Breaking News

Laxminews 24x7

ಸಿಎಲ್‌ಪಿ ಸಭೆಯಲ್ಲಿ ಕೈಗೊಂಡ 3 ನಿರ್ಣಯಗಳೇನು?

ಬೆಂಗಳೂರು: ವಿಧಾನಸೌಧದಲ್ಲಿ ಇಂದು ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಮುಖ ಮೂರು ನಿರ್ಣಗಳನ್ನು ಅಂಗೀಕರಿಸಲಾಯಿತು. * ಮೊದಲ ನಿರ್ಣಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೊದಲ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಹೊಸ CLP ನಾಯಕರ ಆಯ್ಕೆಯನ್ನು ಕಾಂಗ್ರೆಸ್ ಹೈಕಮಾಂಡ್‌ಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಯ ಮಂಡಿಸಿದರು. ಡಾ. ಜಿ.ಪರಮೇಶ್ವರ್ ಅವರು ಅನುಮೋದನೆ ನೀಡಿದರು. ಸಭೆಯಲ್ಲಿದ್ದ ಎಲ್ಲಾ ಶಾಸಕರು ಕೈ ಎತ್ತುವ ಮೂಲಕ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದರು. * …

Read More »

ವಿಧಾನಸೌಧದ ಮುಂದೆ ಡಿಕೆಶಿ ಬೆಂಬಲಿಗರಿಂದ ‘ಡಿಕೆ..ಡಿಕೆ’ ಜಯಘೋಷ

ಬೆಂಗಳೂರು: ಸಿಎಲ್‌ಪಿ ಸಭೆ ಬಳಿಕ ಸಿದ್ದರಾಮಯ್ಯ  ಹಾಗೂ ಡಿಕೆ ಶಿವಕುಮಾರ್  ಹೊರಬಂದ ವೇಳೆ ವಿಧಾನಸೌಧದ ಬಳಿ ಡಿಕೆ ಬೆಂಬಲಿಗರು ‘ಡಿಕೆ…ಡಿಕೆ’ ಜಯಘೋಷ ಕೂಗುವ ಮೂಲಕ ಅಬ್ಬರಿಸಿದ್ದಾರೆ. ಸಿಎಲ್‌ಪಿ ಸಭೆ  ಬಳಿಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಂದೇ ಕಾರಿನಲ್ಲಿ ಲೋಕಭವನಕ್ಕೆ ತೆರಳಿದ್ದಾರೆ. ಲೋಕಭವನಕ್ಕೆ ತೆರಳುವಾಗ ವಿಧಾನಸೌಧದ ಉತ್ತರ ಗೇಟ್‌ನಲ್ಲಿ ಡಿಕೆ ಬೆಂಬಲಿಗರು ಭರ್ಜರಿ ಜಯಘೋಷ ಕೂಗಿದ್ದಾರೆ. ಮುಂದಿನ ಮುಖ್ಯಮಂತ್ರಿ ಡಿಕೆ ಎಂದು ಜೈಕಾರ ಹಾಕಿದ್ದಾರೆ. ಸಿದ್ದರಾಮಯ್ಯರ ಮುಂದೆಯೇ ಡಿಕೆ ಬೆಂಗಲಿಗರು …

Read More »

ಸಿದ್ದರಾಮಯ್ಯನವರೇ ರಾಷ್ಟ್ರ ರಾಜಕಾರಣಕ್ಕೆ ಬನ್ನಿ: ಕೆ.ಸಿ.ವೇಣುಗೋಪಾಲ್ ಮತ್ತೆ ಆಹ್ವಾನ

ಬೆಂಗಳೂರು: ಸಿದ್ದರಾಮಯ್ಯನವರೇ ನೀವು ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್  ಮತ್ತೆ ಆಹ್ವಾನ ನೀಡಿದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ  ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕೆ.ಸಿ.ವೇಣುಗೋಪಾಲ್ ಆಹ್ವಾನಿಸಿದರು. ನಿಮ್ಮ ಸೇವೆ ರಾಷ್ಟ್ರಕ್ಕೂ ಬೇಕು. ರಾಷ್ಟ್ರ ಮಟ್ಟಕ್ಕೂ ನೀವು ಬೇಕು ಎಂದು ಸಿಎಲ್‌ಪಿ ಸಭೆಯಲ್ಲಿ ಶಾಸಕರ ಎದುರೇ ವೇಣುಗೋಪಾಲ್ ಪ್ರಸ್ತಾಪ ಇಟ್ಟರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದ ಸಿದ್ದರಾಮಯ್ಯ ಅವರು ಸಭೆಯಲ್ಲಿ …

Read More »

ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ – ಜೂ.3ಕ್ಕೆ ಸಿಎಂ ಆಗಿ ಪ್ರಮಾಣವಚನರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ – ಜೂ.3ಕ್ಕೆ ಸಿಎಂ ಆಗಿ ಪ್ರಮಾಣವಚನ

