Breaking News

ಅಥಣಿ

ಅಧಿಕಾರ ದುರುಪಯೋಗ ಮಾಡಿಕೊಂಡು ನಕಲಿ ಎಸ್‌ಸಿ ಪ್ರಮಾಣ ಪತ್ರ ವಿತರಣೆ.

ಅಥಣಿ: ಹಂಪವ್ವ ಶಿಂಗೆ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಅಧಿಕಾರಿಗಳು ಕೇವಲ 10 ಸಾವಿರ ಆದಾಯ ಪ್ರಮಾಣ ಪತ್ರ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿನೊದ ಮಹಾದೇವ ಶಿಂಗೆ ಎಂಬ ಹೆಸರಿನ ವ್ಯಕ್ತಿಗೆ ಎಸ್‌ಸಿ ಪ್ರಮಾಣ ಪತ್ರ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಅಥಣಿ ತಾಲೂಕಿನ ಐಗಳಿ ಮೂಲದ ವಿನೋದ ಮಹಾದೇವ ಶಿಂಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಕಳೆದ ಹಲವು ವರ್ಷಗಳಿಂದ ಮೀಸಲಾತಿ ಪಡೆದಿದ್ದಾರೆ. …

Read More »

ರಸ್ತೆ ಮೇಲೆ ಹೋಗೆಯುಗಿಳಿದ ಸರ್ಕಾರಿ ಬಸ್;RTO ಅವರೆ ಇದು ರಸ್ತೆ ನಿಯಮ ಉಲ್ಲಂಘನೆ ಅಲ್ವಾ ;ನೆಟ್ಟಿಗರು ಪ್ರಶ್ನೆ

ಅಥಣಿ: ಕೆಎಸ್‌ಆರ್‌ಟಿಸಿ ಬಸ್ಸು ಹೊಗೆಯುಗುಳುವ ಪರಿ ನೋಡಿದರೆ ಅಬ್ಬಾ ಎನಿಸುತ್ತದೆ…! ವಾಯುಮಾಲಿನ್ಯ ತಪಾಸಣೆಯ ಅವಧಿ ಒಂದು ದಿನ ಮುಗಿದರೂ ದಂಡದ ಮೇಲೆ ದಂಡ ಬೀಳುತ್ತದೆ. ಆದ್ರೆ ಈ ಸರ್ಕಾರಿ ವಾಹನ ವಿಪರೀತ ಹೊಗೆ ಬಿಡುವುದಕ್ಕೆ ಏನು ದಂಡ..? ಅಂದರೆ ಹೊಗೆ ಬಿಡುವುದಕ್ಕೆ ಅಲ್ಲ ದಂಡ, ಹೊಗೆ ಇಲ್ಲದೇ ಇರುವುದಕ್ಕೆ ದಂಡವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ. ಇದು ಅಥಣಿ ಪಟ್ಟಣದಿಂದ-ಪಾಂಡೆಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ ಎಸ್ ಆರ್ ಟಿ …

Read More »

ಕಾಗವಾಡ ತಾಲೂಕಿನ ಕೂಸಿನ ಮನೆಗಳುವ ರಾಜ್ಯಕ್ಕೆ ಮಾದರಿಯಾಗಲಿ: ಜಿ ಎಸ್. ಮಠದ

ಕಾಗವಾಡ ತಾಲೂಕಿನ ಕೂಸಿನ ಮನೆಗಳುವ ರಾಜ್ಯಕ್ಕೆ ಮಾದರಿಯಾಗಲಿ: ಜಿ ಎಸ್. ಮಠದ ಅಥಣಿ: ಆರೈಕೆದಾರರು ಸಮಗ್ರ ತರಬೇತಿ ಪಡೆದುಕೊಂಡು ಕಾಗವಾಡ, ಅಥಣಿ ತಾಲೂಕಿನ ಕೂಸಿನ ಮನೆಗಳನ್ನು ರಾಜ್ಯದಲ್ಲಿ ಮಾದರಿಯಾಗಿಸಬೇಕು ಎಂದು ಸಹಾಯಕ ನಿರ್ದೇಶಕ ಜಿ.ಎಸ್.ಮಠದ ಹೇಳಿದರು. ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ಅಥಣಿ, ಕಾಗವಾಡ ತಾಲೂಕಿನ ಎರಡನೇ ಹಂತದ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ರೇಣುಕಾ ಹೊಸಮನಿ ಮಾತನಾಡಿ, ಈಗಾಗಲೇ ನಾಲ್ಕು ಜನ ಆರೈಕೆದಾರರಿಗೆ …

Read More »

