Breaking News

ನಟ ನಟಿಯರಿಗೆ ಡ್ರಗ್ಸ್ ಸಪ್ಲೇ ಮಾಡ್ತಿದ್ದ ಮತ್ತೊಬ್ಬ ಉದ್ಯಮಿ ಕಮ್ ಡ್ರಗ್ ಪೆಡ್ಲರ್ ಅರೆಸ್ಟ್

Spread the love

 

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಪ್ರಕರಣ ಸಂಬಂಧ ರಾಜಧಾನಿಯಲ್ಲಿ ಉದ್ಯಮಿ ಹಾಗೂ ಡ್ರಗ್ ಪೆಡ್ಲರ್​ನ ಸಂಜಯನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಸಂಜಯನಗರ ಮೂಲದ ಡ್ರಗ್ ಪೆಡ್ಲರ್​ ಅಪಾರ್ಟ್‌ಮೆಂಟ್‌ನಲ್ಲಿ ಡ್ರಗ್ ಪಾರ್ಟಿ ಆಯೋಜಿಸುತ್ತಿದ್ದ. ಈತನ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಟಿಗಳನ್ನು ಆಯೋಜಿಸಲಾಗುತ್ತಿತ್ತು. ಈ ಪಾರ್ಟಿಗಳಲ್ಲಿ ಕನ್ನಡದ ನಟ-ನಟಿಯರು ಭಾಗಿಯಾಗುತ್ತಿದ್ರು ಎಂಬ ಆರೋಪ ಕೇಳಿ ಬಂದಿದೆ.

ಈತ ಸ್ಯಾಂಡಲ್‌ವುಡ್​ನ ಖ್ಯಾತ ನಟ ನಟಿಯರಿಗೆ ಡ್ರಗ್ಸ್ ಸಪ್ಲೇ ಮಾಡುತ್ತಿದ್ದನಂತೆ. ಈ ಬಗ್ಗೆ ಸ್ವಯಂ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ಜೆಸಿ ನಗರ ಎಸಿಪಿ ರೀನಾ ಸುಮರ್ಣ ಹಾಗೂ ಸಂಜಯ್ ನಗರ ಇನ್ಸ್​ಪೆಕ್ಟರ್​ ಬಾಲಜಿಯಿಂದ ಬಂಧಿತನ ವಿಚಾರಣೆ ನಡೆಯುತ್ತಿದೆ.


Spread the love

About Laxminews 24x7

Check Also

ಹಿಂಡಲಗಾ ಜೈಲಿಗೆ ಮುತ್ತಿಗೆ ಹಾಕಿದ ರೈತರು

Spread the loveಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಡಲಗಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