ಚಿಕ್ಕೋಡಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಿ.ಎಂ ಆವಾಸ , ಜಲ ಜೀವನ, ಸ್ವಾಭಿಮಾನದ ಭಾರತ ಯೋಜನೆಗಳಂತಹ ಜನಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರ ಜೀವನ ಮಟ್ಟದ ಸುಧಾರಣೆಗೆ ಶ್ರಮಿಸುತ್ತಿದೆ ಎಂದು ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು. ಪಟ್ಟಣದ ಕೇಶವ ಕಲಾಭವನದಲ್ಲಿ ಕುಡಚಿ ಮಂಡಲ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಪಂಡಿತ ದೀನದಯಾಳ್ ಉಪಾಧ್ಯಾಯ ಶಿಕ್ಷಣ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಡ ಮತ್ತು ಮಧ್ಯಮ …
Read More »ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ
ಬೆಳಗಾವಿ: ಕೆರೆಗಳ ಅಭಿವೃದ್ದಿಯಿಂದ ಮುಂಬರುವ ದಿನಗಳಲ್ಲಿ ಜನ ಜಾನುವಾರುಗಳಿಗೆ ಸಹಕಾರಿಯಾಗಲಿದೆ, ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಪ್ಯಾಸ್ ಫೌಂಡೇಶನ್ ಅಧ್ಯಕ್ಷ ಡಾ.ಮಾಧವಪ್ರಭು ಅಭಿಪ್ರಾಯಪಟ್ಟರು. ಜಿಲ್ಲೆಯ ಖಾನಾಪುರ ತಾಲೂಕಿನ ಹಲಶಿವವಾಡಿ ಗ್ರಾಮದಲ್ಲಿ ‘ಪ್ಯಾಸ್ ಫೌಂಡೇಶನ್’ ವತಿಯಿಂದ ಸಿಎಸ್‌ಆರ್ ಸಂಸ್ಥೆ ಮತ್ತು ಎಕೆಪಿ ಫೆರೋಕಾಸ್ಟ’ ಯೋಜನೆಯೊಂದಿಗೆ ಹಮ್ಮಿಕೊಂಡಿದ್ದ ಎರಡು ಕೆರೆಗಳ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆರೆ ಹೂಳು ತೆಗೆಯುವುದರಿಂದ ನೀರಿನ ಸಂಗ್ರಹಣಾ ಸಾಮರ್ಥ್ಯ …
Read More »ವದಂತಿಗೆ ಹೆಚ್ಚಿದ ಸಿಲಿಂಡರ್ ಬುಕ್ಕಿಂಗ್
ಚಿಕ್ಕೋಡಿ: ಜಿಲ್ಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಕೊರತೆ ವದಂತಿ ತೀವ್ರಗೊಂಡಿದ್ದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂಬ ಜಿಲ್ಲಾಡಳಿತ ಭರವಸೆ ನಡುವೆಯು ಸಿಲಿಂಡರ್ ಬುಕ್ಕಿಂಗ್ ಸಂಖ್ಯೆ ಹೆಚ್ಚಾಗಿದ್ದು, ಬುಕ್ ಮಾಡಿದರೂ ಸಿಲಿಂಡರ್ ಪೂರೈಸುತ್ತಿಲ್ಲ ಎಂಬ ದೂರು ಗ್ರಾಹಕರಿಂದ ಕೇಳಿ ಬರುತ್ತಿದೆ. ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ರಾಜ್ಯಕ್ಕೆ ಅನಿಲ ಪೂರೈಕೆಯಲ್ಲಿನ ವ್ಯತ್ಯಯ ಉಂಟಾಗಿದೆ. ಇದರೊಂದಿಗೆ ಗ್ಯಾಸ್ ಸಿಲಿಂಡರ್ ಅಭಾವದ ವದಂತಿಯಿಂದ ಜನರು ತಮ್ಮ ಬಳಿ ಇರುವ ಹೆಚ್ಚುವರಿ ಸಿಲಿಂಡರ್ ತುಂಬಿಸಿಕೊಳ್ಳಲು ಗಣನೀಯ …
Read More »ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ
ಚಿಕ್ಕೋಡಿ: ಪಟ್ಟಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು, ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ 14.48 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು. ಪಟ್ಟಣದ ಝಾರಿ ಗಲ್ಲಿ, ವಿಠ್ಠಲ ದಾಮೋದರ ನಗರ, ಆರ್. ಕೆ ಕಾಲೋನಿ, ಹುಡ್ಕೊ ಕಾಲೋನಿ, ಬಸವೇಶ್ವರ ನಗರ ಹಾಗೂ ಸಾಯಿ ಮಂದಿರ ಬಳಿ ಚರಂಡಿ, ಸೋಮವಾರ ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಂತದಲ್ಲಿ 3 ಕೋಟಿ ರೂ.ವೆಚ್ಚದ ಕಾಮಗಾರಿಗೆ …
Read More »ಇ ಖಾತಾದಲ್ಲಿ ಲಂಚಾವತಾರ – ಸಾರ್ವಜನಿಕರಿಗೆ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆ: ಅಶೋಕ್
ಬೆಂಗಳೂರು: ವಿಧಾನಸಭೆಯಲ್ಲಿಂದು ಇ ಖಾತಾ ಲಂಚಾವತಾರದ ಸದ್ದು ಕೇಳಿಬಂತು. ರಾಜ್ಯ ಸರ್ಕಾರದಲ್ಲಿ ಲಂಚ ಇಲ್ಲ ಎಂದು ಸವಾಲು ಹಾಕಿದ್ದ ಡಿಕೆಶಿ ಎದುರೇ ವಿಪಕ್ಷ ನಾಯಕ ಆರ್ ಅಶೋಕ್ , ಇ ಖಾತಾಕ್ಕಾಗಿ ಲಂಚ ಪಡೆದ ಪ್ರಕರಣಗಳನ್ನು ದಾಖಲೆ ಸಮೇತ ತೆರೆದಿಟ್ಟರು. ಬೆಂಗಳೂರು ಅಭಿವೃದ್ಧಿ ಕುರಿತ ಚರ್ಚೆ ವೇಳೆ ಆರ್ ಅಶೋಕ್, ಇ ಖಾತಾ ಲಂಚಾವತಾರ ಬಗ್ಗೆ ಮಾತನಾಡಿದರು. ರಮೇಶ್ ಬಾಬು ಎಂಬ ಬಿಬಿಎಂಪಿ ಅಧಿಕಾರಿ ಇ ಖಾತಾ ಮಾಡಿಸಿ ಕೊಡಲು …
Read More »ದಾವಣಗೆರೆ, ಬಾಗಲಕೋಟೆ ಉಪಸಮರ – ಜವಾಬ್ದಾರಿ ಹಂಚಿಕೆಗೆ ಸಿದ್ಧತೆ; ಬುಧವಾರ ಸಿಎಲ್‌ಪಿ ಸಭೆ
ಬೆಂಗಳೂರು: ಕಾಂಗ್ರೆಸ್ ಪಾಲಿಗೆ ಬಾಗಲಕೋಟೆ, ದಾವಣಗೆರೆ ಎರಡು ಕ್ಷೇತ್ರದ ಉಪ ಚುನಾವಣೆ ಸವಾಲಾಗಿದೆ. ಎಲ್ಲಾ 140 ಶಾಸಕರು ಹಾಗೂ ಸಚಿವರಿಗೂ ಚುನಾವಣಾ ಜವಾಬ್ದಾರಿ ಹಂಚಿಕೆಗೆ ಸಿದ್ಧತೆ ನಡೆಸಿದೆ. ನಾಳೆ (ಮಾ.25) ಈ ಸಂಬಂಧ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಶತಾಯ ಗತಾಯ ಉಪ ಚುನಾವಣೆ ಗೆಲ್ಲುವ ಲೆಕ್ಕಾಚಾರದಲ್ಲಿ ಶಾಸಕರು, ಸಚಿವರನ್ನ ಅಖಾಡಕ್ಕೆ ಇಳಿಸಲು ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಇನ್ನು ಬಾಗಲಕೋಟೆ ವಿಧಾನಸಭಾ ಉಪ …
Read More »ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವಕ ಸಾವು
