Breaking News

ಪುನೀತ್ ನೆನಪಲ್ಲಿ ವೇದಿಕೆ ಮೇಲೆ ಒಂದಾದ ದೊಡ್ಮನೆ ಕುಟುಂಬ

Spread the love

ಮೈಸೂರು ಅರಸರ ಕುಟುಂಬದ ಬಳಿಕ ಕರ್ನಾಟಕದ ಜನ ಅತಿ ಹೆಚ್ಚು ಪ್ರೀತಿಸಿದ, ಗೌರವಿಸಿದ ಕುಟುಂಬವೆಂದರೆ ಅದು ದೊಡ್ಮನೆ ಕುಟುಂಬ.

ದೊಡ್ಮನೆ ಕುಟುಂಬದ ಬಹುತೇಕ ಸದಸ್ಯರು ಇಂದು ಪುನೀತ ಪರ್ವ ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಏರಿ ಅಪ್ಪುವನ್ನು ಭಾವುಕವಾಗಿ ನೆನಪು ಮಾಡಿಕೊಂಡರು.

 

ಪುನೀತ ಪರ್ವ’ ಕಾರ್ಯಕ್ರಮದಲ್ಲಿ ವಿಜಯಪ್ರಕಾಶ್ ಅವರು ಅಪ್ಪು ‘ಗೊಂಬೆ ಹೇಳುತೈತೆ’ ಹಾಡು ಹಾಡಿದರು. ಹಾಡು ಮುಗಿವ ವೇಳೆಗೆ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ದೊಡ್ಮನೆಯ ಇನ್ನೂ ಹಲವು ಸದಸ್ಯರು ಒಟ್ಟಿಗೆ ವೇದಿಕೆ ಏರಿದರು.

ದೊಡ್ಮನೆ ಕುಟುಂಬವು ವೇದಿಕೆಗೆ ಬಂದ ಕೂಡಲೇ ವೇದಿಕೆ ಮುಂದೆ ಕೂತಿದ್ದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಸಹ ಎದ್ದು ನಿಂತು ಆ ಭಾವುಕ ಕ್ಷಣಕ್ಕೆ ಸಾಕ್ಷಿಯಾದರು.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