ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಕಾಟ ಬೆಂಬಿಡದೇ ಕಾಡುತ್ತಿದೆ.ಇಂದು ಮತ್ತೆ 11 ಜನ ಸೊಂಕಿತರು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 393 ಕ್ಕೇರಿದಂತಾಗಿದೆ ಬೆಳಗಾವಿ ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ 11ಜನ ಸೊಂಕಿತರ ಪೈಕಿ ನಾಲ್ಕು ಜನ ಬೆಳಗಾವಿ ನಗರದವರಾಗಿದ್ದಾರೆ. ಒಬ್ಬರು ವೀರಭದ್ರ ನಗರ ಬೆಳಗಾವಿ ವಯಸ್ಸು (48) ಸಾವು ಇನ್ನೊಬ್ಬರು ಸುಭಾಷ್ ನಗರ ,ಅನಿಗೋಳ,ಹನುಮಾನ ನಗರದಲ್ಲಿ ತಲಾ ಒಂದು ಅಥಣಿ ತಾಲ್ಲೂಕು 5 ರಾಯಬಾಗ 1 …
Read More »ಗೋಕಾಕ ರಸಗೊಬ್ಬರ ಮಳಿಗೆಯೊಂದರ ಮೇಲೆ ಕೃಷಿ ಇಲಾಖೆಯ ತಂಡ ದಾಳಿ,……………
ಗೋಕಾಕ: ರೈತರ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ಮಮದಾಪುರ ಗ್ರಾಮದ ರಸಗೊಬ್ಬರ ಮಳಿಗೆಯೊಂದರ ಮೇಲೆ ಕೃಷಿ ಇಲಾಖೆಯ ಚಿಕ್ಕೊಡಿ ವಿಭಾಗದ ಉಪನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿತು. ಜಿಲ್ಲಾಧಿಕಾರಿಗಳಿಗೆ ರೈತರು ನೀಡಿದ್ದ ದೂರನನ್ವಯ ದಾಳಿ ನಡೆಸಿದ ಅಧಿಕಾರಿಗಳು, ಅಂಗಡಿಯ ದಾಸ್ತಾನು ಮತ್ತು ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಯೂರಿಯಾ ಹಾಗೂ ರಸಗೊಬ್ಬರಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು, ಪರವಾನಿಗೆ ಇಲ್ಲದ ರಸಗೊಬ್ಬರಗಳನ್ನು ಮಾರಾಟ ಮಾಡುವುದು. ರಸಗೊಬ್ಬರಗಳನ್ನು ಪರವಾನಿಗೆಯಲ್ಲಿ ಘೋಷಿಸದೇ ಇರುವ ಸ್ಥಳಗಳಲ್ಲಿಸಂಗ್ರಹಿಸಿಟ್ಟು …
Read More »ಕೊರೊನಾಗೆ ಬೆಂಗ್ಳೂರು ತತ್ತರ- ಒಂದೇ ದಿನ 1,235 ಮಂದಿಗೆ ಸೋಂಕು
ಬೆಂಗಳೂರು: ರಾಜ್ಯದಲ್ಲಿಂದು 1,925 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 23,474 ಕ್ಕೇರಿಕೆಯಾಗಿದೆ. ಇಂದು ಸಹ ಮಹಾಮಾರಿಗೆ 38 ಮಂದಿಗೆ ಬಲಿಯಾಗಿದ್ದಾರೆ. ರಾಜಧಾನಿ ಮತ್ತೆ ಕೊರೊನಾ ಅಟ್ಟಹಾಸಕ್ಕೆ ತತ್ತರಿಸಿದ್ದು, ಇಂದು 1,235 ಮಂದಿಗೆ ಕೊರೊನಾ ಸೋಂಕು ತಗುಲಿದೆ. 23,474 ಪ್ರಕರಣಗಳಲ್ಲಿ 13,250 ಸಕ್ರಿಯ ಕೇಸ್ ಗಳಿವೆ. ಇಂದು 603 ಮಂದಿ ಡಿಸ್ಚಾರ್ಜ್ ಆಗಿದ್ದು, 38 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 243 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಬಿಡುಗಡೆಯಾದ ಬುಲೆಟಿನ್ …
Read More »ಹಾವೇರಿಯಲ್ಲಿ ಎಎಸ್‍ಐ, ವೈದ್ಯ, ಶಿಕ್ಷಕ, ಆಶಾ ಕಾರ್ಯಕರ್ತೆಯರು ಸೇರಿ 15 ಜನರಿಗೆ ಕೊರೊನಾ
ಹಾವೇರಿ: ಜಿಲ್ಲೆಯಲ್ಲಿ ಇಂದು 15 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಹಾನಗಲ್‍ನಲ್ಲಿ ಮೂವರು ಆಶಾ ಕಾರ್ಯಕರ್ತೆಯರು ಸೇರಿ ಐವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಹಾವೇರಿ ತಾಲೂಕಿನಲ್ಲಿ ಓರ್ವ ಬಾಣಂತಿ ಮಹಿಳೆ, ಓರ್ವ ಎಎಸ್‍ಐ, ಓರ್ವ ಶಿಕ್ಷಕ, ಓರ್ವ ವೈದ್ಯ ಸೇರಿದಂತೆ ಐವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಶಿಗ್ಗಾಂವಿ ಪಟ್ಟಣದ ಕಂಟೈನ್ಮೆಂಟ್ ಝೋನ್ ನ ರೋಗಿ ನಂ.9412 ಸಂಪರ್ಕದಿಂದ ಮೂವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಅಲ್ಲದೆ ರಟ್ಟೀಹಳ್ಳಿ ತಾಲೂಕಿನಲ್ಲಿ ಇಬ್ಬರಿಗೆ …
Read More »ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಸ್ಥಾನ ಸೀಲ್‍ಡೌನ್……….
