Breaking News

ಉನ್ನತ ವ್ಯಾಸಂಗಕ್ಕೆ ಬಂದು ಮಾದಕ ವಸ್ತು ಮಾರಾಟ, ವಿದೇಶಿ ಪ್ರಜೆ ಸೇರಿ ಐವರ ಬಂಧನ

Spread the love

ಬೆಂಗಳೂರು,  ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದು ಎಂಸಿಎ ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆ ಮಾದಕ ವಸ್ತುಗಳ ಸೇವನೆ ಚಟಕ್ಕೆ ಬಿದ್ದು ಹಣಕಾಸಿನ ತೊಂದರೆಯಿಂದ ತಾನೇ ಮಾದಕ ವಸ್ತುಗಳ ಮಾರಾಟ ಆರಂಭಿಸಿದ್ದ ವಿದೇಶಿ ಪ್ರಜೆ ಸೇರಿ ಐದು ಮಂದಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ರೂ. ಬೆಲೆ ಬಾಳುವ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸೂಡಾನ್ ದೇಶದ ಅಹಮ್ಮದ್ ಒಮರ್ (27), ತಾಬ್‍ಶೇರ್(24), ಲಜೀಮ್(23), ಸೈಯದ್ ಶಕೀರ್(24), ಮೊಹಮ್ಮದ್ ಶಿಹಾಮ್ (28) ಬಂಧಿತರು. ಆರೋಪಿಗಳಿಂದ 50 ಗ್ರಾಂ ತೂಕದ 100 ಮಾದಕ ಮಾತ್ರೆಗಳು, 10 ಗ್ರಾಂ ಎಂಡಿಎಂಎ ಕ್ರೈಸ್ಟಲ್ ವಶವಡಿಸಿಕೊಂಡಿದ್ದು ಇವುಗಳ ಮೌಲ್ಯ 5 ಲಕ್ಷ ರೂ.

ಎಂದು ಅಂದಾಜಿಸಲಾಗಿದೆ.

ಹೆಣ್ಣೂರು ವ್ಯಾಪ್ತಿಯ ಚೇಳಿಕೆರೆ, ಮೇಘನಾಪಾಳ್ಯದಲ್ಲಿರುವ ಸರ್ವೀಸ್ ಅಪಾರ್ಟ್‍ಮೆಂಟ್‍ನಲ್ಲಿ ಮಾದಕ ವಸ್ತು ಶೇಖರಿಸಿಟ್ಟುಕೊಂಡಿರುವ ಬಗ್ಗೆ ಹೆಣ್ಣೂರು ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಪಾರ್ಟ್‍ಮೆಂಟ್ ಮೇಲೆ ದಾಳಿ ಮಾಡಿ ಐದು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿ ಅಹಮ್ಮದ್ ಒಮರ್ ಒಬ್ಬನೇ ರೂಮಿನಲ್ಲಿದ್ದಾಗ ಒತ್ತಡ ನಿವಾರಣೆಗಾಗಿ ಮಾದಕ ವಸ್ತುಗಳ ಸೇವನೆ ಹವ್ಯಾಸ ಬೆಳೆಸಿಕೊಂಡಿದ್ದು ನಂತರ ಹಣಕಾಸಿನ ತೊಂದರೆ ಉಂಟಾಗಿ ಸ್ಥಳೀಯ ಡ್ರಗ್ ಪೆಡ್ಲರ್‍ಗಳೊಂದಿಗೆ ಸೇರಿ ತಾನೇ ಮಾದಕ ವಸ್ತು ಮಾರಾಟ ಮಾಡಲು ಪ್ರಾರಂಭಿಸಿದ್ದು ಗೊತ್ತಾಗಿದೆ.

ಬೆಂಗಳೂರಿಗೆ ಉನ್ನತ ವ್ಯಾಸಂಗಕ್ಕಾಗಿ ಬಂದು ಎಂಸಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಮಾದಕ ವಸ್ತು ಸೇವನೆ ಚಟಕ್ಕೆ ಬಿದ್ದು ನಂತರ ತಾನೇ ಮಾರಾಟ ಪ್ರಾರಂಭಿಸಿದ್ದ ಈತ ಆಫ್ರಿಕಾನ್ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ತನ್ನ ಜೊತೆ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದುದು ಹೆಚ್ಚಿನ ತನಿಖೆಯಿಂದ ಗೊತ್ತಾಗಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