Breaking News

Laxminews 24x7

ಶಿಕ್ಷಕನಿಂದ 1 ಲಕ್ಷ ರೂ. ಲಂಚ ಪಡೆಯುವಾಗ ಭದ್ರಾವತಿ ಬಿಇಒ ʻಲೋಕಾʼ ಬಲೆಗೆ

ಶಿವಮೊಗ್ಗ: ಶಿಕ್ಷಕರೊಬ್ಬರ ವಾರ್ಷಿಕ ವೇತನ ಬಡ್ತಿ ಹಾಗೂ ಇತರೆ ಸರ್ಕಾರಿ ಭತ್ಯೆಗಳನ್ನು ಮಂಜೂರು ಮಾಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಸ್ವೀಕರಿಸುತ್ತಿದ್ದ ವೇಳೆ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕಾಯುಕ್ತ ಖೆಡ್ಡಕ್ಕೆ ಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಬಿಇಒ ಮಧ್ಯವರ್ತಿಯಾಗಿದ್ದವನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದವರನ್ನು ಬಿಇಒ ಎ.ಕೆ.ನಾಗೇಂದ್ರಪ್ಪ ಹಾಗೂ ಮಂಜುನಾಥ್‌ ಎಂದು ಗುರುತಿಸಲಾಗಿದೆ. ಶಿಕ್ಷಕರಾದ ಲಿಂಗರಾಜು ಅವರು 2011ರಿಂದ 2023ರವರೆಗೆ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ …

Read More »

ವರ್ಷದ ಮೊದಲ ಚಂದ್ರಗ್ರಹಣ – ಬೀದರ್‌ನ ಪ್ರಮುಖ ದೇವಾಲಯಗಳು ಬಂದ್

ಬೀದರ್: ಇಂದು ವರ್ಷದ ಮೊದಲ ಚಂದ್ರಗ್ರಹಣ ಹಿನ್ನೆಲೆ ಬೀದರ್ ಜಿಲ್ಲೆಯ ಪ್ರಮುಖ ದೇವಾಲಯಗಳ ಬಾಗಿಲು ಬಂದ್ ಮಾಡಲಾಗಿದೆ. ಬೀದರ್ ಹೊರವಲಯದಲ್ಲಿರುವ ದಕ್ಷಿಣ ಭಾರತದ ಏಕೈಕ ಝರಣಿ ನರಸಿಂಹಸ್ವಾಮಿ ಗುಹಾಂತರ ದೇವಾಲಯದ ಬಾಗಿಲು ಬಂದ್ ಮಾಡಿ, ಪ್ರಧಾನ ಅರ್ಚಕರು ಬೀಗ ಹಾಕಿದ್ದಾರೆ. ಒಂದು ಕಿ.ಮೀ ದೂರ ಎದೆಮಟ್ಟದ ನೀರಿನಲ್ಲಿ ನಡೆದುಕೊಂಡು ಹೋಗಿ ನರಸಿಂಹಸ್ವಾಮಿ ದೇವರ ದರ್ಶನ ಪಡೆಯುತ್ತಿದ್ದ ಭಕ್ತರಿಗೆ ಬ್ರೇಕ್ ಹಾಕಿ, ಚಂದ್ರಗ್ರಹಣದ ಸ್ಪರ್ಶ ತಟ್ಟದಂತೆ ದೇವರಿಗೆ ಅಷ್ಟದಿಗ್ಬಂಧನ ಹಾಕಲಾಗಿದೆ. ದೇವರ …

Read More »

ಪಹಲ್ಗಾಮ್‌ ದಾಳಿಯಾದಾಗ ಸುಮ್ಮನಿದ್ದವ್ರು ಖಮೇನಿ ಹತ್ಯೆಗೆ ಪ್ರತಿಭಟಿಸ್ತಿದ್ದಾರೆ: ಮುತಾಲಿಕ್‌

ಚಿಕ್ಕಮಗಳೂರು: ಪಹಲ್ಗಾಮ್‌ ದಾಳಿಯಾದಾಗ  ಸುಮ್ಮನಿದ್ದವ್ರು ಖಮೇನಿ  ಹತ್ಯೆಗೆ ಪ್ರತಿಭಟಿಸುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌  ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಇರಾನ್ ಪರಮೋಚ್ಛ ನಾಯಕ ಖಮೇನಿ ಓರ್ವ ರಾಕ್ಷಸ. ಮಹಿಳೆಯರ ಮೇಲೆ ಅತ್ಯಂತ ದೌರ್ಜನ್ಯ ಎಸಗಿದವರ ಪರ ಪ್ರತಿಭಟನೆ ಮಾಡುವವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು. ಇದೇ ವೇಳೆ, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಶಿಯಾ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದನ್ನು …

Read More »

