Breaking News

ಜಿಲ್ಲೆ

ಕೊರೊನಾ ಅಧಿಕಾರಸ್ತರನ್ನು, ಮಂತ್ರಿಗಳನ್ನು ಬಲಿ ತೆಗೆದುಕೊಳ್ಳಲಿದೆ: ಕೋಡಿಶ್ರೀ ಭವಿಷ್ಯ

ಹಾಸನ: ಕೊರೊನಾದಿಂದಾಗಿ ಜಾಗತಿಕ ಮಟ್ಟದಲ್ಲಿ ರಾಜರಿಗೆ ರಾಜೀಕ ಭೀತಿ ಉಂಟಾಗಲಿದ್ದು, ರಾಜರಿಗೆ ತೊಂದರೆ, ನೋವು ಕಾಯಿಲೆ, ಅಪಮಾನ, ರಾಜಭೀತಿ ಉಂಟಾಗಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ. ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಕೋಡಿಮಠದಲ್ಲಿ ಮಾತನಾಡಿದ ಶಿವಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ರಾಜಭೀತಿ ಉಂಟಾಗಲಿದೆ. ಬರುವ ದಿನಗಳು ಹೆಚ್ಚು ಅಗೋಚರವಾಗಲಿದೆ ಭೂಮಿ ನಡುಗಲಿದೆ, ವಿಪರೀತ ಮಳೆಯಾಗಲಿದೆ ಎಂದು ಹೇಳಿದ್ದಾರೆ. ಈ ಕೊರೊನಾ ದೊಡ್ಡದೊಡ್ಡ ಜನರನ್ನು ಅಧಿಕಾರಸ್ತರನ್ನು ಮತ್ತು …

Read More »

ಭಗೀರಥ ಕಾಮೇಗೌಡರಿಗೆ ಕೊರೊನಾ ಪಾಸಿಟಿವ್……………

ಮಂಡ್ಯ: ಆಧುನಿಕ ಭಗೀರಥ ಎಂದೇ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಕಾಮೇಗೌಡರಿಗೆ ಕೊರೊನಾ ವೈರಸ್ ಬಂದಿದೆ. ಸ್ವತಃ ಖರ್ಚಿನಿಂದ ಕೆರೆಗಳನ್ನು ನಿರ್ಮಿಸಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಪ್ರಶಂಸೆ ಪಡೆದಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರಿಗೆ ಕೊರೊನಾ ಪಾಸಿಟಿವ್ ಇಂದು ಧೃಡವಾಗಿದೆ.ಕಾಮೇಗೌಡರು ಕಳೆದ 15 ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆರಂಭದಲ್ಲಿ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

ಬೆಳಗಾವಿ:  ಜಿಲ್ಲೆಯ ಪೊಲೀಸ್ ಪೇದೆಗಳಿಗೂ ಕೋವಿಡ್ ಕಾಟ ಆರಂಭ……….

ಬೆಳಗಾವಿ:  ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಪೊಲೀಸ್ ಪೇದೆಗಳಿಗೂ ಕೋವಿಡ್ ಕಾಟ ಆರಂಭವಾಗಿದೆ. ಮಚ್ಛೆಯಲ್ಲಿರುವ ಕೆಎಸ್‌ಆರ್‌ಪಿ 2 ನೇ ಪಡೆಯ ಓರ್ವ ಮಹಿಳಾ ಪೇದೆ ಸೇರಿ 12 ಕೆಎಸ್‌ಆರ್‌ಪಿ ಸಿಬ್ಬಂದಿಗೆ ಸೋಂಕು ತಗುಲಿದೆ. ಸೋಂಕು ತಗುಲಿದ ಸಿಬ್ಬಂದಿ ಎಲ್ಲರೂ  ಜಿಲ್ಲೆಯ ಗಡಿ ಭಾಗದ ಕಾಗವಾಡ ಮತ್ತು ಕಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ  ನಿಭಾಯಿಸಿದ್ರು. ಕೆಎಸ್ಆರ್ ಪಿ ಎರಡನೇ ಬೆಟಾಲಿಯನ್ ನಲ್ಲಿ 70 ಮಹಿಳಾ ಸಿಬ್ಬಂದಿ ಸೇರಿ …

Read More »

