Home / ಜಿಲ್ಲೆ / ಬೆಳಗಾವಿ / ಅಥಣಿ (page 2)

ಅಥಣಿ

ಸವದಿ ಮನವೊಲಿಸಲು ಬಂದ ಬಿಜೆಪಿ ಮುಖಂಡನ ಎಳೆದಾಡಿ, ಕಾರಿಗೆ ಗುದ್ದಿದ ಕಾರ್ಯಕರ್ತರು

ಅಥಣಿ (ಬೆಳಗಾವಿ ಜಿಲ್ಲೆ): ಪಕ್ಷ ಬಿಡದಂತೆ ಲಕ್ಷ್ಮಣ ಸವದಿ ಅವರ ಮನವೊಲಿಸಲು ಇಲ್ಲಿಗೆ ಗುರುವಾರ ಬಂದಿದ್ದ ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ನೇರ್ಲಿ ಹಾಗೂ ಆರ್.ಎಸ್.ಎಸ್. ಮುಖಂಡರಿಗೆ ಸವದಿ ಬೆಂಬಲಿಗರು ಮುತ್ತಿಗೆ ಹಾಕಿ, ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು.   ಮತ್ತೆ ಕೆಲವರು ನೇರ್ಲಿ ಅವರ ಕಾರಿಗೆ ಗುದ್ದಿ ಕಿಡಿ ಕಾರಿದರು. ‘ನಮ್ಮ ಸಾಹುಕಾರಗೆ ಯಾಕೆ ಟಿಕಟ್ ತಪ್ಪಿಸಿದ್ದೀರಿ ಎಂದು ಉತ್ತರ ಕೊಟ್ಟೇ ಹೋಗಬೇಕು’ ಎಂದು ಪಟ್ಟು ಹಿಡಿದರು. ‘ಈ …

Read More »

ವಕೀಲರ ಮೇಲೆ ಹಲ್ಲೆ: ಪ್ರತಿಭಟನೆ

ಅಥಣಿ: ವಾಹನ ನಿಲುಗಡೆ ವಿಚಾರವಾಗಿ ಪೊಲೀಸರು ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಖು ಎಂದು ಆಗ್ರಹಿಸಿ ಅಥಣಿ ವಕೀಲರ ಸಂಘದಿಂದ ಶಿವಯೋಗಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಮೇತ್ರಿ ಮಾತನಾಡಿ, ‘ಮೂಲತಃ ರಾಮದುರ್ಗದ ವಕೀರೊಬ್ಬರು ಪ್ರಸ್ತುತ ಬೆಳಗಾವಿಯಲ್ಲಿ ವೃತ್ತಿ ನಡೆಸುತ್ತಿದ್ದು, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಠಾಣೆ ಹಿಂಬದಿ ವಾಹನ ನಿಲ್ಲಿಸಿದ್ದರು. ಈ ವೇಳೆ ಮಹಿಳಾ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ ವಾಹನ …

Read More »

ಸಂವಿಧಾನದ ಆಶಯಕ್ಕೆ ಬದ್ಧರಾಗಿ’

ಅಥಣಿ: ‘ಡಾ.ಅಂಬೇಡ್ಕರ್ ನೇತೃತ್ವದ ತಂಡ ನೀಡಿರುವ ಸಂವಿಧಾನ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ಸಂವಿಧಾನದ ಮೂಲಕ ಸಮಾನತೆ, ಸರ್ವರಿಗೂ ಶಿಕ್ಷಣ ದೊರೆತಿದ್ದು, ಮೂಲಭೂತ ಹಕ್ಕುಗಳ ಜೊತೆ ಮೂಲಭೂತ ಕರ್ತವ್ಯಗಳ ಬಗ್ಗೆ ನಾವು ಗಮನ ಹರಿಸಬೇಕು’ ಅಥರ್ವ ಸಾಂಗ್ಲಿಕರ ಟ್ರಸ್ಟ್‌ ಅಧ್ಯಕ್ಷ ಚಂದ್ರಕಾಂತ ಸಾಂಗ್ಲಿಕರ ಹೇಳಿದರು.   ಪಟ್ಟಣದ ಆದರ್ಶ ನಗರದ ಅನಿಲ ಕಾಂಬಳೆ ಇವರ ಸಂಸ್ಕೃತ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಅಥಣಿ ತಾಲ್ಲೂಕು ಘಟಕದಿಂದ …

Read More »

ಮೋಳೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಬಂಧಿಸಿದ ಅಬಕಾರಿ ತಂಡ

ಅಥಣಿ: ಇಲ್ಲಿನ ಅಬಕಾರಿ ವಲಯ ವ್ಯಾಪ್ತಿಯ ಮೋಳೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿರುವ ಅಬಕಾರಿ ತಂಡ ಆರೋಪಿಯನ್ನು ಸೋಮವಾರ ಬಂಧಿಸಿದೆ. ಸುರೇಶ ಅಪ್ಪಾಸಾಬ ಚೋರಮುಲೆ ಬಂಧಿತ. ಈತನಿಂದ 40,612 ರೂ. ಅಂದಾಜು ಮೌಲ್ಯದ 64.44 ಲೀ ಮದ್ಯ ಹಾಗೂ 46.8 ಲೀ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬೆಳಗಾವಿ ಅಬಕಾರಿ ಅಪರ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆ ಜಂಟಿ …

Read More »

ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್ ಸಿಗದೆ ಇದ್ದಲ್ಲಿ ನಾನು ಕೂಡಾ ರಾಜಕೀಯ ನಿವೃತ್ತಿ ತಗೆದುಕೊಳ್ಳುವೆ:ರಮೇಶ ಜಾರಕಿಹೋಳಿ

ಅಥಣಿ: ಈ ಬಾರಿ ಮತ್ತೆ ಭಾರತೀಯ ಜನತಾ ಪಕ್ಷದಿಂದ ಅಥಣಿ ಕ್ಷೇತ್ರದಿಂದ ಮಹೇಶ ಕುಮಟಳ್ಳಿ ಸ್ಪರ್ದೆ ಮಾಡುವುದು ನಿಶ್ಚಿತ ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ಮಾಜಿ ಸಚಿವ ರಮೇಶ ಜಾರಕಿಹೋಳಿ ಹೇಳಿದ್ದಾರೆ. ಅಥಣಿ ವಿಶ್ರಾಂತಿ ಗೃಹದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹೇಶ ಕುಮಟಳ್ಳಿ ಮತ್ತು ನಮ್ಮೆಲ್ಲರ ತ್ಯಾಗದಿಂದ ಬಿಜೆಪಿ ಸರಕಾರ ರಚನೆಯಾಗಿದ್ದು ಯಾವುದೇ ಕಾರಣಕ್ಕೂ ಮಹೇಶ ಕುಮಟಳ್ಳಿಯೇ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಒಂದು ವೇಳೆ ಅವರಿಗೆ ಟಿಕೆಟ್ ಸಿಗದೆ …

Read More »

ಅಥಣಿ | ಟ್ರ್ಯಾಕ್ಟರ್‌ ಪಲ್ಟಿ: ಇಬ್ಬರಿಗೆ ಗಂಭೀರ ಗಾಯ

ಅಥಣಿ: ಪಟ್ಟಣದಲ್ಲಿ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ ಶುಕ್ರವಾರ ಪಲ್ಟಿಯಾಗಿದ್ದು, ವಾಹನದಡಿ ಸಿಲುಕಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಅಗ್ರಾಣಿ ಇಂಗಳಗಾವಿಯ ಕಲ್ಪನಾ ಮಾದರ, ಬಣಜವಾಡದ ಶ್ರೀದೇವಿ ಮಾಂಗ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಜ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.   ಡಿವೈಎಸ್‌ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೊಡಿ, ಪಿಎಸ್‌ಐ ಶಿವಶಂಕರ ಮುಖರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪೊಲೀಸರು ಹಾಗೂ ಸ್ಥಳೀಯರು ಜೆಸಿಬಿ ಯಂತ್ರದ ನೆರವಿನಿಂದ ರಕ್ಷಣಾ …

Read More »

