Breaking News

ಧಾರವಾಡ

ಧಾರವಾಡದಲ್ಲಿ ಪಾಲಿಕೆ ಹೆಲ್ತ್ ಇನ್ಸ್ಪೆಕ್ಟರ್‌ಗೆ ಲೋಕಾ ಶಾಕ್…ಲಂಚ ಪಡೆಯುತ್ತಿದ್ದಾಗಲೇ ಲೋಕಾ ಬಲೆಗೆ ಬಿದ್ದ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್.

ರೊಟ್ಟಿ ಮಷಿನ್ ಪರವಾನಿಗೆ ಕೇಳಲು ಬಂದ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ವಲಯ ಕಚೇರಿ 1ರ ಮಹಿಳಾ ಹೆಲ್ತ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತರ ಬಲೆಗೆ ಬಿದ್ದ ಹೆಲ್ತ ಇನ್ಸ್ಪೆಕ್ಟರ್ ಹೀನಾ ಕೌಸ‌ರ್ ಅಧಿಕಾರಿಯಾಗಿದ್ದಾರೆ. ಧಾರವಾಡದ ಮಳೆಪ್ಪ ಎಂಬುವವರು ರೊಟ್ಟಿ ಮಷಿನ್‌ಗೆ ಪರವಾನಿಗಿ ನೀಡಲು ಅರ್ಜಿ ಸಲ್ಲಿಸಿದ್ದರು. ಪರವಾನಿಗಿ ನೀಡಲು ಕೌಸರ್ 4ವರೇ ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೌಸರ್ ಹೇಳಿದ …

Read More »

ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ – ಸುಪ್ರೀಂ ಕೋರ್ಟ್‌ನಿಂದ ಜಾಮೀನು ಮಂಜೂರು

ನವದೆಹಲಿ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ್‌  ಕೊಲೆ ಪ್ರಕರಣದಲ್ಲಿ ಕೊನೆಗೂ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಯೂ ಆಗಿರುವ ಶಾಸಕರಿಗೆ ಸುಪ್ರೀಂ ಕೋರ್ಟ್‌ನ ನ್ಯಾ. ಸಂಜಯ್ ಕರೋಲ್ ನೇತೃತ್ವದ ದ್ವಿಸದಸ್ಯ ಪೀಠ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ವಿನಯ್ ಕುಲಕರ್ಣಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದಾರ್ಥ್‌ ಲೂಥ್ರಾ, ಸಾಕ್ಷ್ಯಗಳ ವಿಚಾರಣೆ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಸಾಕ್ಷ್ಯ ನಾಶವಾಗಲಿ …

Read More »

ಸರ್ಕಾರಿ ಹುದ್ದೆ ಭರ್ತಿಗೆ ಉದ್ಯೋಗಾಕಾಂಕ್ಷಿಗಳ ದಂಗೆ

ಧಾರವಾಡ: ಖಾಲಿ ಇರುವ 2.84 ಲಕ್ಷ ಸರ್ಕಾರಿ  ಹುದ್ದೆಗಳ ಭರ್ತಿಗೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಇಂದು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಶಿಕ್ಷಣ, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಭರ್ತಿ ಮಾಡುವಂತೆ ಅಭ್ಯರ್ಥಿಗಳು ಆಗ್ರಹಿಸಿದರು. ಉದ್ಯೋಗ ಬೇಕು ಎಂದು ಭಿತ್ತಿಪತ್ರ ಹಿಡಿದು ಸಾವಿರಾರು ಯವಕರು ಆಗಮಿಸಿದರು. ಈ ವೇಳೆ ಪೊಲೀಸರು-ಪ್ರತಿಭಟನಾಕಾರರ ಮಧ್ಯೆ ತಳ್ಳಾಟ-ನೂಕಾಟ ನಡೆಯಿತು. ಪ್ರತಿಭಟನೆಗೆ ಅನುಮತಿ ನಿಡಲು ಪೊಲೀಸ್ (Police) ಇಲಾಖೆಯಿಂದ …

Read More »

