Breaking News

Laxminews 24x7

ಸಿಎಂ ಬೊಮ್ಮಾಯಿ ಎದುರೇ ಧಿಕ್ಕಾರ ಕೂಗಿದ ಜೆಡಿಎಸ್​ ಕಾರ್ಯಕರ್ತರು.. ನಡೆದಿದ್ದೇನು..?

ತುಮಕೂರು: ಸಿಎಂ ಬಸವರಾಜ ಬೊಮ್ಮಾಯಿಗೆ ಸ್ವತಃ ಅವರ ಎದುರಲ್ಲೇ ಧಿಕ್ಕಾರ ಕೂಗಿದ ಘಟನೆ ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಮಹಿಳೆಗೆ ಅತ್ಯಾಚಾರವೆಸಗಿ ಕೊಲೆ ಆರೋಪಿಗಳನ್ನ ಬಂಧಿಸಲು ಈ ವೇಳೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಪೊಲೀಸರು ಆರೋಪಿಗಳನ್ನ ಬಂಧಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಿಎಂಗೆ ಮನವಿ ಸಲ್ಲಿಸಲು ಜೆಡಿಎಸ್ ಕಾರ್ಯಕರ್ತರು‌ ಬಂದಿದ್ದರು.. ಕಾರ್ಯಕರ್ತರ ಮನವಿ ಪಡೆಯದೇ ಹೊರಟ ಸಿಎಂಗೆ ಕಾರ್ಯಕರ್ತರು …

Read More »

ಮಧ್ಯರಾತ್ರಿ ವೀಕೆಂಡ್ ಮೋಜು-ಮಸ್ತಿ; ಮತ್ತೊಂದು ಐಷಾರಾಮಿ ಕಾರು ಭೀಕರ ಅಪಘಾತ

ಬೆಂಗಳೂರು: ಕೋರಮಂಗಲ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಭೀಕರ ಅಪಘಾತದ ಬಳಿಕವೂ ಯುವಕರು ಎಚ್ಚೆತ್ತುಕೊಂಡಿಲ್ಲ. ಮತ್ತೆ ವೀಕೆಂಡ್​ನಲ್ಲಿ ಮೋಜು ಮಸ್ತಿ ಅಂತಾ ಐಷಾರಾಮಿ ಕಾರುಗಳಲ್ಲಿ ಸುತ್ತಾಡ್ತಿದ್ದಾರೆ.‌ ಇದೇ ಮೋಜು ಮಸ್ತಿಯಲ್ಲಿ ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಸಂಪೂರ್ಣವಾಗಿ ನಜ್ಜುಗುಜ್ಜಾಗಿರೋ ಇಟಿಯೋಸ್​ ಕಾರು, ಗುದ್ದಿದ ರಭಸಕ್ಕೆ ಫೋರ್ಷೆ ಕಾರಿನ ಬಂಪರೇ ಕಿತ್ತೋಗಿದೆ. ಸ್ಥಳದಲ್ಲಿ ಪರಿಶೀಲನೆ ನಡೆಸ್ತಿರೋ ಪೊಲೀಸರು. ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಐಷಾರಾಮಿ ಕಾರಿನ ಅಪಘಾತ ಸಂಭವಿಸಿದೆ. …

Read More »

ರಾಜ್ಯದಲ್ಲಿ ಮತ್ತೊಂದು ಅಗ್ನಿ ದುರಂತ: ಮೊಬೈಲ್ ಟವರ್ ಜನರೇಟರ್ ಗೆ ಬೆಂಕಿ!

ದಾವಣಗೆರೆ: ರಾಜ್ಯದಲ್ಲಿ ದಿನಕ್ಕೊಂದು ಅಗ್ನಿ ದುರಂತಗಳು ಸಂಭವಿಸಿದ್ದು, ಇಂದು ಬೆಳ್ಳಂಬೆಳಗ್ಗೆ ದಾವಣಗೆರೆಯಲ್ಲಿ ಮೊಬೈಲ್ ಟವರ್ ಜನರೇಟರ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿದೆ. ನಗರದ ಜಯದೇವ ವೃತ್ತದ ಬಳಿ ಬರುವ ಮಲ್ಲಿಕಾರ್ಜುನ ಲಾಡ್ಜ್ ಹಿಂಭಾಗ ಈ ಘಟನೆ ಸಂಭವಿಸಿದೆ. ಜನರೇಟರ್ ಹೊತ್ತಿ ಉರಿದಿದ್ದು, ಭಾರಿ ಪ್ರಮಾಣದಲ್ಲಿ ಹೊಗೆ ಆವರಿಸಿದೆ. ಸ್ಥಳಕ್ಕೆ ಸಕಾಲಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಿಯಂತ್ರಣ ಕಾರ್ಯದಲ್ಲಿ ತೊಡಗಿದೆ. ಮೊಬೈಲ್ ಟವರ್ …