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 21 ಹೊಸ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇತ್ತ ಶಿರಸಿಯ ಮಾರಿಕಾಂಬಾ ದೇವಸ್ಥಾನವನ್ನು ಒಂದು ವಾರ ಸೀಲ್‍ಡೌನ್ ಮಾಡಲಾಗಿದೆ. ಶಿರಸಿಯ ಮಾರಿಕಾಂಬಾ ದೇವಸ್ಥಾನದ ಪಕ್ಕದಲ್ಲೇ ವಾಸವಿದ್ದ ವ್ಯಕ್ತಿಗೂ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಈತ ಪ್ರತಿ ದಿನ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುತಿದ್ದ ಎನ್ನಲಾಗಿದೆ. ಹೀಗಾಗಿ ಈತನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈಗ ದೇವಸ್ಥಾನವನ್ನು ಸೀಲ್‍ಡೌನ್ ಮಾಡುವ ನಿರ್ಧಾರಕ್ಕೆ ಮಾಡಲಾಗಿದೆ. ಶಿರಸಿ …
Read More »ಪೊಲೀಸರನ್ನು ಬೆಂಬಿಡದೆ ಕಾಡುತ್ತಿದೆ ಕೊರೊನಾ………
ಬೆಂಗಳೂರು: ಕೊರೊನಾ ಮಹಾಮಾರಿ ಪೊಲೀಸರನ್ನು ಬೆಂಬಿಡದೆ ಕಾಡುತ್ತಿದ್ದು, ಇಂದು ಒಟ್ಟು 8 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಹೊಡದಾಗಿ ಎರಡು ಪೊಲೀಸ್ ಠಾಣೆಗಳು ಸೀಲ್‍ಡೌನ್ ಆಗಿವೆ. ಸಿಲಿಕಾನ್ ಸಿಟಿಯ ಮಲ್ಲೇಶ್ವರ ಹಾಗೂ ರಾಜಾಜಿ ನಗರ ಸಂಚಾರ ಪೊಲೀಸ್ ಠಾಣೆಗಳು ಸೀಲ್ ಪಟ್ಟಿಗೆ ಸೇರ್ಪಡೆಯಾಗಿದ್ದು, ನಗರದಲ್ಲಿ ಇಂದು ಒಟ್ಟು 8 ಜನರಿಗೆ ಸೋಂಕು ತಗುಲಿದೆ. ಮಲ್ಲೇಶ್ವರಂ ಠಾಣೆಯ ಇಬ್ಬರು ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 36 ವರ್ಷದ ಓರ್ವ ಕಾನ್ಸ್‍ಸ್ಟೇಬಲ್ ಮತ್ತು …
Read More »ಹಾಸನದಲ್ಲಿ ಇಂದು 13 ಮಂದಿಗೆ ಕೊರೊನಾ ಸೋಂಕು, ಒಂದು ಸಾವು…….