ಕೆಡಿಪಿ ಸಭೆಯಲ್ಲಿ ಸಚಿವ ಸಂತೋಷ್‌ ಲಾಡ್-ಎಂಎಲ್​ಸಿ ಎಫ್.ಎಚ್.ಜಕ್ಕಪ್ಪನವರ ನಡುವೆ ವಾಗ್ವಾದ

ಧಾರವಾಡ : ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್ ನೇತೃತ್ವದಲ್ಲಿ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಇಂದು(ಸೋಮವಾರ) ನಡೆದಿದ್ದು, ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ವೇಳೆ ಸಚಿವ ಸಂತೋಷ್​ ಲಾಡ್ ಹಾಗೂ ಎಂಎಲ್​ಸಿ ಎಫ್.ಎಚ್.ಜಕ್ಕಪ್ಪನವರ ನಡುವೆ ತುಸು ಹೊತ್ತು ಏರು ದ್ವನಿಯಲ್ಲಿ ವಾಗ್ವಾದ ನಡೆದ ಪ್ರಸಂಗ ನಡೆಯಿತು. ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ ಸಮಾಜವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಎಸ್‌ಸಿ, …

Read More »

ಧಾರವಾಡ | ಕೊರಿಯನ್ ಗೇಮ್‍ ಗೀಳಿಗೆ ಯುವಕ ಬಲಿ

ಧಾರವಾಡ: ಕೊರಿಯನ್ ಗೇಮ್‍ ಗೀಳಿಗೆ ಯುವಕನೊಬ್ಬ ಬಲಿಯಾದ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್‍ನಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವಕನನ್ನು ವಿಕಾಸ್ (20) ಎಂದು ಗುರುತಿಸಲಾಗಿದೆ. ಫೆ.6 ರಂದು ಯುವಕ ಶರಣಾಗಿದ್ದ. ಸಾವಿನ ನಂತರ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೊಬೈಲ್ ಪರಿಶೀಲನೆ ವೇಳೆ ಕೊರಿಯನ್ ಗೆಮ್ಸ್ ಪತ್ತೆಯಾಗಿದೆ. ಕೊರಿಯನ್ ಗೆಮ್ಸ್‌ಗೆ ವಿಕಾಸ್ ಅಡಿಕ್ಟ್ ಆಗಿದ್ದ‌ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಪಿಯುಸಿ ಸೈನ್ಸ್ ಮುಗಿಸಿ ಮನೆಯಲ್ಲೇ …

Read More »

ಕಿಮ್ಸ್ ಆಸ್ಪತ್ರೆಯಲ್ಲಿ ಶವ ಪ್ಯಾಕ್‌ ಮಾಡಲೂ ಲಂಚ – ಐವರು ಸಿಬ್ಬಂದಿ ಅಮಾನತು

ಹುಬ್ಬಳ್ಳಿ: ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ  ಶವ ಪ್ಯಾಕ್ ಮಾಡಿಕೊಡಲು ಲಂಚ (Bribe) ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹೊರ ಗುತ್ತಿಗೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಮಹಿಳೆಯೊಬ್ಬಳ ಶವವನ್ನು ಪ್ಯಾಕ್‌ ಮಾಡಲು ಐವರು ಸಿಬ್ಬಂದಿ ಹಣ ವಸೂಲಿ ಮಾಡಿದ್ದರು. ಸಿಬ್ಬಂದಿಯ ಅಮಾನವೀಯ ಕೃತ್ಯಕ್ಕೆ ಮೃತಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಲಂಚಾವತಾರ ಬಯಲಾದ ಬಳಿಕ ಹಣ ವಸೂಲಿ ಮಾಡಿದ ಐವರು ಡಿ ಗ್ರೂಪ್‌ ನೌಕರರನ್ನು ಅಮಾನತು ಮಾಡಲಾಗಿದೆ. ರಾಯಚೂರು  …

Read More »

ಧಾರವಾಡ ಉಪನಗರ ಠಾಣೆ ಪೊಲೀಸರಿಂದ ಏರಿಯಾ ಡಾಮಿನೇಷನ್… ಕಾನೂನು ಉಲ್ಲಂಘಿಸಿದ ಯುವಕರಿಗೆ ದಂಡಾಸ್ತ್ರ ಜತೆಗೆ ಖಡಕ್ ವಾರ್ನಿಂಗ್.