ಅಂಧರಿಗೆ ಆನಂದ ಕೊಟ್ಟವರು ಗವಾಯಿಗಳು : ಮೂಗನೂರಮಠ

ಬಾಗಲಕೋಟೆ: ಬದುಕಿನುದ್ದಕ್ಕೂ ಸ್ವಯಂ ಅಂಧರಾಗಿ, ಅಂಧ, ಅನಾಥ, ಅಂಗವಿಕಲ, ಬಡಮಕ್ಕಳಿಗೆ ಬೆಳಕನ್ನು ಕೊಟ್ಟವರು ಪಂಡಿತ ಪುಟ್ಟರಾಜ ಗವಾಯಿಯವರು ಎಂದು ಪ್ರಾಚಾರ್ಯರಾದ ಎಸ್. ಆರ್. ಮೂಗನೂರಮಠ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ೧೧೨ನೇ ಜಯಂತ್ಯೋತ್ಸವದಲ್ಲಿ ಗವಾಯಿಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂಗೀತದ ಅನೇಕ ವಾದ್ಯಗಳಲ್ಲಿ ಪಾಂಡಿತ್ಯ ಹೊಂದಿದವರು. ಉಭಯ ಗಾಯನ ವಿಷಾಂದರಾಗಿದ್ದರು. ಕವಿ, ಸಾಹಿತಿಗಳಾಗಿ ಅನೇಕ …

Read More »

ಪೋಕ್ಸೋ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಬಾಲಕಿ ಹೇಳಿಕೆ ಮೇಲೆ ಮಲ್ಲಿಕಾರ್ಜುನ ಮುತ್ಯಾನ ಭವಿಷ್ಯ ನಿರ್ಧಾರ

ಯಾದಗಿರಿ: ಮಹಲ್ ರೋಜಾದ‌ ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್​ಗೆ ಸಂಬಂಧಿಸಿದಂತೆ ಕೇಸ್ ಕೈ ಬಿಡುವಂತೆ ಆಗ್ರಹಿಸಿ ಭಕ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಎಫ್​ಐಆರ್ ರದ್ದು ಕೋರಿ ಮಲ್ಲಿಕಾರ್ಜುನ ಮುತ್ಯಾ ಕಲಬುರಗಿ ಹೈಕೋರ್ಟ್ ಮೇಟ್ಟಿಲೇರಿದ್ದಾರೆ. ಈ ಮಧ್ಯೆ ಸಂತ್ರಸ್ತ ಬಾಲಕಿ ನೀಡಿದ ಹೇಳಿಕೆ‌ಯನ್ನು ಜಡ್ಜ್ ದಾಖಲಿಸಿಕೊಂಡಿದ್ದಾರೆ. ಆ ಮೂಲಕ ಸಂತ್ರಸ್ತ ಬಾಲಕಿಯ ಹೇಳಿಕೆ ಮೇಲೆ ಮಲ್ಲಿಕಾರ್ಜುನ ಮುತ್ಯಾನ ಭವಿಷ್ಯ ನಿರ್ಧಾರವಾಗಲಿದೆ. ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ಹಿನ್ನಲೆ ಇಂದು ಶಹಾಪುರ …

Read More »

ಸಿಸಿಬಿ ಪೊಲೀಸರ ಮೆಗಾ ರೇಡ್​​: ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್​​ ಸೀಜ್​

ಬೆಂಗಳೂರು: ಡ್ರಗ್ಸ್​​ ದಂಧೆಕೋರರಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್​​ ಕೊಟ್ಟಿದ್ದಾರೆ. ನಗರದ ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ ಡ್ರಗ್ಸ್ ಪತ್ತೆ ಮಾಡಲಾಗಿದ್ದು, ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ ಮೂಲದ ಅಶ್ವಿನ್(27), ಮೊಬಿನಾ(25) ಬಂಧಿತ ಆರೋಪಿಗಳಾಗಿದ್ದು, LSD, ಹೈಡ್ರೋ ಗಾಂಜಾ ಮತ್ತು ಚರಸ್​​ನ ಆರೋಪಿಗಳಿಂದ ಸೀಜ್​​ ಮಾಡಲಾಗಿದೆ. LSD ಸ್ಟ್ರಿಪ್ಸ್​​ಗಳನ್ನು ಕರ್ನಾಟಕದಲ್ಲಿ ವಶಪಡಿಸಿಕೊಂಡಿರೋದು ಇದೇ ಮೊದಲು ಎನ್ನಲಾಗಿದೆ. ಆರೋಪಿಗಳು ದೇವರ ಚಿತ್ರ …

Read More »