ನಾನು ಗಂಡು ಆದ್ರೆ ಅಷ್ಟೇನು ಕೆಟ್ಟದಾಗಿ ಕಾಣಲ್ಲ – ‘ರಣಧೀರ’ ನಟಿ

ಹೈದರಾಬಾದ್: ನಟಿ ಖುಷ್ಬೂ ನಟನೆ ಜೊತೆಗೆ ರಾಜಕೀಯದಲ್ಲಿಯೂ ಬ್ಯುಸಿಯಾಗಿದ್ದಾರೆ. ಅಲ್ಲದೇ ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ ಖುಷ್ಬೂ ರೂಪಾಂತರದ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿರುವ ಖುಷ್ಬೂ ಇತ್ತೀಚಿಗೆ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಆ ಫೋಟೋ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಯಾಕೆಂದರೆ ಆ ಫೋಟೋದಲ್ಲಿ ನಟಿ ಖುಷ್ಬೂ ಪುರುಷ ಅವತಾರತಾಳಿದ್ದಾರೆ. ಹೌದು..ಫೇಸ್ ಆಪ್ ಮೂಲಕ ನಟಿ ಖುಷ್ಬೂ ತಮ್ಮ ಫೋಟೋವನ್ನು ಎಡಿಟ್ ಮಾಡಿ ಟ್ವಿಟ್ಟರಿನಲ್ಲಿ …

Read More »

4 ತಿಂಗಳ ನಂತರ ರಾಜ್ಯಪಾಲರನ್ನು ಭೇಟಿಮಾಡಿದ ಸಿಎಂ, ಮಹತ್ವದ ಮಾತುಕತೆ

ಬೆಂಗಳೂರು,ಜು.22- ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ, ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ಭೂ ಸುಧಾರಣಾ ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಮೇಲ್ನೋಟಕ್ಕೆ ಇದೊಂದು ಸೌಹಾರ್ದಯುತವಾದ ಭೇಟಿ ಎಂದು ಹೇಳಲಾಗಿದೆ. ಸುಮಾರು ನಾಲ್ಕು ತಿಂಗಳ ನಂತರ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿಯಾದ ಸಿಎಂ ಯಡಿಯೂರಪ್ಪನವರು, ರಾಜ್ಯದ ಸ್ಥಿತಿಗತಿ, ಕಾನೂನು ಸುವ್ಯವಸ್ಥೆ, ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ಬೆಳವಣಿಗೆಗಳ …

Read More »

ಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನು ರಾತ್ರೋ ರಾತ್ರಿ ಸಾಮಗ್ರಿಗಳ ಸಮೇತ ಮನೆ ಖಾಲಿ ಮಾಡಿಸಿದ ಆರೋಪ

ರಾಯಬಾಗ:  ವರ್ಗಾವಣೆಗೊಂಡಿರುವ ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನು ರಾತ್ರೋ ರಾತ್ರಿ  ಸಾಮಗ್ರಿಗಳ ಸಮೇತ ಮನೆ ಖಾಲಿ ಮಾಡಿಸಿದ ಆರೋಪ ಕೇಳಿ ಬಂದಿದೆ. ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಗೈರಾಣ ಜಾಗ ಸಲುವಾಗಿ ಶಾಸಕ ದುರ್ಯೋಧನ ಐಹೊಳೆ ಹಾಗೂ ತಹಸೀಲ್ದಾರ್ ಚಂದ್ರಕಾಂತ ಅವರ ಮಧ್ಯೆ ಕಿತ್ತಾಟ ನಡೆದಿತ್ತು. ಶಾಸಕ ಐಹೊಳೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ತಹಸೀಲ್ದಾರ್ ಅವರ ವರ್ಗಾವಣೆ ಮಾಡಿಸಿದ್ದರು. ದಿಢೀರ್ ವರ್ಗಾವಣೆ ವಿರೋಧಿಸಿ ತಹಸೀಲ್ದಾರ್ ಕೆಇಟಿಯಲ್ಲಿ ಅರ್ಜಿ ಸಲ್ಲಿಸಿ …

Read More »

“ಪ್ರಜಾಪ್ರಭುತ್ವ ದಲ್ಲಿ ಎಲ್ಲಾ ಲೆಕ್ಕವನ್ನು ಜನರಿಗೆ ನೀಡಬೇಕು. ಜನಪ್ರತಿನಿಧಿಗಳು ಜನರಿಗೆ ಉತ್ತರ ಕೊಡಲೇಬೇಕು.

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ – ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದ್ದು ಇಂದಿಗೆ ಮುಗಿದು ಹೋದ ಕಥೆ. ಈ ಕುರಿತು ಮಾತನಾಡಿ ಏನೂ ಪ್ರಯೋಜನವಿಲ್ಲ. ಆದರೆ, ಹೆಚ್‌.ಡಿ. ಕುಮಾರಸ್ವಾಮಿ ಅವರು ಈ ವಿಚಾರವನ್ನು ಯಾಕೆ ರೀಕಾಲ್ ಮಾಡಿಕೊಳ್ಳುತ್ತಿದ್ದಾರೋ? ನನಗಂತೂ ಗೊತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್‌ ನೀಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ 2018ರ ಬಳಿಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಒಂದಾಗಿ ರಚಿಸಿದ್ದ ಮೈತ್ರಿ ಸರ್ಕಾರ ಪತನವಾಗಿ ನಾಳೆಗೆ ಒಂದು …

Read More »

ಖಾನಾಪುರ: ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿ 6 ಜನರಿಗೆ ಕೊರೊನಾ……..

