Breaking News

ಜಿಲ್ಲೆ

.‌ಗೋವಾ ಗಡಿಯಿಂದ ಗದಗ ನಗರಕ್ಕೆ ತಲಾ ಒಬ್ಬರಿಗೆ ಬರೋಬ್ಬರಿ 3 ಸಾವಿರ ರೂಪಾಯಿ ದರ ಕಾರ್ಮಿಕರು ಬಸ್ ತಡೆದು ಕಾರ್ಮಿಕರು ಬಸ್ ತಡೆದುಆಕ್ರೋಶ

ಗದಗ: ಲಾಕ್‌ಡೌನ್ ನಿಂದಾಗಿ ಗೋವಾದಲ್ಲಿ ಸಿಲುಕಿರುವ ಕರ್ನಾಟಕದ ಮೂಲದ ಕಾರ್ಮಿಕರು ಪರದಾಡುತ್ತಿದ್ದಾರೆ.‌ ರಾಜ್ಯ ಸರ್ಕಾರ ಕಾರ್ಮಿಕರನ್ನು ರಾಜ್ಯಕ್ಕೆ ಕರೆ ತರಲು ಬಸ್ ವ್ಯಸವ್ತ ಮಾಡಿದೆ. ಆದ್ರೆ ದುಪ್ಪಟ್ಟು ಹಣ ಪಡೆಯುತ್ತಿದೆ‌ ಎಂಬ ಆರೋಪ ಕೇಳಿ ಬಂದಿದೆ‌. ಕೆಎಸ್ಆರ್​ಟಿಸಿ ಸಂಸ್ಥೆ ಪ್ರಯಾಣ ದರವನ್ನು ಏರಿಕೆ ಮಾಡಿ ನಮಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ ಅಂತ ಬಸ್ ಮುಂದೆಯೇ ಗೋವಾದಲ್ಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಗೋವಾ ಗಡಿಯಿಂದ ಗದಗ ನಗರಕ್ಕೆ ತಲಾ ಒಬ್ಬರಿಗೆ ಬರೋಬ್ಬರಿ …

Read More »

ಕೊಗನೊಳ್ಳಿ ಚೆಕ್ ಪೊಸ್ಟ್ ಗೆ ಭೇಟಿ ನೀಡಿದ ಕೆಪಿಪಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಎದುರು ಕಣ್ಣೀರು ಸುರಿಸಿದ ಮಹಿಳೆ

ನಿಪ್ಪಾಣಿ: ನಿನ್ನೆ ಕೊಗನೊಳ್ಳಿ ಚೆಕ್ ಪೊಸ್ಟ್ ಗೆ ಭೇಟಿ ನೀಡಿದ ಕೆಪಿಪಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಎದುರು ಕಣ್ಣೀರು ಸುರಿಸಿದ ಹಾಸನದ ಮಹಿಳೆ‌ಗೆ ಕೊನೆಗೂ ಮನೆಗೆ ತೆರಳು ಅನುಮತಿಯನ್ನು ನೀಡಲಾಗಿದೆ. ಕೊರೋನಾ ಹಿನ್ನೆಲೆ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಮಹಾರಾಷ್ಟ್ರದಿಂದ ಹಾಸನಕ್ಕೆ ತೆರಳಲು ಅನುಮತಿ ಸಿಗದೆ ಇರದ ಕಾರಣ ಕೊಗನೊಳ್ಳಿ ಚೆಕ್ ಪೊಸ್ಟ್ ಸುಮಾರು ನಾಲ್ಕು ದಿನಗಳಿಂದ ಮಹಿಳೆ‌ ಮತ್ತು ಅವರ 15 ಸದಸ್ಯರ ಕುಟುಂಬ ಪರದಾಡುತ್ತಿದ್ದರು. ಊಟ ಮತ್ತು …

Read More »

ಕ್ವಾರಂಟೈನ್‍ನಲ್ಲಿರೋ ಮಗನಿಗಾಗಿ ಓಡೋಡಿ ಬುತ್ತಿತಂದ ತಾಯಿ……..

