Breaking News

Pro Kabaddi | ಕಬಡ್ಡಿ: ಯೋಧಾಸ್‌ಗೆ ಗೆಲುವು

Spread the love

ಪುಣೆ : ಪ್ರದೀಪ್‌ ನರ್ವಾಲ್‌ (22 ಪಾಯಿಂಟ್ಸ್‌) ಅವರ ಮಿಂಚಿನ ಆಟದ ನೆರವಿನಿಂದ ಯು.ಪಿ.ಯೋಧಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸುಲಭ ಗೆಲುವು ಪಡೆಯಿತು.

ಬಾಳೇವಾಡಿಯ ಶಿವಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಯೋಧಾಸ್‌ 50-31 ರಲ್ಲಿ ದಬಾಂಗ್‌ ಡೆಲ್ಲಿ ತಂಡವನ್ನು ಮಣಿಸಿತು.

 

ವಿಜಯಿ ತಂಡ ವಿರಾಮದ ವೇಳೆಗೆ 29-14 ರಲ್ಲಿ ಮುನ್ನಡೆಯಲ್ಲಿತ್ತು.

 

ಪೈರೇಟ್ಸ್‌- ತಲೈವಾಸ್‌ ಪಂದ್ಯ ಟೈ: ಪಟ್ನಾ ಪೈರೇಟ್ಸ್‌ ಮತ್ತು ತಮಿಳ್ ತಲೈವಾಸ್‌ ನಡುವಿನ ದಿನದ ಮೊದಲ ಪಂದ್ಯ 33-33 ಪಾಯಿಂಟ್ಸ್‌ಗಳಿಂದ ‘ಟೈ’ನಲ್ಲಿ ಕೊನೆಗೊಂಡಿತು.

 

‍ಪ್ರಥಮಾರ್ಧದಲ್ಲಿ ಪೈರೇಟ್ಸ್‌ 20-14 ರಲ್ಲಿ ಮುನ್ನಡೆ ಸಾಧಿಸಿತ್ತು. ನರೇಂದರ್‌ (14 ಪಾಯಿಂಟ್ಸ್‌) ಅವರ ಉತ್ತಮ ಆಟದ ನೆರವಿನಿಂದ ಎರಡನೇ ಅವಧಿಯಲ್ಲಿ ತಿರುಗೇಟು ನೀಡಿದ ತಲೈವಾಸ್‌ ಸೋಲು ತಪ್ಪಿಸಿಕೊಂಡಿತು.

 

ನಾಳೆಯಿಂದ ಹೈದರಾಬಾದ್‌ನಲ್ಲಿ ಪಂದ್ಯ: ಬುಧವಾರದ ಪಂದ್ಯದೊಂದಿಗೆ ಲೀಗ್‌ನ ಪುಣೆ ಲೆಗ್‌ಗೆ ತೆರೆಬಿದ್ದಿದೆ. ಅಂತಿಮ ಲೆಗ್‌ನ ಪಂದ್ಯಗಳು ಹೈದರಾಬಾದ್‌ನ ಗಚ್ಚಿಬೌಳಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ನಡೆಯಲಿದೆ.

 

ಶುಕ್ರವಾರದ ಪಂದ್ಯಗಳು

* ಪುಣೇರಿ ಪಲ್ಟನ್‌- ಹರಿಯಾಣ ಸ್ಟೀಲರ್ಸ್

* ಬೆಂಗಾಲ್‌ ವಾರಿಯರ್ಸ್‌- ತೆಲುಗು ಟೈಟನ್ಸ್‌

* ಗುಜರಾತ್‌ ಜೈಂಟ್ಸ್‌- ಬೆಂಗಳೂರು ಬುಲ್ಸ್‌


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