ಐಗಳಿ ಪೊಲೀಸ್​​ ಠಾಣೆ ಎಎಸ್​ಐ ಆತ್ಮಹತ್ಯೆ

ಅಥಣಿ ತಾಲೂಕಿನ ಐಗಳಿ ಪೊಲೀಸ್​​ ಠಾಣೆ ಎಎಸ್​ಐ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸ್ವಗ್ರಾಮ ಅನಂತಪೂರದ ತನ್ನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಇನ್ನು, ಸೂಸೈಡ್​ ಮಾಡಿಕೊಂಡ ಎಎಸ್​ಐ (50) ಶಂಭು ಮೆತ್ರಿ. ಇವರು ಅಥಣಿ ತಾಲೂಕಿನ ಐಗಳಿ ಪೊಲೀಸ್​ ಠಾಣೆಯಲ್ಲಿ ಎಎಸ್​ಐ ಆಗಿ ಕಾರ್ಯನಿವರ್ಹಿಸುತ್ತಿದ್ದರು. ಕಳೆದ ಹಲವು ತಿಂಗಳಿಂದ ಶಂಭು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಜೀವನದ ಮೇಲೆ ಜಿಗುಪ್ಸೆ ಬಂದು ಪ್ರಾಣಬಿಟ್ಟಿದ್ದಾರೆ ಎನ್ನುತ್ತಿವೆ …

Read More »

ಮತ್ತೆ ಲಂಪಿ ಸ್ಕಿನ್ ಡಿಸಿಜ್ ಕಂಟಕ;ಸಾವಿರಾರು ಜಾನುವಾರುಗಳ ಸಾವಿಗೆ ಪರಿಹಾರ ಸಿಕ್ಕಿದ್ದೆಷ್ಟು

  ಅಥಣಿ :ತಾಲೂಕಿನಲ್ಲಿ ಒಕ್ಕರಿಸಿದ ಲಂಪಿ ಸ್ಕಿನ್ ಡಿಸಿಜ್ ಮಹಾಮಾರಿಯಿಂದ ಸಾಲು ಸಾಲು ಜಾರುವರುಗಳ ಮಾರಣ ಹೋಮ ನಡೆಯುತ್ತಿದೆ.ಆದ್ರೆ ಪಶು ಇಲಾಖೆ ವೈದ್ಯಧಿಕಾರಿಗಳು ಮಾತ್ರ ಕಾಟಾಚಾರದ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಜಾನುವಾರುಗಳ ರೋಗ ಹತೋಟಿಗೆ ಬರದೆ ಸೂಕ್ತ ಚಿಕಿತ್ಸೆ ಸಿಗದೆ ದಿನನಿತ್ಯ ಜಾನುವಾರುಗಳು ಸಾವನಪ್ಪುತ್ತಿವೆ.ತಾಲೂಕಿನ ಪ್ರತಿ ಗ್ರಾಮಗಳಲ್ಲು ನೂರಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ. ಮತ್ತೆ ಈಗ ಗಡಿ ಗ್ರಾಮಗಳಲ್ಲಿ ಮಹಾಮಾರಿ ಲಂಪಿ ಬೇನೆಯು ಮರಣ ಮೃದಂಗ ಬಾರಿಸುತ್ತಿದೆ. …

Read More »

ಕಬ್ಬಿನ ದರ ಘೋಷಿಸಿ ಕಾರ್ಖಾನೆ ಪ್ರಾರಂಭಿಸಿ’

ಕಾಗವಾಡ: ರಾಜ್ಯ ಸರ್ಕಾರ ಕಬ್ಬಿನ ಕಾರ್ಖಾನೆಗಳನ್ನು ನ.8ರ ನಂತರ ಪ್ರಾರಂಭಿಸಲು ಆದೇಶ ನೀಡಿದ್ದು, ತಾಲ್ಲೂಕಿನ ಕೆಲ ಕಾರ್ಖಾನೆಗಳು ಈಗಾಗಲೇ ಪ್ರಾರಂಭಗೊಂಡಿವೆ‌. ಕಬ್ಬಿನ ದರ ಘೋಷಣೆ ಮಾಡದೇ ಕಾರ್ಖಾನೆಗಳು ಪ್ರಾರಂಭಿಸಿಸಬಾರದೆಂದು ಆಗ್ರಹಿಸಿ ತಾಲ್ಲೂಕಿನ ಕಬ್ಬು ಬೆಳೆಗಾರ ರೈತರು ಮಂಗಳವಾರ ತಹಶೀಲ್ದಾರ್ ರಾಜೇಶ ಬುರ್ಲಿ ಮತ್ತು ಕಾಗವಾಡ ಪಿಎಸ್‌ಐ ಜಿ.ಜಿ ಬಿರಾದರ ಅವರಿಗೆ ಮನವಿ ಸಲ್ಲಿಸಿದರು.   ರೈತ ಮುಖಂಡ ಸುರೇಶ ಚೌಗುಲೆ ಮಾತನಾಡಿ, ಈ ಮೊದಲು ರಾಜ್ಯ ಸರ್ಕಾರ ನ.15 ರ …