ಕೇತುಗ್ರಸ್ಥ ಚಂದ್ರಗ್ರಹಣ – ಮಂತ್ರಾಲಯ ರಾಯರ ಮಠದಲ್ಲಿ ಭಕ್ತರ ದರ್ಶನಕ್ಕಿಲ್ಲ ಅಡ್ಡಿ

ರಾಯಚೂರು: ಕೇತುಗ್ರಸ್ಥ ಚಂದ್ರಗ್ರಹಣ  ನಡುವೆಯೂ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ರಾಯರ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ಭಕ್ತರು ರಾಯರ ವೃಂದಾವನ ದರ್ಶನ ಪಡೆಯುತ್ತಿದ್ದಾರೆ. ಮಠದ ಯಾವುದೇ ಬಾಗಿಲು ಬಂದ್ ಮಾಡಿಲ್ಲ. ಆದ್ರೆ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. ಒಂದೆಡೆ ಹೋಳಿ ಹುಣ್ಣಿಮೆ ಹಾಗೂ ಇನ್ನೊಂದೆಡೆ ಚಂದ್ರ ಗ್ರಹಣ ಹಿನ್ನೆಲೆ ಭಕ್ತರ ಸಂಖ್ಯೆ ವಿರಳವಾಗಿದೆ. ಮಂತ್ರಾಲಯ ಮಠದಲ್ಲಿ  ಬೆಳಿಗ್ಗೆ ರಾಯರ ವೃಂದಾವನಕ್ಕೆ ಜಲಾಭಿಷೇಕ ಹೊರತು ಪಡಿಸಿ ಬೇರೆ ಪೂಜೆ, ನೈವೇದ್ಯ …

Read More »

ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ಕೇಂದ್ರಕ್ಕೆ ಪತ್ರ: ಪರಮೇಶ್ವರ್‌

ಬೆಂಗಳೂರು: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ  ಕೊಲ್ಲಿ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್‌ ಕರೆದುಕೊಂಡು ಬರಲು ಕೇಂದ್ರ ಸರ್ಕಾರಕ್ಕೆ ಸಿಎಂ ಹಾಗೂ ಸಿಎಸ್ ಪತ್ರ ಬರೆದಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ್‌  ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಅವರು ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಇಸ್ರೇಲ್ ಮತ್ತು ಇರಾನ್ ನಡುವೆ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಕೊಲ್ಲಿ ದೇಶಗಳಲ್ಲಿ ಕನ್ನಡಿಗರು ಸಿಲುಕಿರುವ ಬಗ್ಗೆ ಪ್ರತಿಕ್ರಿಯಿಸಿದರು. ಬಹಳಷ್ಟು ಜನ ಕನ್ನಡಿಗರು ಅಲ್ಲಿ ಸಿಲುಕಿದ್ದಾರೆ. …

Read More »

ಯುದ್ಧದ ನಡುವೆಯೇ ಇರಾನ್‌ನಲ್ಲಿ ಭೂಕಂಪ

ಟೆಹ್ರಾನ್‌: ಅಮೆರಿಕ-ಇಸ್ರೇಲ್‌ ಹಾಗೂ ಗಲ್ಫ್‌ ರಾಷ್ಟ್ರಗಳ ವಿರುದ್ಧ ಯುದ್ಧದ ನಡುವೆಯೇ ಇರಾನ್‌ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಇರಾನ್‌ನ ಗೆರಾಶ್‌ನಲ್ಲಿ 4.3 ತೀವ್ರತೆಯ ಭೂಕಂಪವಾಗಿದೆ. ಸುಮಾರು 10 ಕಿ.ಮೀ ಆಳದಲ್ಲಿ ಭೂಕಂಪ ಉಂಟಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಮಿಲಿಟರಿ ದಾಳಿಗಳನ್ನು ತೀವ್ರಗೊಳಿಸಿವೆ. ಈ ಪ್ರದೇಶದಲ್ಲಿ ತೀವ್ರ ಸಂಘರ್ಷದ ನಡುವೆ ಭೂಕಂಪ ಸಂಭವಿಸಿದೆ. ಈಗಾಗಲೇ ಉದ್ವಿಗ್ನಗೊಂಡಿರುವ ಪ್ರಾದೇಶಿಕ ಯುದ್ಧಗಳಿಗೆ ಈ ಕಂಪನವು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. …

Read More »

ಅಧ್ಯಯನದಿಂದ ಭವಿಷ್ಯ ರೂಪಿಸಿಕೊಳ್ಳಿ

ರಾಮದುರ್ಗ: ಹೆತ್ತವರು, ಗುರುಗಳು ಹಾಗೂ ಕಲಿತ ಶಾಲೆಯ ಋಣ ತೀರಿಸಲು ಮಕ್ಕಳು ಕಂಕಣಬದ್ಧರಾಗಬೇಕು ಎಂದು ನಿವೃತ್ತ ಡಿಡಿಪಿಐ ಎಂ.ಜಿ.ದಾಸರ ಹೇಳಿದರು. ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಅಲ್ಲಿಂದಲೇ ಸಂಸ್ಕೃತಿ ಆರಂಭವಾವುದು ಬಹುಮುಖ್ಯವಾಗಿದೆ ಎಂದರು. ವಿಪ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಮಕ್ಕಳು ಟಿವಿ, ಮೊಬೈಲ್ ಗೀಳಿಗೆ …

Read More »