ಅಥಣಿ| ವೃದ್ಧೆ ಸಾವು, 9 ಮಂದಿಗೆ ಗಾಯ

ಅಥಣಿ: ತಾಲ್ಲೂಕಿನ ಘಟನಟ್ಟಿ ಕ್ರಾಸ್‌ ಸಮೀಪ ಶನಿವಾರ ಕ್ರೂಸರ್‌ ಹಾಗೂ ಗೂಡ್ಸ್‌ ಲಾರಿ ಮಧ್ಯೆ ಮುಖಾ-ಮುಖಿ ಡಿಕ್ಕಿ ಸಂಭವಿಸಿ, ಒಬ್ಬ ವೃದ್ಧೆ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದಾರೆ. ವಿಜಯ‍ಪುರ ಜಿಲ್ಲೆಯ ಸಿಂದಗಿಯವರಾದ ದೇವಕಿ ನಿಂಗಣ್ಣ ಕಿಚಡಿ (65) ಮೃತಪಟ್ಟವರು. ಈ ಕ್ರೂಸರ್‌ನಲ್ಲಿ 10 ಮಂದಿ ಯಲ್ಲಮ್ಮನ ಗುಡ್ಡಕ್ಕೆ ದರ್ಶನಕ್ಕೆ ಬಂದಿದ್ದರು. ಶನಿವಾರ ದೇವಿ ದರ್ಶನ ಮಾಡಿಕೊಂಡು ಮರಳಿ ಸಿಂದಗಿ ಕಡೆಗೆ ಹೊಟರಿದ್ದರು. ಅಥಣಿ ಮಾರ್ಗವಾಗಿ ಬರುತ್ತಿದ್ದ ಗೂಡ್ಸ್‌ ಲಾರಿ ಹಾಗೂ …

Read More »

ನಾಲ್ಕು ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ: ಕುಮಠಳ್ಳಿ

ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದಲ್ಲಿ ಇಂದು ನಾಲ್ಕು ಕಾಮಗಾರಿಗಳಿಗೆ ಚಾಲನೆ ನೀಡಿದರು 2ಕೋಟಿ 20ಲಕ್ಷ ರೂ ವೆಚ್ಚದ ಶೆಡಶಾಳ ರಸ್ತೆ ಕಾಮಗಾರಿಕೆ ಭೂಮಿ ಪೂಜೆ, 5ಲಕ್ಷ ರೂ ಮೊತ್ತದ ಶ್ರೀ ಲಕ್ಷ್ಮಿ ದೇವಸ್ಥಾನ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ,  5ಲಕ್ಷ ರೂ ಮೊತ್ತದ ಇಂಚಗೇರಿ ಮಠದ ಸಮುದಾಯ ಭವನ ಕಾಮಗಾರಿ ಭೂಮಿ ಪೂಜೆ, 57ಲಕ್ಷ ರೂ ಮೊತ್ತದ ಗೋಕಾಕ್ ಮುಖ್ಯ ರಸ್ತೆಯಿಂದ ಮಂಗಸೂಳಿ ತೋಟದ ರಸ್ತೆ ವರೆಗೆ ಸಿ. …

Read More »

ಆರೋಗ್ಯ ತಪಾಸಣೆ ಶಿಬಿರ ಇಂದು

ಅಥಣಿ: ಕೆಎಲ್‌ಇ ಸಂಸ್ಥೆಯ ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಜ. 11ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಂಎಸ್ ಮಹಾವಿದ್ಯಾಲ ಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ತಿಳಿಸಿದರು. ಇಲ್ಲಿನ ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕರಪತ್ರ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಜನ್ಮ ದಿನದ ಅಮೃತ ಮಹೋತ್ಸವದ ಅಂಗವಾಗಿ ಕೆಎಲ್‌ಇ ವಿಶ್ವವಿದ್ಯಾಲಯ, ಜವಾಹರಲಾಲ್ …

Read More »

ರಾಯಣ್ಣನ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿದ ಸಿದ್ದರಾಮಯ್ಯನವರು

ಅಥಣಿಯ ಹಿರಿಯ ಮುಖಂಡ ಎಸ್ ಕೆ ಬುಟಾಳಿ ಅವರು ಕೊಡುಗೆಯಾಗಿ ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆಗೊಳಿಸಿದರು. ಪಟ್ಟಣದ ವಿಜಯಪೂರ ರಸ್ತೆಗೆ ಹೊಂದಿಕೊಂಡ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯನವರು ರಾಯಣ್ಣನ ದೇಶಪ್ರೇಮ, ರಾಜನಿಷ್ಠೆಯನ್ನು ನಮ್ಮ ಯುವಜನತೆ ಮೈಗೂಡಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಕೊಡುಗೆಯನ್ನಾಗಿ ನೀಡಿದ ಬುಟಾಳಿ ಅವರ ಕೊಡುಗೆ ಈ‌ ನಾಡಿಗೆ ದೊಡ್ಡದು ಎಂದರು. ಅವರು ಮುಂದೆ ಮಾತನಾಡುತ್ತಾ, ಮಹಾಜನ ವರದಿ ಪ್ರಕಾರ ಬೆಳಗಾವಿ …

Read More »