Breaking News

ರಾಜ್ಯದಲ್ಲಿ 9 ಸಾವಿರ ಹೊಸ ಕೊರೋನ ಪ್ರಕರಣಗಳು ದೃಢ: ಸೋಂಕಿತರ ಸಂಖ್ಯೆ 3.51 ಲಕ್ಷಕ್ಕೆ ಏರಿಕೆ

Spread the love

ಬೆಂಗಳೂರು, ಸೆ.1: ರಾಜ್ಯದಲ್ಲಿ ಮಂಗಳವಾರದಂದು 9,058 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 135 ಜನರು ಸೋಂಕಿಗೆ ಬಲಿಯಾಗಿದ್ದು, 5,159 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 3,51,481ಕ್ಕೆ ತಲುಪಿದ್ದು, 762 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 5,837ಕ್ಕೆ ತಲುಪಿದ್ದು, ಅನ್ಯಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 90,999ಕ್ಕೆ ಏರಿಕೆಯಾಗಿದ್ದು, ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ಎಲ್ಲೆಲ್ಲಿ ಎಷ್ಟು: ಮಂಗಳವಾರದಂದು ರಾಜ್ಯದಲ್ಲಿ ಹೊಸದಾಗಿ 9,058 ಕೊರೋನ ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 136, ಬಳ್ಳಾರಿ 393, ಬೆಳಗಾವಿ 316, ಬೆಂಗಳೂರು ಗ್ರಾಮಾಂತರ 145, ಬೆಂಗಳೂರು ನಗರ 2,967, ಬೀದರ್ 63, ಚಾಮರಾಜನಗರ 49, ಚಿಕ್ಕಬಳ್ಳಾಪುರ 106, ಚಿಕ್ಕಮಗಳೂರು 210, ಚಿತ್ರದುರ್ಗ 164, ದಕ್ಷಿಣಕನ್ನಡ 352, ದಾವಣಗೆರೆ 289, ಧಾರವಾಡ 199, ಗದಗ 194, ಹಾಸನ 461, ಹಾವೇರಿ 153, ಕಲಬುರ್ಗಿ 220, ಕೊಡಗು 54, ಕೋಲಾರ 64, ಕೊಪ್ಪಳ 195, ಮಂಡ್ಯ 197, ಮೈಸೂರು 737, ರಾಯಚೂರು 245, ರಾಮನಗರ 105, ಶಿವಮೊಗ್ಗ 233, ತುಮಕೂರು 327, ಉಡುಪಿ 161, ಉತ್ತರಕನ್ನಡ 114, ವಿಜಯಪುರ 67, ಯಾದಗಿರಿ 147 ಹೊಸ ಕೊರೋನ ಪ್ರಕರಣಗಳು ಪತ್ತೆಯಾಗಿವೆ.

135 ಸೋಂಕಿತರು ಬಲಿ: ಬಾಗಲಕೋಟೆ 2, ಬಳ್ಳಾರಿ 4, ಬೆಳಗಾವಿ 7, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 40, ಚಾಮರಾಜನಗರ 1, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 2, ದಕ್ಷಿಣ ಕನ್ನಡ 7, ದಾವಣಗೆರೆ 4, ಧಾರವಾಡ 2, ಗದಗ 2, ಹಾಸನ 11, ಹಾವೇರಿ 4, ಕಲಬುರ್ಗಿ 4, ಕೋಲಾರ 1, ಕೊಪ್ಪಳ 4, ಮಂಡ್ಯ 1, ಮೈಸೂರು 12, ರಾಯಚೂರು 3, ರಾಮನಗರ 1, ಶಿವಮೊಗ್ಗ 10, ತುಮಕೂರು 3, ಉಡುಪಿ 2, ಉತ್ತರ ಕನ್ನಡ 1, ವಿಜಯಪುರ ಜಿಲ್ಲೆಯಲ್ಲಿ 4, ಯಾದಗಿರಿಯಲ್ಲಿ ಒಬ್ಬರು ಕೊರೋನ ಸೋಂಕಿನಿಂದ ಸಾವನ್ನಪ್ಪಿದ್ದಾರೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