ಕಲಬುರಗಿ: ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವ ರೈತ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಾದಿಪುರ ತಾಂಡಾದಲ್ಲಿ ನಡೆದಿದೆ. ಮಹೇಶ್ ಚೌವ್ಹಾಣ್ (24) ಸಿಡಿಲಿಗೆ ಬಲಿಯಾದ ರೈತ. ಕಲಬುರಗಿ ಜಿಲ್ಲೆಯ ವಿವಿಧೆಡೆ ಇಂದು ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಜಮೀನಿನಲ್ಲಿ ಕಬ್ಬು ನಾಟಿ ಮಾಡಲೆಂದು ಹೋಗಿದ್ದ ಮಹೇಶ್ ಸಿಡಿಲಿಗೆ ಬಲಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. …
Read More »13 ವರ್ಷಗಳ ನರಕಯಾತನೆಗೆ ಮುಕ್ತಿ – ದಯಾಮರಣಕ್ಕೆ ಅನುಮತಿ ಪಡೆದಿದ್ದ ಹರೀಶ್ ರಾಣಾ ನಿಧನ
ನವದೆಹಲಿ: ಸುಪ್ರೀಂಕೋರ್ಟ್‌ನಿಂದ ದಯಾಮರಣಕ್ಕೆ ಅನುಮತಿ ಪಡೆದಿದ್ದ ಉತ್ತರ ಪ್ರದೇಶದ ಹರೀಶ್ ರಾಣಾ 13 ವರ್ಷಗಳ ನರಳಾಟದ ಬಳಿಕ ಇಂದು ಕೊನೆಯುಸಿರೆಳೆದಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದಿದೆ. 31 ವರ್ಷದ ಹರೀಶ್ ರಾಣಾ 2013ರಲ್ಲಿ ಪಂಜಾಬ್ ವಿವಿಯಲ್ಲಿ ಬಿಟೆಕ್ ಓದುವಾಗ ಹಾಸ್ಟೆಲ್‌ನ 4ನೇ ಫ್ಲೋರ್‌ನಿಂದ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಪೆಟ್ಟುಮಾಡಿಕೊಂಡಿದ್ದರು. ಅಂದಿನಿಂದ ಬ್ರೇನ್‌ಡೆಡ್ ಆಗಿದ್ದ ರಾಣಾಗೆ ತಂದೆ-ತಾಯಿಯೇ ಎಲ್ಲದಕ್ಕೂ ಆಸರೆಯಾಗಿದ್ದರು. ಮಾರ್ಚ್ 11ರಂದು ಸುಪ್ರೀಂಕೋರ್ಟ್ ದೇಶದಲ್ಲಿ ಇದೇ …
Read More »ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ವ್ಯವಸ್ಥಿತ ಕೊಲೆ – ಬೆಂಗಳೂರಲ್ಲಿ ಝೀರೋ ಎಫ್‌ಐಆರ್ ದಾಖಲು
ಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಅಜಿತ್ ಪವಾರ್ ಅವರದ್ದು ವಿಮಾನ ದುರಂತವಲ್ಲ ಅದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಝೀರೋ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಅಜಿತ್ ಪವಾರ್ ಅವರ ಅಳಿಯ ರೋಹಿತ್ ರಾಜೇಂದ್ರ ಪವಾರ್ ರಿಂದ ದೂರು ದಾಖಲಾಗಿದೆ. ಪ್ರಕರಣದಲ್ಲಿ ಹಲವು ಆಂಶಗಳನ್ನ ಅಳವಡಿಸುವ ಮೂಲಕ ಇದೊಂದು ದುರಂತವಲ್ಲ ವ್ಯವಸ್ಥಿತ ಕೊಲೆಯೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲಾಗಿದೆ. ಹಾರಾಟದ …
Read More »ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ: ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು
ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಅಂಗನವಾಡಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಂಗನವಾಡಿ ನೌಕರರ …
Read More »
Laxmi News 24×7