Breaking News

ನೋಟುಗಳ ಮೇಲೆ ಲಕ್ಷ್ಮಿ, ಗಣೇಶನ ಫೋಟೋವನ್ನು ಮುದ್ರಿಸಿ – ಮೋದಿಗೆ ಕೇಜ್ರಿವಾಲ್ ಮನವಿ

Spread the love

ನವದೆಹಲಿ: ಹೊಸ ನೋಟುಗಳ ಮೇಲೆ ಇನ್ಮುಂದೆ ಲಕ್ಷ್ಮಿ ದೇವಿ ಮತ್ತು ಗಣೇಶನ ಫೋಟೋಗಳನ್ನು ಮುದ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಒತ್ತಾಯಿಸಿದ್ದಾರೆ.

ಹೊಸ ಕರೆನ್ಸಿ ನೋಟುಗಳ ಒಂದು ಬದಿಯಲ್ಲಿ ಮಹಾತ್ಮಾ ಗಾಂಧಿಯವರ (Mahatma Gandhi) ಫೋಟೋ ಮತ್ತು ಇನ್ನೊಂದು ಬದಿಯಲ್ಲಿ ಲಕ್ಷ್ಮಿ ದೇವಿ (Lakshmi)  ಮತ್ತು ಗಣೇಶನ (Ganesh) ಫೋಟೋಗಳನ್ನು ಮುದ್ರಿಸಬಹುದು. ಕರೆನ್ಸಿ ನೋಟುಗಳ ಮೇಲೆ ಎರಡು ದೇವರ ಫೋಟೋಗಳಿರುವುದು ದೇಶದ ಏಳಿಗೆಗೆ ಸಹಾಯವಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಯತ್ನಗಳನ್ನು ಮಾಡಿದರೂ, ಕೆಲವೊಮ್ಮೆ ದೇವರು ಮತ್ತು ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ನಮ್ಮ ಪ್ರಯತ್ನಗಳು ಫಲ ನೀಡುವುದಿಲ್ಲ. ಹೀಗಾಗಿ ನಮ್ಮ ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಸೇರಿಸುವಂತೆ ನಾನು ಪ್ರಧಾನಿ ಮೋದಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. 


Spread the love

About Laxminews 24x7

Check Also

ಪ್ರಜಾಪ್ರಭುತ್ವ ಉಳಿವಿಗೆ ದೇಶದ ಜನ ಒಂದಾಗಿ: ಮಲ್ಲಿಕಾರ್ಜುನ ಖರ್ಗೆ

Spread the love ನವದೆಹಲಿ: ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನ ಉಭಯ ಸದನಗಳಿಂದ 146 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇದು ಕೇಂದ್ರ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