್ರಯಾಣ ಬೆಳೆಸಿದ್ದಾರೆ. ರಾಜ್ಯ ಸರ್ಕಾರದ …

Read More »

ಸಾವಳಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ

ಸಾವಳಗಿ ಪೊಲೀಸರ ಭರ್ಜರಿ ಕಾರ್ಯಾಚರಣೆ ₹5.55 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳೊಂದಿಗೆ 4 ಜನ ಕಳ್ಳರ ಬಂಧನ ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 4 ಜನ ಬೈಕ್ ಕಳ್ಳರನ್ನು ಬಂಧಿಸಿದ ಪೊಲೀಸರು ಒಟ್ಟು ₹5.55 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಎಸ್ಪಿ ಅಮರನಾಥರೆಡ್ಡಿ ಅವರ ಮಾರ್ಗದರ್ಶನದಲ್ಲಿ ಜಮಖಂಡಿ ಡಿವೈಎಸ್ಪಿ ಸೈಯದ್ ರೋಷ್ ಮತ್ತು ಸಿಪಿಐ ಮಲ್ಲಪ್ಪ …

Read More »

ಇಬ್ಬರು ಆರೋಪಿಗಳ ಬಂಧನ; ಎಸ್ಪಿ.ಡಾ.ಭೀಮಾಶಂಕರ್ ಗುಳೇದ್

ಇಬ್ಬರು ಆರೋಪಿಗಳ ಬಂಧನ; ಎಸ್ಪಿ.ಡಾ.ಭೀಮಾಶಂಕರ್ ಗುಳೇದ್ ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಜಾನಪದ ಗಾಯಕ ಮಾರುತಿ ಲಕ್ಕೆ ನಡೆದ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುತಿ ಅವರ ತಂದೆ ನೀಡಿದ ದೂರಿನ ಮೇರೆಗೆ ರಾಯಬಾಗ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳಾದ ಸಿದ್ರಾಮನಿ ಮತ್ತು ಆಕಾಶ ಪೂಜಾರಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. …

Read More »