Read More »

ದಾಂಡೇಲಿ : ಕಾಗದ ಕಾರ್ಖಾನೆಯಲ್ಲಿ ತಾಮ್ರದ ಕೊಳವೆ ಕಳವು, ದೂರು ದಾಖಲು

ದಾಂಡೇಲಿ : ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಪಿ.ಸಿ.ಸಿ ಪ್ಲಾಂಟಿನ ಕಂಟೈನರ್ ಹತ್ತಿರ ಇಟ್ಟಿದ್ದ ಅಂದಾಜು ರೂ :14,800/- ಮೌಲ್ಯದ 15.2 ಎಂ.ಎಂ ಅಳತೆಯ ಹಾಗೂ 6.2 ಎಂ.ಎಂ ಅಳತೆಯ ತಲಾ 16 ಮೀಟರ್ ತಾಮ್ರದ ಕೊಳವೆಗಳನ್ನು ಕಳವುಗೈದ ಘಟನೆ ನಡೆದಿದೆ. ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ಕಾಗದ ಕಾರ್ಖಾನೆಯ ಭದ್ರತಾ ವಿಭಾಗದ ಸಹಾಯಕ ಭದ್ರತಾ ವ್ಯವಸ್ಥಾಪಕರಾದ ಕುಶಾಲಪ್ಪ ಸುಬ್ಬೇಗೌಡ ಅವರು ದೂರು ನೀಡಿದ್ದು, ತನಿಖಾ ಪಿಎಸೈ …

Read More »

ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ಅನೌನ್ಸ್ ಆಯ್ತು ಮೊದಲ ಸಿನಿಮಾ ರಿಲೀಸ್ ಡೇಟ್

ಬೆಂಗಳೂರು: ರಾಜ್ಯ ಸರ್ಕಾರ ಥಿಯೇಟರ್ ಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ ಬೆನ್ನಲ್ಲೇ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ರಿಲೀಸ್ ಚಟುವಟಿಕೆಗಳು ಗರಿಗೆದರಿವೆ. ಇದೀಗ ಸೂರಜ್ ಮತ್ತು ಧನ್ಯಾ ರಾಮ್ ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಕ್ಟೋಬರ್ 8 ರಂದು ಸಿನಿಮಾ ರಿಲೀಸ್ ಆಗುವುದು ಪಕ್ಕಾ ಆಗಿದೆ. ಈ ಮೂಲಕ ಹೌಸ್ ಫುಲ್ ಪ್ರದರ್ಶನಕ್ಕೆ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ರಿಲೀಸ್ ಡೇಟ್ …

Read More »

ಅಣ್ಣಾವ್ರ ಮೊಮ್ಮಗಳ ‘ನಿನ್ನ ಸನಿಹಕೆ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಡಾ. ರಾಜ್ ಕುಮಾರ್ ಮೊಮ್ಮಗಳು, ರಾಮ್ ಕುಮಾರ್ ಮಗಳು, ಧನ್ಯಾರಾಮ್ ಕುಮಾರ್ ಚೊಚ್ಚಲ ಸಿನಿಮಾ ‘ನಿನ್ನ ಸನಿಹಕೆ’ ಇನ್ನೇನು ಕೆಲವೇ ದಿನಗಳಲ್ಲಿ ತೆರೆಕಾಣಲಿದೆ. 100 % ಥಿಯೇಟರ್ ಓಪನಿಂಗ್​ ಗೆ ಸರ್ಕಾರ ಅನುಮತಿ ಕೊಟ್ಟಿರೋ ಹಿನ್ನೆಲೆಯಲ್ಲಿ ಚಿತ್ರತಂಡ ನಿನ್ನ ಸನಿಹಕೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ.. ವಿಶೇಷ ಅಂದ್ರೆ ಈ ಸಿನಿಮಾದಲ್ಲಿ ರಾಜ್ ಕುಟುಂಬದ ಮೊದಲ ಹೀರೋಯಿನ್ ಧನ್ಯಾ ರಾಮ್ ಕುಮಾರ್ ನಟಿಸುತ್ತಿದ್ದಾರೆ. ನಿನ್ನ ಸನಿಹಕೆ ಸಿನಿಮಾವನ್ನು ಸೂರಜ್ …

Read More »