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ಬಿಂದಾಸಾಗಿ ವರ್ತಿಸುತ್ತಿದ್ದವರಿಗೆ ಶನಿವಾರ ತಡ ಸಂಜೆ ಉಪನಗರ ಪೊಲೀಸರು ಏರಿಯಾ ಡಾಮಿನೇಷನ್ ನಡೆಸುವ ಮೂಲಕ ಕಾನೂನು ಉಲ್ಲಂಘಿಸುವವರೆಗೆ ಬಿಸಿ ಮುಟ್ಟಿಸಿದರು. ಧಾರವಾಡ ನಗರದ ಸಪ್ತಾಪುರ, ಕರ್ನಾಟಕ‌ ಕಾಲೇಜು ವೃತ್ತ ಸೇರಿದಂತೆ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಮುಖ ವೃತ ಸೇರಿ ಜನನಿಬಿಡ ಪ್ರದೇಶದಲ್ಲಿ ಸಂಚಾರ ನಡೆಸುವ ಮೂಲಕ ಪೊಲೀಸರು ಏರಿಯಾ ಡಾಮಿನಿಷೇನ್ ಮಾಡಿದರು. ಸಂಚಾರಿ ನಿಯಮ‌ ಉಲ್ಲಂಘಿಸಿ ಬೈಕ ಸವಾರರು, …

Read More »

ಕೇಂದ್ರ ಸರ್ಕಾರ ಕರ್ನಾಟಕದ ತೆರಿಗೆ ಪಾಲು ಹೆಚ್ಚಿಸಿದೆ – ಸಚಿವ ಜೋಶಿ ಸ್ಪಷ್ಟನೆ

ಹುಬ್ಬಳ್ಳಿ: ಕೇಂದ್ರ ಸರ್ಕಾರ  ಕರ್ನಾಟಕದ ತೆರಿಗೆ ಪಾಲನ್ನ ಶೇ.4.131 ಕ್ಕೆ ಹೆಚ್ಚಳ ಮಾಡಿದೆ. ರಾಜ್ಯ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ  ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಶೇ.3.647 ರಷ್ಟಿದ್ದ ತೆರಿಗೆ ಪಾಲನ್ನ ಇದೀಗ ಶೇ.4.131 ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಕರ್ನಾಟಕಕ್ಕೆ ಸಾವಿರಾರು ಕೋಟಿ ತೆರಿಗೆ ಪಾಲು ಸಿಗಲಿದೆ ಎಂದಿರುವ ಸಚಿವರು, ‘ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ’ ಎನ್ನುತ್ತಿರುವ ಕಾಂಗ್ರೆಸ್ ನಾಯಕರ …

Read More »

ನೇಣು ಬಿಗಿದುಕೊಂಡು ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣ ನಿಗೂಢ

ಧಾರವಾಡ: ಮೆಡಿಕಲ್​​ ಪಿಜಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿ(ಡಿಮ್ಹಾನ್ಸ್) ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲನೇ ವರ್ಷದ ಡಾ.ಪ್ರಜ್ಞಾ ಪಾಲೇಗರ್(24) ಮೃತ ವಿದ್ಯಾರ್ಥಿನಿಯಾಗಿದ್ದಾಳೆ. ಶಿವಮೊಗ್ಗ ಮೂಲದ ಯುವತಿ ಎರಡು ವಾರಗಳ ಹಿಂದಷ್ಟೇ ಬಂದಿದ್ದಳು. ನಿನ್ನೆ ಆಕೆಯ ತಂದೆ-ತಾಯಿ ಕೂಡ ಬಂದು ಹೋಗಿದ್ದರು ಎನ್ನಲಾಗಿದೆ. ಇನ್ನು ಡಾ. ಪ್ರಿಯಾ ಪಾಟೀಲ್ ಜೊತೆ ಪ್ರಜ್ಞಾ ಹಾಸ್ಟೆಲ್​​ ರೂಮ್​​ ಶೇರ್​​ ಮಾಡಿಕೊಂಡಿದ್ದಳು, …

Read More »

ಜಾಮೀನು ಅರ್ಜಿ ವಜಾ – ವಿನಯ್ ಕುಲಕರ್ಣಿಗೆ ಜೈಲೇ ಗತಿ

ಬೆಂಗಳೂರು: ಧಾರವಾಡ ಜಿ.ಪಂ. ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕ ವಿನಯ್ ಕುಲಕರ್ಣಿಯವರು  ಸಲ್ಲಿಸಿದ್ದ ಜಾಮೀನು  ಅರ್ಜಿಯನ್ನು ಹೈಕೋರ್ಟ್  ವಜಾಗೊಳಿಸಿದೆ. ಪ್ರಕರಣ ಕೊನೆ ಹಂತದಲ್ಲಿದೆ ಎಂದು ಶಾಸಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದೆ. ಹೀಗಾಗಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ನ್ಯಾ.ಸುನಿಲ್ ದತ್ತ ಯಾದವ್ ಇದ್ದ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಜ.9 ರಂದು ಅರ್ಜಿ ವಿಚಾರಣೆ …

Read More »