ಯಾದಗಿರಿ: ತಾಯಿ ಈ ಜಗದ ಕಾಣಿಸುವ ದೇವರು, ತಾನು ಹೆತ್ತ ಕೂಸುಗಳು ಮುದುಕರಾದ್ರು ತಾಯಿಗೆ ಅವರು ಯಾವಾಗಲೂ ಹಸುಗೂಸುಗಳೇ. ಇಂತಹ ತಾಯಿ ಹೃದಯ ಎಲ್ಲಕ್ಕಿಂತಲೂ ಶ್ರೇಷ್ಠ ಅನ್ನೋದು ಮತ್ತೊಮ್ಮೆ ನಿಜವಾಗಿದೆ. ಅಧಿಕಾರಿಗಳ ಮತ್ತು ಕೊರೊನಾ ಭೀತಿಯ ನಡುವೆಯೂ ಕ್ವಾರಂಟೈನ್ ನಲ್ಲಿ ತನ್ನ ಮಗ ಎರಡು ದಿನದಿಂದ ಉಪವಾಸವಿರುವುದನ್ನು ತಿಳಿದ ತಾಯಿಯೊಬ್ಬಳು, ಕ್ವಾರಂಟೈನ್ ಕೇಂದ್ರ ದತ್ತ ಓಡಿಬಂದು ಬುತ್ತಿತಂದು ಹೆತ್ತ ಕರಳಿನ ಮಹತ್ವವನ್ನು ತಿಳಿಸಿದ್ದಾಳೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೂಗೂರು ಗ್ರಾಮದ …

Read More »

ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್……..

ಬೆಳಗಾವಿ/ಚಿಕ್ಕೋಡಿ: ಕೊರೊನಾ ಅಟ್ಟಹಾಸದಿಂದ ಮಾಸ್ಕ್ ಧರಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ವಿಶೇಷ ಮಾಸ್ಕ್‌ಗಳು ಲಗ್ಗೆ ಇಡುತ್ತಿವೆ. ಇದೀಗ ಬೆಳ್ಳಿ ಬಳಸಿ ಸಿದ್ಧಪಡಿಸಿರುವ ಬೆಳ್ಳಿ ಮಾಸ್ಕ್ ತಯಾರಿಸಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪೂರ ನಗರದ ಆಭರಣ ವ್ಯಾಪಾರಿ ಸಂದೀಪ್ ಸಾಂಗವಕರ ಬೆಳ್ಳಿ ಮಾಸ್ಕ್ ತಯಾರಿಸಿದ್ದಾರೆ. ವಿಶೇಷವಾಗಿ ಕೊರೊನಾ ಭೀತಿಯಲ್ಲಿ ಮದುವೆ ಆಗುತ್ತಿರುವ ನೂತನ ವಧು-ವರರಿಗಾಗಿ ಈ ಮಾಸ್ಕ್ ತಯಾರಿಸಲಾಗಿದೆ. ಮದುವೆ ಸಮಾರಂಭದಲ್ಲಿ ವಧು-ವರರೂ ಈ ಮಾಸ್ಕ್ ಧರಿಸಿ ರಿಚ್ ಆಗಿ ಮದುವೆ ಮಾಡಿಕೊಳ್ಳುವರಿಗೆ ಈ ಮಾಸ್ಕ್ …

Read More »

ಕರ್ನಾಟಕಕ್ಕೆ ಕಂಟಕವಾಗುತ್ತಿದ್ದಾರೆ ಹೊರರಾಜ್ಯ ಮತ್ತು ವಿದೇಶಗಳಿಂದ ಬಂದವರು..!

