Breaking News

ಬೆಳಗಾವಿಯಲ್ಲಿ ಆಟೊ ಗ್ಯಾಸ್‌ಗೆ ಪರದಾಟ

Spread the love

ಬೆಳಗಾವಿ: ಅಮೆರಿಕ, ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧದ ಕರಿನೆರೆಳು ದೇಶದ ಕೆಲ ಜನರ ಬದುಕನ್ನು ಬುಡಮೇಲು ಮಾಡಿದ್ದು, ಮಧ್ಯಮ ವರ್ಗದ ಜನರ ಪಾಡಂತೂ ಹೇಳತೀರದಾಗಿದೆ.

ಹೌದು… ಕುಂದಾನಗರಿಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್‌ ವ್ಯತ್ಯಯದಿಂದ ಹೋಟೆಲ್‌ಗಳ ಬಾಗಿಲು ಮುಚ್ಚುತ್ತಿದ್ದರೆ ಸಿಎನ್‌ ಜಿ ಗ್ಯಾಸ್‌ ಕೊರತೆಯಿಂದ ಆಟೊ ಚಾಲಕ ಬದುಕಿಗೂ ಪೆಟ್ಟು ಬಿದ್ದಿದೆ. ಈ ಚಾಲಕರು ಹೊತ್ತಿನ ಊಟಕ್ಕಾಗಿ ದುಡಿದ ತಿನ್ನುವ ಶ್ರಮಿಕರು. ನಗರದಲ್ಲಿ ನಿತ್ಯ ಆಟೊ ಓಡಾಡಿಸಿಕೊಂಡು ದುಡಿದರೆ ಮಾತ್ರ ಆ ಮನೆಯಲ್ಲಿ ಜೀವನ ಸಾಗಲು ಸಾಧ್ಯ. ಈಗಿರುವಾಗ ಯುದ್ಧದ ಪರಿಣಾಮ ಇವರ ಜೀವನವೇ ಏರುಪೇರು ಆಗಿದೆ.

ಆಟೊ ಸಿಎನ್‌ ಜಿ ಗ್ಯಾಸ್‌ಗಾಗಿ ದಿನವಿಡೀ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್‌ ಫಿಲ್ಲಿಂಗ್ ಮಾಡಿಸಿಕೊಳ್ಳಲು ಬುಧವಾರ ನಗರದಲ್ಲಿ ಆಟೊಗಳು ಸರತಿ ಸಾಲಿನಲ್ಲಿ ನಿಂತು ಕಾದರು. ಕಾಯುವುದರಲ್ಲಿಯೇ ಚಾಲಕರ ಇಡೀ ದಿನ ವ್ಯರ್ಥ ಮಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಈ ಸಮಸ್ಯೆ ನಿವಾರಣೆಗೆ ಗಮನ ಹರಿಸಬೇಕು. ಮತ್ತಷ್ಟು ಬಿಗಡಾಯಿಸಿದರೆ ಮುಂದೆ ಕಷ್ಟವಾಗುತ್ತದೆ. ನಮ್ಮಂಥ ಅನೇಕ ಬಡ ಕುಟುಂಬಗಳು ಬೀದಿಗೆ ಬೀಳುವಂಥ ಪರಿಸ್ಥಿತಿ ಬರುತ್ತದೆ ಎಂದು ಆಟೊ ಚಾಲಕರು ತಮ್ಮ ಆಕ್ರೋಶ ಹೊರಹಾಕಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