ಬೆಂಗಳೂರು: ಲೋಕಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಡಿ.ಕೆ.ಶಿವಕುಮಾರ್‌ ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಸರ್ಕಾರ ರಚಿಸಲು ರಾಜ್ಯಪಾಲರು ಡಿಕೆಶಿಗೆ ಆಹ್ವಾನ ನೀಡಿದ್ದು, ಜೂ.3 ರಂದು (ಬುಧವಾರ) ಸಾಯಂಕಾಲ 4:05 ಕ್ಕೆ ಸಿಎಂ ಆಗಿ ಡಿ.ಕೆ.ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಧಾನಸೌಧದಲ್ಲಿ ಇಂದು ಸಂಜೆ ಸಿಎಲ್‌ಪಿ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ.ಶಿವಕುಮಾರ್‌ ಆಯ್ಕೆ ಆದರು. ಡಿಕೆಶಿ ಹೆಸರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. …

Read More »

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಚಾಲನೆ

ಗೋಕಾಕ: ಹಿರೇನಂದಿ ಗ್ರಾಮದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮಕ್ಕೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಚಾಲನೆ ನೀಡಿದರು. ಗೋಕಾಕ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಸಂಯುಕ್ತ ಆಶ್ರಯದಲ್ಲಿ ಕಾರ್ಖಾನೆ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಮಾಡಿದರು. ಈ ಸಂದರ್ಭದಲ್ಲಿ ಸ್ವತಃ ಸಂತೋಷ್ ಜಾರಕಿಹೊಳಿ ಅವರು ತಮ್ಮ ಆರೋಗ್ಯ ತಪಾಸಣಾ ಮಾಡಿಸುವ ಮೂಲಕ ಚಾಲನೆ ನೀಡಿದರು.

Read More »

ಭೀಮಾತೀರದಲ್ಲಿ ಹತ್ಯಾಕಾಂಡ – ಸ್ಥಳಕ್ಕೆ ಐಜಿಪಿ ಭೇಟಿ

ವಿಜಯಪುರ: ಭೀಮಾತೀರದಲ್ಲಿ ಹತ್ಯಾಕಾಂಡ ಪ್ರಕರಣ ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರು ಜನ ಹತ್ಯೆಯಾದ ಗೋವಿಂದಪುರದ ಜಮೀನಿಗೆ  ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶುಕ್ರವಾರ (ಮೇ 29) ಮಧ್ಯಾಹ್ನ 2:30ರ ಸುಮಾರಿಗೆ ಜಮೀನಿನಲ್ಲಿ ಕೆಲವರು ಕೆಲಸ ಮಾಡುತ್ತಿರುವ ಸಮಯದಲ್ಲಿ ಅನೇಕ ಜನ ಬಂದು ಅವರ ಮೇಲೆ ಚಾಕು, ಮಚ್ಚು ಹಾಗೂ ಬೇರೆ ಬೇರೆ ಆಯುಧಗಳಿಂದ ಹಲ್ಲೆ …

Read More »

ಬೆಳಗಾವಿ ಉತ್ತರ ವಲಯ ಐಜಿಪಿಯಾಗಿ ನೇಮಕಗೊಂಡ ಸಂದೀಪ ಪಾಟೀಲ ಅಧಿಕಾರ ಸ್ವೀಕಾರ

ಉತ್ತರ ವಲಯ ಐಜಿಪಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲ ಗುರುವಾರ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈವರೆಗಿನ ಉತ್ತರ ವಲಯ ಐಜಿಪಿ ಡಾ.ಚೇತನಸಿಂಗ್ ರಾಥೋರ್, ಪಾಟೀಲಗೆ  ಅಧಿಕಾರ ಹಸ್ತಾಂತರಿಸಿದರು. ಈ ಹಿಂದೆ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದೀಪ ಪಾಟೀಲ ಉತ್ತರ ಕರ್ನಾಟಕ ಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ, ಇಂಥವರು ಮಹಾರಾಷ್ಟ್ರ ಮತ್ತು ಗೋವಾ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಅತ್ಯಂತ ಸೂಕ್ಷ್ಮ ವಲಯಕ್ಕೆ ಐಜಿಪಿಯಾಗಿ ಬಂದಿರುವುದರಿಂದ …

Read More »

ಸೂರ್ಯವಂಶಿಯನ್ನು 14ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್.. ಪ್ರವೀಣ್ ತಾಂಬೆಯನ್ನು 41ನೇ ವಯಸ್ಸಿಗೆ ಐಪಿಎಲ್ ಆಡಿಸಿದ್ದೂ ದ್ರಾವಿಡ್..! 