ಬೆಂಗಳೂರು, ಮೇ 16- ರಾಜ್ಯಕ್ಕೆ ಹೊರರಾಜ್ಯ ಮತ್ತು ದೇಶಗಳಿಂದ ಬಂದವರೇ ಕಂಟಕರಾಗಿ ಪರಿಣಮಿಸಿದ್ದಾರೆ. ಇದುವರೆಗಿನ ಪ್ರಕರಣಗಳಲ್ಲಿ ಹೊರಗಡೆಯಿಂದ ಬಂದ ಪ್ರಯಾಣಿಕರಿಗೆ ಹೆಚ್ಚು ಕೊರೊನಾ ಸೋಂಕು ತಗುಲಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಗುಜರಾತ್‍ನಿಂದ ರಾಜ್ಯಕ್ಕೆ ಆಗಮಿಸಿದ 55 ಪ್ರಯಾಣಿಕರು, ಮುಂಬೈ ಮತ್ತು ಮಹಾರಾಷ್ಟ್ರದಿಂದ ಬಂದ 53, ರಾಜಸ್ತಾನದ 30, ದುಬೈನ 20, ಚೆನ್ನೈನ 4, ಒರಿಸ್ಸಾದ 2, ತೆಲಂಗಾಣದಿಂದ ಬಂದ 3 ಮಂದಿಗೆ ಹಾಗೂ ಲಂಡನ್‍ನಿಂದ ಬಂದ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದೆ. …

Read More »

ರಾಜ್ಯದಲ್ಲಿ ಇಂದು 23 ಜನರಲ್ಲಿ ಕೊರೊನಾ,ಬೆಳಗಾವಿಯಲ್ಲಿ ಪಾಸಿಟೀವ್ ಕೇಸ್ ಇಲ್ಲ.

ಬೆಂಗಳೂರು: ಲಾಕ್ ಡೌನ್ ಸಡಿಲಿಕೆಗೆ ಒಂದು ದಿನ ಮಾತ್ರ ಬಾಕಿಯಿದ್ದು, ಇದೇ ವೇಳೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಕೂಡ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ರಾಜ್ಯದಲ್ಲಿ 23 ಜನರಲ್ಲಿ ಕೊವಿಡ್ ಪಾಸಿಟೀವ್ ಪತ್ತೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಬೆಳಗಿನ ಮಾಹಿತಿ ಪ್ರಕಾರ ಇಂದು ರಾಜ್ಯದಲ್ಲಿ 23 ಜನರಲ್ಲಿ ಕೊರೊನಾ ಸೋಂಕು ಪತ್ತೆ. ಬೆಂಗಳೂರಿನಲ್ಲಿ 14, …

Read More »

ನಾಲ್ಕನೇ ಹಂತದ ಲಾಕ್ ಡೌನ್ ಸ್ವಲ್ಪ ಸಡಿಲಿಕೆ ಆಗಬಹುದು :ರಮೇಶ್ ಜಾರಕಿಹೋಳಿ

ಗೋಕಾಕ ನಗರದಲ್ಲಿ ಪತ್ರಿಕಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಮೇಶ್ ಜಾರಕಿಹೋಳಿ ಅವರು ಈಗಾಗಲೇ ಮೂರು ಹಂತದ ಲಾಕ್ ಡೌನ್ ಮುಗಿದಿದೆ ನಾಲ್ಕನೇ ಹಂತದ ಲಾಕ್ ಡೌನ್ ಸ್ವಲ್ಪ ಸಡಿಲಿಕೆ ಆಗಬಹುದು ಈಗಾಗಲೇ ಜನ ಈ ಒಂದು ಮಹಾಮಾರಿ ಕರೋನ್ ವೈರಸ್ ಬಗ್ಗೆ ತಿಳಿದು ಕೊಂಡಿದ್ದಾರೆ , ಆದರೆ ಸಾಮಾಜಿಕ ಅಂತರ್ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರ ಹೇಳುವ ನಿಯಮ ಗಳನ್ನಾ ಪಾಲಿಸಿ , ಕೆಲವೊಂದು ಸಡಿಲಿಕೆ ಗಳನ್ನ ನಾಲ್ಕನೇ ಹಂತದಲ್ಲಿ ಘೋಷಣೆ …

Read More »

ಮಾಜಿ ಶಾಸಕ ವೈ.ಎಸ್.ವಿ.ದತ್ತರ ಸೇವೆಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಿದಾ

ಚಿಕ್ಕಮಗಳೂರು: ಫೇಸ್‍ಬುಕ್ ಲೈವ್ ಮೂಲಕ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪಾಠ ಮಾಡುತ್ತಿರೋ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತರ ಸೇವೆಗೆ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಫಿದಾ ಆಗಿದ್ದಾರೆ. ದತ್ತ ಅವರಿಗೆ ಪತ್ರ ಬರೆಯುವ ಮೂಲಕ ಅವರ ಸೇವೆಗೆ ಧನ್ಯವಾದ ತಿಳಿಸಿದ್ದಾರೆ. ವೃತ್ತಿ ಹಾಗೂ ಮಕ್ಕಳ ಮೇಲಿರುವ ನಿಮ್ಮ ಪ್ರೀತಿಗೆ ನನ್ನದೊಂದು ಸಲಾಂ ಎಂದು ಪತ್ರದಲ್ಲಿ ಬರೆದಿದ್ದಾರೆ. ದತ್ತ ಮೇಷ್ಟ್ರು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಪ್ರತಿ ದಿನ ಸಂಜೆ 7.30 ರಿಂದ …

Read More »

ಬೆಳ್ಳಂಬೆಳಗ್ಗೆ ರಾಜ್ಯಕ್ಕೆ ಬಿಗ್ ಶಾಕ್- ಶಿವಾಜಿನಗರದಲ್ಲಿ ಮತ್ತೆ 14 ಮಂದಿಗೆ ಕೊರೊನಾ……….

ಬೆಂಗಳೂರು: ಕೊರೊನಾ ಹಾಟ್ ಸ್ಪಾಟ್ ಆಗಿರುವ ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಇದೀಗ ಮತ್ತೆ 14 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಹೌಸ್ ಕೀಪಿಂಗ್ ಜೊತೆ ದ್ವಿತೀಯ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ 20 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಇದರಲ್ಲಿ 14 ಮಂದಿಗೆ ಪಾಸಿಟಿವ್ ಇರುವುದು ದೃಢವಾಗಿದೆ. ಶುಕ್ರವಾರ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಜನರಿಗೆ ಕೊರೊನಾ ದೃಢಪಟ್ಟಿತ್ತು. …

Read More »

ಕೊರೊನಾ ಸೋಂಕಿತ ಕೋಲಾರದಿಂದ ಎಸ್ಕೇಪ್, ಬೆಂಗಳೂರಲ್ಲಿ ಪ್ರತ್ಯಕ್ಷ………..

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಸೋಂಕಿತ ಕೋರ್ಟ್ ಉದ್ಯೋಗಿಯ ಟ್ರಾವಲ್ ಹಿಸ್ಟರಿ ಮೂರು ನಗರಗಳ ನಿದ್ದೆಗೆಡಿಸಿದೆ. ಯಾಕೆಂದರೆ ಸೋಂಕಿತನೊಬ್ಬ ಎಸ್ಕೇಪ್ ಆಗಿದ್ದು, ಎಲ್ಲರ ಕಣ್ಣುತಪ್ಪಿಸಿ ಬೆಂಗಳೂರಿಗೆ ಬಂದುಬಿಟ್ಟಿದ್ದ. ಕೊನೆಗೆ ಆರೋಗ್ಯಾಧಿಕಾರಿಗಳು ಹುಡುಕಾಟ ನಡೆಸಿ ಎಸ್ಕೇಪ್ ಆಗಿದ್ದ ಸೋಂಕಿತನ್ನು ಲಾಕ್ ಮಾಡಿ, ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸೋಲೇಶನ್ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ. ಕೋಲಾರದ ಗಾಂಧಿನಗರದಲ್ಲಿ ವಾಸವಿದ್ದ ಮಂಡ್ಯ ಮೂಲದ ಕೋರ್ಟ್ ಉದ್ಯೋಗಿಯಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡುಬಂದಿತ್ತು. ಗಂಟಲು …

Read More »