ಬೆಳಗಾವಿ: ಟ್ಯಾಂಕರ್ ನಲ್ಲಿ ಅಕ್ರಮವಾಗಿ ಸ್ವೀರಿಟ್ ಸಾಗಿಸುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ಮಾಡಿ ಟ್ಯಾಂಕರ್ ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಜಾಂಬೋಟಿಯಿಂದ ಕಣಕುಂಬಿಗೆ ಹೋಗುವ ರಸ್ತೆಯಲ್ಲಿ ಟ್ಯಾಂಕರ್ ವಶಕ್ಕೆ ಪಡೆಯಲಾಗಿದೆ. ಟ್ಯಾಂಕರ್ ನಲ್ಲಿ 14,000.ಲೀ ಸ್ವೀರಿಟ್ ಅಕ್ರಮವಾಗಿ ಮಾರಾಟಕ್ಕಾಗಿ ಸಾಗಾಣಿಕೆ ಮಾಡಲಾಗುತಿತ್ತು. ಟ್ಯಾಂಕರ್ ಚಾಲಕ ಸಿದ್ದರಾಜು ಪುಟ್ಟಸ್ವಾಮಿ ಶೆಟ್ಟಿ (47) ವಿರುದ್ಧ ಬಿಎನ್ಎಸ್‌ಎಸ್ ಕಾಯ್ದೆ 2023ರ ಕಲಂ 35(3)ರನ್ವಯ ಮುಂದಿನ ತನಿಖೆಗೆ ಹಾಜರಾಗಲು ನೋಟಿಸ್ ಜಾರಿ …
Read More »ಪಂತನಗರದಲ್ಲಿ ₹3.50 ಕೋಟಿ ವೆಚ್ಚದ ರಸ್ತೆ-ಚರಂಡಿ ಕಾಮಗಾರಿಗಳಿಗೆ ಚಾಲನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ಪಂತನಗರದಲ್ಲಿ ಸುಮಾರು ₹3.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಡಾಂಬರ್, ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಈ ಮಹತ್ವದ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.ಈ ಸಂದರ್ಭದಲ್ಲಿ ನಾಗೇಶ್ ದೇಸಾಯಿ, ಅಪ್ಸರ್ ಜಮಾದಾರ್, ಬಸವರಾಜ ಮ್ಯಾಗೋಟಿ, ಸಣ್ಣಯಲ್ಲಪ್ಪ ತಳವಾರ, ಸದಾಶಿವ ಹಿಟ್ಟಣಗಿ, …
Read More »ಬೆಳಗಾವಿಯಲ್ಲಿ ಮೇ. 25 ರಂದು ನೇರ ಸಂದರ್ಶನ
ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಬೆಳಗಾವಿ, ವತಿಯಿಂದ ಮೇ. 25 2026 ರ ಬೆಳಗ್ಗೆ 9.30 ರಿಂದ ಮದ್ಯಾಹ್ನ 2 ಗಂಟೆಯವರೆಗೆ ಎಸ್.ಎಸ್.ಎಲ್.ಸಿ, ಐಟಿಐ, ಪಿಯುಸಿ, ಡಿಪ್ಲೋಮಾ ಪುರುಷ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ “ನೇರ ಸಂದರ್ಶನ” ವನ್ನು ಬೆಳಗಾವಿಯ ಹೊನಗಾ ಜಿನಾಬಕೂಲ್ ಫೋರ್ಜ, ಪೈ.ಲಿ.ನಲ್ಲಿ ಆಯೋಜಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು https://tinyurl.com/ysb458p9 ಈ ವೆಬ್‌ಸೈಟನಲ್ಲಿ ಹೆಸರು ನೊಂದಾಯಿಸಿ ಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ …
Read More »ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಗೆ ಹಂಚಿಕೆ ಮಾಡಲಾಗಿರುವ 24 ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಹಾಗೂ ಪೌರಕಾರ್ಮಿಕರ ವಿಶೇಷ ನೇಮಕಾತಿ 2022 ಹಾಗೂ ಸಂಖ್ಯಾತಿರಿಕ್ತ ಪೌರಕಾರ್ಮಿಕರ ನೇಮಕಾತಿ 2023ರಲ್ಲಿ ಬಾಕಿ ಉಳಿದ ಪರಿಶಿಷ್ಠ ಪಂಗಡದ ಒಟ್ಟು 13 ಬ್ಯಾಕಲಾಗ್ ಹುದ್ದೆಗಳಿಗೆ ಪರಿಶಿಷ್ಠ ಪಂಗಡದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಮೇ.20 2026 ರಿಂದ ಜೂನ್ 19 2026 ರವರೆಗೆ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ …
Read More »ಶೂಟೌಟ್ ಮಾಡಿಕೊಂಡು ಬೆಳಗಾವಿಯ ಖ್ಯಾತ ವೈದ್ಯ ಆತ್ಮಹತ್ಯೆಗೆ ಶರಣು
ಬೆಳಗಾವಿ : ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹಿರಿಯ ವೈದ್ಯರೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಗಾವಿ ನಗರದಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ನಡೆದಿದೆ. ಡಾ. ದಿನೇಶ್ ಲಕ್ಷ್ಮಣ ಭಟ್ಕಳ (79) ಆತ್ಮಹತ್ಯೆ ಮಾಡಿಕೊಂಡ ವೈದ್ಯರು. ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರಾಗಿದ್ದು ಹಲವು ವರ್ಷಗಳಿಂದ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಡಾ. ಭಟ್ಕಳ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ತಾವೇ ತಮ್ಮ ಮೇಲೆ ಗುಂಡು ಹಾರಿಸಿಕೊಂಡು …
Read More »ಕ್ಷುಲ್ಲಕ ಕಾರಣಕ್ಕೆ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ..