ಹಾಸನ: ಕೊರೊನಾ ಸೋಂಕು ಹಾಸನದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಕೂಡ 13 ಜನರಿಗೆ ಕೋವಿಡ್ ವೈರಸ್ ಹರಡಿದ್ದು, ಓರ್ವ ಸಾವನಪ್ಪಿದ್ದಾರೆ. ಅರಸೀಕೆರೆ ನಿವಾಸಿ 77 ವರ್ಷದ ವೃದ್ಧ ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಸೋಂಕಿತ ನಿಮೋನಿಯಾ, ರಕ್ತದ ಒತ್ತಡ ಸೇರಿದಂತೆ ಇತರೆ ಸಮಸ್ಯೆಯಿಂದ ಬಳಲುತ್ತಿದ್ದು, ಜುಲೈ 3ರಂದು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಟಲು ದ್ರವ ಪರೀಕ್ಷೆ ಮಾಡಿದ್ದು, ಈ ವೇಳೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಚಿಕಿತ್ಸೆ ನೀಡಲಾಗುತ್ತಿದ್ದರೂ …
Read More »ಸಂಡೆ ಲಾಕ್‍ಡೌನ್‍ಗೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ, ಎಲ್ಲೆಲ್ಲಿ ಏನೇನಾಯ್ತು ಇಲ್ಲಿದೆ ಡೀಟೇಲ್ಸ್
ಬೆಂಗಳೂರು ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಶನಿವಾರ ಸಂಜೆಯಿಂದ ಜಾರಿಯಾದ 36 ಗಂಟೆಗಳ ಸಂಪೂರ್ಣ ಲಾಕ್ ಡೌನ್ ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಜನಜೀವನ ಮಂಕಾಗಿದೆ. ಕರೊನಾ ಹಾಟ್ಸ್ಪಾಟ್ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದು, ನಿಯಮ ಉಲ್ಲಂಘಿಸುವವರ ಕಣ್ಗಾವಲಿಗೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ತರಕಾರಿ, ಮೀನು, ಮಾಂಸ ಮಾರಾಟಕ್ಕೂ ಬ್ರೇಕ್ ಮಂಗಳೂರಿನಲ್ಲಿ ಹಾಲು, ಪೇಪರ್, …
Read More »ಆಶಾ ಕಾರ್ಯ ಕರ್ತೆಯರಿಗೆ ರಕ್ಷಣೆ ಕೊಡದ ಸರ್ಕಾರ. ಸರ್ಕಾರದ ಮೇಲೆ ಕಾರ್ಯ ಕರ್ತೆಯರ ಆಕ್ರೋಶ..
ಮಂಡ್ಯ: ನಾವು ಜನರಿಗೆ ಒಳ್ಳೆಯದು ಹೇಳಿದರೂ ಅವರು ಕೇಳುವುದಕ್ಕೆ ಸಿದ್ಧರಿಲ್ಲ. ಹೀಗಾಗಿ ನಮಗೆ ರಕ್ಷಣೆ ಕೊಡಿ. ನಿಮಗೆ ರಕ್ಷಣೆ ಕೊಡಲು ಆಗಲ್ಲ ಅಂದರೆ ನಮ್ಮನ್ನ ಕೋವಿಡ್ ಕೆಲಸದಲ್ಲಿ ಬಳಸಿಕೊಳ್ಳಬೇಡಿ ಎಂದು ಆಶಾ ಕಾರ್ಯಕರ್ತೆಯರು ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಆಗ್ರಹಿಸಿದ್ದಾರೆ. ಆಶಾ ಕಾರ್ಯಕರ್ತೆಯ ಮೇಲೆ ಮತ್ತೊಂದು ಹಲ್ಲೆ ಪ್ರಕರಣ ನಡೆದಿದ್ದು, ಅಂತರ ಕಾಪಾಡಿಕೊಳ್ಳಿ ಎಂದಿದ್ದಕ್ಕೆ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮಾಡಲಾಗಿದೆ. ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮೊಸಳೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. …
Read More »ಕೋವಿ ಡ ಆಸ್ಪತ್ರೆಗೆ ಹೋಗಲು ಕಿರಿಕ ಮಾಡಿರುವ J.D.S.ಮುಖಂಡ
ಮಂಡ್ಯ: ಕೊರೊನಾ ಸೋಂಕು ದೃಢವಾದರೂ ಜೆಡಿಎಸ್ ಮುಖಂಡರೊಬ್ಬರು ಮಂಡ್ಯದ ಕೋವಿಡ್ ಆಸ್ಪತ್ರೆಗೆ ಹೋಗಲು ಕಿರಿಕ್ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಸೋಂಕಿತ ಮುಖಂಡ ಆಸ್ಪತ್ರೆಗೆ ಹೋಗಲು ರಂಪಾಟ ಮಾಡಿದ್ದಾರೆ. ನಾನು ಆಸ್ಪತ್ರೆಗೆ ಬರಲ್ಲ. ಮನೆಯಲ್ಲೇ ಐಸೋಲೇಷನ್ ಆಗುತ್ತೇನೆಂದು ಪಟ್ಟು ಹಿಡಿದ್ದರು. ಅಲ್ಲದೇ ಆರೋಗ್ಯ ಸಚಿವ ಶ್ರೀರಾಮುಲು ಅವರ ಜೊತೆ ನಾನು ಮಾತನಾಡಿದ್ದೇನೆ. ಹೀಗಾಗಿ ನಾನು ಮನೆಯಲ್ಲೇ ಇರುತ್ತೀನಿ ಎಂದು ಕಿರಿಕ್ ಮಾಡಿದ್ದಾರೆ. ಅಷ್ಟೇ …
Read More »
Laxmi News 24×7