ಬಿಜೆಪಿ ಸೇರಲು ಕಾಂಗ್ರೆಸ್ಸಿಗರು ತುದಿಗಾಲಿನಲ್ಲಿ ನಿಂತಿದ್ದಾರೆ : ಶಾಸಕ ರೇಣುಕಾಚಾರ್ಯ

ದಾವಣಗೆರೆ: ಕಾಂಗ್ರೆಸ್ ನ ಸಮಾನ ಮನಸ್ಕರರು ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಕಾದು ನೋಡಿ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು. ಅವರು ಶನಿವಾರ ಸಂಜೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಿಂದ ಹಲವಾರು ಜನ‌ ಬಿಜೆಪಿಗೆ ಬರಲು ಸಾಲಿನಲ್ಲಿ‌ ನಿಂತಿದ್ದಾರೆ. ಬಿಜೆಪಿ ತತ್ವ‌ ಸಿದ್ಧಾಂತ ಒಪ್ಪಿಕೊಂಡು ಪಕ್ಷ ಸೇರಲು ಸಿದ್ದರಾಗಿದ್ದಾರೆ. ಇಷ್ಟರಲ್ಲೆ ಎಲ್ಲ ಬದಲಾಗಲಿದೆ. 2023 ಕ್ಕೆ ಕಾಂಗ್ರೆಸ್‌ ಧೂಳಿಪಟವಾಗುತ್ತೆ ಎಂದರು. ಭಾರತ್ ಬಂದ್‌ ಬಗ್ಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, …

Read More »

ಅಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸಹೋದರ ರಮೇಶ ಕತ್ತಿ

ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಯ ಪ್ರಜ್ಞೆ ಇಟ್ಟುಕೊಂಡು ನಮ್ಮ‌ಕ್ಷೇತ್ರಕ್ಕೆ‌ ಬಂದು ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ನನಗೂ ಸಮಯ ಪ್ರಜ್ಣೆ ಇದೆ. ಆದರೆ ನಮ್ಮಣ್ಣ ಉಮೇಶ ಕತ್ತಿ ಎರಡು ತಾಸು ಲೇಟ್ ಮಾಡಿ ಬರ್ತಾರೆ.‌ ಬೇಗ ಟೇಕಪ್ ಆಗುವುದಿಲ್ಲ ಎಂದು ಸಹೋದರ ರಮೇಶ ಕತ್ತಿ ಅವರು ಹಿರಿಯಣ್ಣನ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದರು. ಹುಕ್ಕೇರಿಯ ಕ್ಯಾರಗುಡ್ಡದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ, ಪ್ರಥಮ ದರ್ಜೆ ಕಾಲೇಜು, ಹುಕ್ಕೇರಿಯ ಹೈಟೆಕ್ …

Read More »

ಕೊವಿಡ್ ನಂತರ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತಿದೆ; ಜನರಿಗೆ ತೊಂದರೆ ಆಗಬಾರದು: ಭಾರತ್ ಬಂದ್ ಬಗ್ಗೆ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಹೋರಾಟ ವಿಚಾರವಾಗಿ ಹುಬ್ಬಳ್ಳಿ ಏರ್​​ಪೋರ್ಟ್​​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರವಾಗಿ ನಾನು ಸದನದಲ್ಲೇ ಉತ್ತರವನ್ನ ನೀಡಿದ್ದೇನೆ. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ರಿಗೂ ತಿಳಿಸಿದ್ದೇನೆ. ಅವರು ಸ್ವಾಮೀಜಿ ಜೊತೆ ಚರ್ಚೆಯನ್ನೂ ಮಾಡಿ ಬಂದಿದ್ದಾರೆ. ನಾನು ನಿರಂತರವಾಗಿ ಅವರ ಸಂಪರ್ಕದಲ್ಲಿ ಇದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …

Read More »

ಪ್ರಧಾನಿ ಮೋದಿ ಅವರ ಆಡಳಿತದಿಂದ ಇಡೀ ವಿಶ್ವಕ್ಕೆ “ಭಾರತ ಗುರು”ವಾಗುವ ಕಾಲ ಸನ್ನಿಹಿತ ಶಾಸಕ ಬಾಲಚಂದ್ರ ಜಾರಕಿಹೊಳಿ.

  ಗೋಕಾಕ : ಶಿಸ್ತಿನ ಪಕ್ಷ ಬಿಜೆಪಿಗೆ ಕಾರ್ಯಕರ್ತರೇ ಜೀವಾಳವಾಗಿದ್ದು, ಕಾರ್ಯಕರ್ತರ ಪರಿಶ್ರಮದಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕಾಗಿದೆ. ಎಲ್ಲರೂ ಒಂದಾಗಿ, ಒಗ್ಗಟ್ಟಾಗಿ ದುಡಿದು ಬೆಳಗಾವಿ ಜಿಲ್ಲಾ ಪಂಚಾಯತಿಯಲ್ಲಿ ಬಿಜೆಪಿ ಬಾವುಟ ಹಾರಿಸೋಣ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಸಭಾಭವನದಲ್ಲಿ ಶನಿವಾರ ಸಂಜೆ …

Read More »