ಗದಗ ಜಿಲ್ಲೆಯ Nargund ತಾಲೂಕಿನ ರಡ್ಡೆರನಾಗನೂರು ಗ್ರಾಮದಲ್ಲಿ ಗಂಡ-ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ವಿಶ್ವನಾಥ ಹಾದಿಮನಿ (28) ಎಂಬಾತನನ್ನು ಪತ್ನಿ ಕವಿತಾ ಹಾದಿಮನಿ ಕಬ್ಬಿಣದ ರಾಡ್ (ಹಾರಿ) ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ. 2022ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಮದುವೆಯ ನಂತರ ಕಲಹ ಶುರುವಾಗಿತ್ತು. ಕಳೆದ ಎರಡು ವರ್ಷಗಳಿಂದ ಕವಿತಾ ತವರು ಮನೆಯಲ್ಲಿ ವಾಸವಾಗಿದ್ದಳು. ಇತ್ತೀಚೆಗೆ ಕುಟುಂಬ ಕಾರ್ಯಕ್ರಮದ ನಿಮಿತ್ತ ಗಂಡನ ಮನೆಗೆ ಬಂದಿದ್ದ ವೇಳೆ …
Read More »ವಿವಿಧ ಅಭಿವೃದ್ದಿ ನಿಗಮ ನೇಮಕಾತಿಗೆ ಅರ್ಜಿ ಆಹ್ವಾನ – ಕೆಇಎ
ಬೆಂಗಳೂರು: ಕೃಷಿ ಮಾರಾಟ, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಮತ್ತು ಬೆಂಗಳೂರು ಜಲಮಂಡಲಿಯಲ್ಲಿ ಖಾಲಿ ಇರುವ ವಿವಿಧ ರೀತಿಯ ಒಟ್ಟು 37 ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಜೂನ್ 4 ಕೊನೇ ದಿನ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಪರಿಶಿಷ್ಟ ಜಾತಿಯ ಒಳ ಮೀಸಲಾತಿ ನಿಗದಿ ನಂತರ ಪರೀಕ್ಷೆ ನಡೆಸದೇ ಇರುವ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿದು, ಮರು …
Read More »ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ
ನವದೆಹಲಿ: 2019ರ ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್‌ನನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ತರಬೇತುದಾರನ ರೂಪದಲ್ಲಿ ಅಡಗಿದ್ದ ಹಮ್ಜಾ ಬುರ್ಹಾನ್ ಅಲಿಯಾಸ್ ‘ಡಾಕ್ಟರ್’ ಮೇಲೆ ಅಪರಿಚಿತ ವ್ಯಕ್ತಿಗಳು ಮುಜಾಫರಾಬಾದ್ ಕಚೇರಿಯೊಳಗೆ ನುಗ್ಗಿ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ ಬಳಿಕ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ಹಮ್ಜಾ ಬುರಾನ್‌ನ ನಿಜವಾದ ಹೆಸರು …
Read More »1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ ಮರುಪರಿಶೀಲಿಸಿ – ಶಿಕ್ಷಣ ಇಲಾಖೆಗೆ ಹೈಕೋರ್ಟ್ ಆದೇಶ
ಬೆಂಗಳೂರು: ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ನಿಗದಿಪಡಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನ ಮರು ಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಕಳೆದ ಮಾ.28ರಂದು ಶಿಕ್ಷಣ ಇಲಾಖೆಯು ಒಂದನೇ ತರಗತಿ ದಾಖಲಾತಿಗೆ ವಯೋಮಿತಿ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶ ಪ್ರಶ್ನಿಸಿ ಬೆಂಗಳೂರಿನ ಮಾಸ್ಟರ್ ಕೃಷ್ಣ, ಗಣೇಶ್ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ರಜಾಕಾಲೀನ ಏಕಸದಸ್ಯ ಪೀಠ ಇಂದು ವಿಚಾರಣೆ …
Read More »ಕೈ-ಕಮಲ ಕಾರ್ಯಕರ್ತರ ಮಧ್ಯೆ ಮಾರಾಮಾರಿ, ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ!
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿಅಭಿವೃದ್ಧಿ ಕೆಲಸಗಳ ಕ್ರೆಡಿಟ್ ಪಡೆಯುವ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಹೈಡ್ರಾಮಾ ನಡೆದಿದೆ. ಕೈ-ಕಮಲ ಪಾಳಯದ ನಡುವಿನ ‘ಕ್ರೆಡಿಟ್ ವಾರ್’ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ನೂರಾರು ಪೊಲೀಸರ ಸಮ್ಮುಖದಲ್ಲೇ ಉಭಯ ಪಕ್ಷಗಳ ಕಾರ್ಯಕರ್ತರು ಸರಿಸಮನಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ. ರಾಂಗುರ ಟು ಕೆ.ಆರ್.ಪೇಟೆ ಮಾರ್ಗದ ರಸ್ತೆ ಕಾಮಗಾರಿ ವೀಕ್ಷಣೆಗಾಗಿ ಮಾಜಿ ಶಾಸಕ ಸಿ.ಟಿ.ರವಿ ಅವರು ಭೇಟಿ ನೀಡಿದ್ದರು. ಈ ವೇಳೆ …
Read More »
Laxmi News 24×7