Breaking News

ಕುಡಿಯುವುದಕ್ಕೆ ಹಣ ಕೊಟ್ಟಿಲ್ಲವೆಂದು ಪತ್ನಿಗೆ ಚಾಕು ಇರಿದ ಪತಿರಾಯ

Spread the love

ಬೆಂಗಳೂರು: ಕುಡಿಯುವುದಕ್ಕೆ ಹಣ ಕೊಟ್ಟಿಲ್ಲವೆಂದು ಗಂಡನನ್ನೇ ಪತ್ನಿಗೆ ಚಾಕು ಇರಿದ ಘಟನೆ ನಡೆದಿದೆ.ನಗರದ ಜಕ್ಕೂರು ಬಳಿಯ ಮುನೇಶ್ವರ ಬೀದಿಯಲ್ಲಿ ನಡೆದಿದೆ.

33 ವರ್ಷದ ಜಯಶ್ರೀ ಮೃತ ದುರ್ದೈವಿ. ಇವರಿಬ್ಬರು 15 ವರ್ಷದ ಹಿಂದೆ ವಿವಾಹವಾಗಿದ್ದರು.

ಇಬ್ಬರು ಮಕ್ಕಳ ಜೊತೆ ಮುನೇಶ್ವರ ಬೀದಿಯಲ್ಲಿ ವಾಸವಾಗಿದ್ದರು. ಪ್ರತಿನಿತ್ಯ ನಾಗರಾಜ್‌ ಹಣ ನೀಡುವಂತೆ ಪದೇ ಪದೇ ಪತ್ನಿಗೆ ಪೀಡಿಸುತ್ತಿದ್ದ. ಇದರಿಂದ ಶುರುವಾದ ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಚುಚ್ಚಿದ್ದಾನೆ.

ಇನ್ನು ನಾಗರಾಜ್​ ಕೂಲಿ ಕೆಲಸ ಮಾಡಿಕೊಂಡಿದ್ದು, ಅತ್ತ ಜಯಶ್ರೀ ಆಯಾ ಕೆಲಸ ಮಾಡಿಕೊಂಡಿದ್ದಾರೆ. ಪತಿ ನಾಗರಾಜ್ ಆಗಾಗ​ ಹಣ ನೀಡುವಂತೆ ಪೀಡಿಸುತ್ತಿದ್ದು, ಈ ಬಾರಿ ಜಗಳ ವಿಕೋಪಕ್ಕೆ ಹೋಗಿ ಈ ಘಟನೆ ಸಂಭವಿಸಿದೆ. ಈ ಘಟನೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲು ಮಾಡಿಕೊಂಡು ಆರೋಪಿ ನಾಗರಾಜ್​ನನ್ನು ಬಂಧಿಸಲಾಗಿದೆ.


Spread the love

About Laxminews 24x7

Check Also

ಒಳಮೀಸಲಾತಿ ಕುರಿತು ಇದೆ 27ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಆಹಾರ ಸಚಿವ:- ಕೆಹೆಚ್. ಮುನಿಯಪ್ಪ

Spread the loveಬೆಂಗಳೂರು: ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ‌ ಹಾಗೂ ಅಬಕಾರಿ ಸಚಿವರಾದ ಆರ್ .ಬಿ.ತಿಮ್ಮಾಪುರ ರವರ ನೇತೃತ್ವದಲ್ಲಿ ನಿಯೊಗವು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