ಅಲ್ಲಿದ್ದ ಜನ ನಕ್ಕಿದ್ದರು ಆ ದಿನ.. ಇದೇನು ಮಾಡಲು ಹೊರಟಿದ್ದಾರೆ ದ್ರಾವಿಡ್..? 13 ವರ್ಷದ ಹುಡುಗನನ್ನು ಐಪಿಎಲ್’ನಲ್ಲಿ ಆಡಿಸುವ ನಿರ್ಧಾರ..? ವಯಸ್ಸಿನಲ್ಲಿ ದ್ರಾವಿಡ್ ಅವರ ಸಣ್ಣ ಮಗನಿಗಿಂತಲೂ ಅವನು ಚಿಕ್ಕವನು.. ಇನ್ನೂ SSLC ಮೆಟ್ಟಿಲು ಹತ್ತಿಲ್ಲ.. ಆಗಲೇ ಐಪಿಎಲ್..? ‘ಇದೆಂಥಾ ಹುಚ್ಚಾಟ’ ಎಂದು ಕುತೂಹಲದ ಕಣ್ಣುಗಳಿಂದ ದ್ರಾವಿಡ್ ಅವರತ್ತ ನೋಡುತ್ತಿದ್ದಂತೆ, 1 ಕೋಟಿ 10 ಲಕ್ಷಕ್ಕೆ ಹುಡುಗನನ್ನು ರಾಜಸ್ಥಾನ ರಾಯಲ್ಸ್ ತಂಡಕ್ಕೆ ದ್ರಾವಿಡ್ ಖರೀದಿ ಮಾಡಿಯಾಗಿತ್ತು. ಅದೇ ಐಪಿಎಲ್ ಇತಿಹಾಸದ …

Read More »

ವೈದ್ಯಕೀಯ ಸಿಬ್ಬಂದಿ ಸೇವೆ ಪ್ರಶಂಸಾರ್ಹ

ಬೆಳಗಾವಿ: ತುರ್ತು ವೈದ್ಯಕೀಯ ವಿಭಾಗವು ಆಸ್ಪತ್ರೆ ಪ್ರಮುಖ ಆಧಾರಸ್ತಂಭವಾಗಿದೆ. ಅಪಘಾತಗಳು, ಹೃದಯಾಘಾತ, ಸ್ಟ್ರೋಕ್, ವಿಷಸೇವನೆ, ಗಂಭೀರ ಗಾಯಗಳು ಹಾಗೂ ಇತರ ಜೀವಾಪಾಯದ ಪರಿಸ್ಥಿತಿಗಳಲ್ಲಿ ರೋಗಿಯ ಜೀವ ಉಳಿಸುವ ಮೊದಲ ಜವಾಬ್ದಾರಿ ತುರ್ತು ವೈದ್ಯಕೀಯ ತಂಡದ ಮೇಲಿದೆ. ಇವರ ತ್ವರಿತ ನಿರ್ಧಾರ, ಪರಿಣತಿ ಹಾಗೂ ಮಾನವೀಯ ಸೇವೆ ಪ್ರತಿದಿನ ಅನೇಕ ಜೀವಗಳನ್ನು ಉಳಿಸುತ್ತಿದೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ …

Read More »

ದರ್ಶನಕ್ಕೆ ಮುಕ್ತವಾದ ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ಪುರಾತನ ವಿಠ್ಠಲ ದೇವಸ್ಥಾನ

ಹುಕ್ಕೇರಿ: ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಹುನ್ನೂರ ಆರ್‌ಸಿ ಗ್ರಾಮದಲ್ಲಿರುವ ಶತಮಾನದ ಪುರಾತನ ವಿಠ್ಠಲ ದೇವಸ್ಥಾನ ಜಲಾಶಯದ ನೀರು ಕಡಿಮೆಯಾಗಿರುವುದರಿಂದ ಭಕ್ತರ ದರ್ಶನಕ್ಕೆ ಲಭ್ಯವಾಗಿದೆ. 1928ರಲ್ಲಿ ಈ ವಿಠ್ಠಲ ದೇವಸ್ಥಾನ ನಿರ್ಮಿಸಿದ್ದು, ಗುತ್ತಿಯ ಮಣ್ಣಿನಿಂದ ವಿಠ್ಠಲ ಮೂರ್ತಿ ತಯಾರಿಸಲಾಗಿದೆ. ಆ ಮೂರ್ತಿಯ ಮೇಲೆ ಹೊದಿಸಿರುವ ಕಂಬಳಿ ವರ್ಷವಿಡಿ ನೀರಿನಲ್ಲಿದ್ದರೂ ಅದರಲ್ಲಿ ನೀರಿನಂಶ ಇರುವುದಿಲ್ಲ. ಹಾಗಾಗಿ ಇದೊಂದು ದೈವಿಕ ಪವಾಡ ಎನ್ನುತ್ತಾರೆ ಭಕ್ತರು. 1975-76ರಲ್ಲಿ ಹಿಡಕಲ್ ಜಲಾಶಯದಲ್ಲಿ ನೀರಿನ ಸಂಗ್ರಹದಿಂದ …

Read More »