ಖಾನಾಪುರ:  ತಾಲ್ಲೂಕಿನಲ್ಲಿ ಬುಧವಾರ ಆರು ಜನರಿಗೆ ಕೊರೊನಾ ಕೇಸ್ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಪ್ರತಿದಿನ ಜಿಲ್ಲೆಯಲ್ಲಿ ಕೊರೊನಾ ಕೇಸ್ ದಾಖಲಾಗುತ್ತಿವೆ‌. ಇಂದು ಸಹ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಮಾಹಿತಿ ಬರುವ ಮೊದಲೇ ಖಾನಾಪುರ ತಾಲ್ಲೂಕಿನಲ್ಲಿ 6 ಜನರಗೆ ಕೊರೊನಾ ವಕ್ಕರಿಸಿದೆ. ಆರೋಗ್ಯ ಇಲಾಖೆ 5 ಜನ ಸಿಬ್ಬಂದಿ, ಒಬ್ಬ ಕೆಎಸ್ ಆರ್ ಟಿಸಿ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಜಿಲ್ಲಾಡಳಿತ ಲಾಕ್ ಡೌನ್ …

Read More »

ಲಾಕ್‍ಡೌನ್ ಅಂತ್ಯ ಆದ ಮೇಲೆ ಬೆಂಗಳೂರಿನಲ್ಲಿ ವಾಹನಗಳ ಓಡಾಟ ಜೋರಾಗಿದ್ದು, ನಗರದ ಬಹುತೇಕ ಕಡೆ ಟ್ರಾಫಿಕ್ ಉಂಟಾಗಿದೆ.

ಬೆಂಗಳೂರು: ಲಾಕ್‍ಡೌನ್ ಅಂತ್ಯ ಆದ ಮೇಲೆ ಬೆಂಗಳೂರಿನಲ್ಲಿ ವಾಹನಗಳ ಓಡಾಟ ಜೋರಾಗಿದ್ದು, ನಗರದ ಬಹುತೇಕ ಕಡೆ ಟ್ರಾಫಿಕ್ ಉಂಟಾಗಿದೆ. ಮೈಸೂರು ರಸ್ತೆ, ಮೆಜೆಸ್ಟಿಕ್, ತುಮಕೂರು ರಸ್ತೆ, ಟೌನ್ ಹಾಲ್, ನವಯುಗ ಟ್ರೋಲ್ ಸೇರಿದಂತೆ ಅನೇಕ ಕಡೆ ವಾಹನಗಳು ಸಾಲಾಗಿ ನಿಂತಿದೆ. ಇದರಿಂದ ಅಧಿಕ ವಾಹನಗಳ ಓಡಾಟದಿಂದ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಟೌನ್ ಹಾಲ್ ಮುಂಭಾಗ ಫುಲ್ ಟ್ರಾಫಿಕ್ ಆಗಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಾಗುತ್ತಾ ಇದ್ದಾವೆ. ಕೆಲಸ, ಕಾರ್ಯ ಹೋಗುವವರು, ಸರ್ಕಾರಿ …

Read More »

ಮಾಜಿ ಸಚಿವ ಹೆಚ್.ಎಂ ರೇವಣ್ಣ ಪತ್ನಿಯ ಸಹೋದರಿ ಕೊರೊನಾಗೆ ಬಲಿ..

ಬೆಂಗಳೂರು: ಕೋವಿಡ್ 19 ಎಂಬ ಚೀನಿ ವೈರಸ್ ಘಟಾನುಘಟಿ ನಾಯಕರಿಂದ ಹಿಡಿದು ಸಾಮಾನ್ಯ ಜನರನ್ನೂ ಬಿಡದೆ ಕಾಡುತ್ತಿದೆ. ಸದಾ ಜನರೊಂದಿಗಿರುವ ಜನಪ್ರತಿನಿಧಿಗಳಿಗೂ ಕೋವಿಡ್ 19 ಬಿಸಿ ತಟ್ಟಿದೆ. ಅಂತೆಯೇ ಇದೀಗ ಮಾಜಿ ಸಚಿವ ಹೆಚ್.ಎಂ ರೇವಣ್ಣ ಅವರಿಗೂ ಮಹಾಮಾರಿಯ ಆತಂಕ ಶುರುವಾಗಿದೆ. ಹೆಚ್.ಎಂ ರೇವಣ್ಣ ಅವರ ಪತ್ನಿ ಸಹೋದರಿ ಎಂ.ಎಸ್ ರೋಹಿಣಿ ಮಂಗಳವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 61 ವರ್ಷ ವಯಸ್ಸಾಗಿರುವ ರೋಹಿಣಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. …

Read More »