Read More »

ಇದೀಗ ಎಲ್ಲ ಹಳ್ಳಿಗಳಿಗೆ ಸುವರ್ಣಕಾಲ ಬಂದಿದೆ’

ಅಥಣಿ: ‘ಮುಂದಿನ ವರ್ಷದ ಒಳಗಾಗಿ ನೀರು ಒದಗಿಸುವ ಕಾರ್ಯ ಮಾಡಲಾಗುವುದು, 17100ಎಚ್‌ಪಿ ಸಾಮರ್ಥ್ಯದ ಮೂರು ಮೋಟಾರ್‌ ಕೂಡಿಸಿ 14 ತಿಂಗಳಿನಲ್ಲಿ ಏಳು ಗ್ರಾಮಗಳಿಗೆ ನೀರು ಪೂರೈಸಲಾಗುವುದು, ಕೃಷ್ಣಾ ನದಿಯ ಪ್ರವಾಹ ಮಹಾಪೂರ ಬಂದರೂ ತೊಂದರೆಯಾಗದಂತಹ ಉನ್ನತ ತಂತ್ರಜ್ಞಾನದ ವ್ಯವಸ್ಥೆಯನ್ನು ಅಳವಡಿಸಿಕೊಂಡು, ರಾಜ್ಯದಲ್ಲೆ ಮಾದರಿ ಯೋಜನೆಯನ್ನಾಗಿಸಲಾಗಿದೆ’ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.   ತಾಲ್ಲೂಕಿನ ಅರಟಾಳ ಕ್ರಾಸ್ ಹತ್ತಿರ ಜರುಗಿದ ಅಮ್ಮಾಜೇಶ್ವರಿ -ಕೊಟ್ಟಲಗಿ ಏತನೀರಾವರಿ ಯೋಜನೆಯ ಎಂ.ಎಸ್ ಪೈಪ್‌ಗಳ …

Read More »

ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ ?: ಶಾಸಕ ರಮೇಶ ಜಾರಕಿಹೊಳಿ

ಅಥಣಿ: ‘ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ. ಅವನ ವಿರೋಧಿಗಳೆಲ್ಲ ಜೈಲಿನಲ್ಲಿದ್ದಾರೆ. ಈ ಕೆಲಸ ಬಿಟ್ಟರೆ, ಅವನಿಗೆ ಬೇರೇನೂ ಗೊತ್ತಿಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಕಂಪನಿಯವರು ಮೊದಲು ನನ್ನ ಬಲಿ ಪಡೆದರು. ನಂತರ ದೇವೇಗೌಡರ ಕುಟುಂಬದ ಬಲಿ ಪಡೆದರು. ಈಗ ಮುನಿರತ್ನ ಬಲಿ ಪಡೆದಿದ್ದಾರೆ’ ಎಂದರು. ‘ಸಿ.ಡಿ ಶಿವು …

Read More »

ನಡುಗಡ್ಡೆಯಾದ ಜನವಸತಿ

ಅಥಣಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಹುಲಗಬಾಳಿ ಗ್ರಾಮದ ವ್ಯಾಪ್ತಿಯ ಮಾಂಗ ಜನವಸತಿ ಪ್ರದೇಶವನ್ನು ಕೃಷ್ಣಾ ನದಿ ನೀರು ಸುತ್ತುವರಿದಿದ್ದು, 50 ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಅಲ್ಲಿನ ಜನ ಮತ್ತು ಜಾನುವಾರುಗಳನ್ನು ಬುಧವಾರ ಸಂಜೆ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಸಂತ್ರಸ್ತರಿಗೆ ಹುಲುಗಬಾಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಆಕ್ರೋಶಗೊಂಡ ಜನ, ‘ನಮಗೆ ಶಾಶ್ವತ ನೆಲೆ ಕಲ್ಪಿಸಬೇಕು. ಪ್ರತಿ …

Read More »

ಆಸ್ತಿಗಾಗಿ ನಡೆದಿತ್ತಾ ಡೆಡ್ಲಿ ಮರ್ಡರ್

ಬೆಳಗಾವಿ : ವ್ಯಕ್ತಿಯನ್ನು ಆಸ್ತಿ ವಿಚಾರವಾಗಿ ಕೊಲೆ ಮಾಡಿ ನಂತರ ಅಪಘಾತ ಎಂದು ಬಿಂಬಿಸಿದ್ದ ಪ್ರಕರಣವನ್ನು ಭೇದಿಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ನಿವಾಸಿ ಮಾಣಿಕ ಕೇಶವ ಕದಮ್ ( 50 ) ರಸ್ತೆ ಮೇಲೆ ಸಂಚರಿಸುವ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ನಡೆದಿತ್ತು.ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು …

Read More »