ಬೆಳಗಾವಿಯ ನೆಹರು ನಗರದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅದ್ದೂರಿಯಾಗಿ ಆಚರಿಸಲಾಯಿತು. ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡುವ ಐತಿಹಾಸಿ ನಿರ್ಧಾರ ಕೈಗೊಂಡಿದಕ್ಕೆ ಹರ್ಷ ವ್ಯಕ್ತಪಡಿಸಲಾಯಿತು.
ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಬೆಳಗಾವಿಯ ನೆಹರು ನಗರದ ನಿವಾಸಿಗಳು ವಿಜಯೋತ್ಸವ ರೀತಿಯಲ್ಲಿ ಆಚರಿಸಿದರು.ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಮಂಡಳ ವತಿಯಿಂದ ಆಯೋಜಿಸಿದ್ದ ಜಯಂತೋತ್ಸವ ಕಾರ್ಯಕ್ರಮದಲ್ಲಿ ನಗರದ ನೂರಾರು ಯುವಕರು ಪಾಲ್ಗೊಂಡು ಶ್ರೀ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸೂಚಿಸಿದರು.ನಂತರ ಪುಷ್ಪ ಸಲ್ಲಿಸಿ ಎಲ್ಲರಿಗೂ ಸಿಹಿ ವಿತರಿಸಿದರು.ಜೊತೆಗೆ ಮೀಸಲಾತಿ ಪ್ರಮಾಣವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.ಇದೇ ಸಂದರ್ಭದಲ್ಲಿ ಎಲ್ಲರೂ ಪರಸ್ಪರ ಶುಭಾಶಯ ಕೋರುತ್ತ ವಾಲ್ಮೀಕಿ ಗುರುಗಳಿಗೆ ಜೈಕಾರ ಹಾಕಿದರು.
ನಂತರ ಮಾತಾನಾಡಿದ ಮುಖಂಡರೊಬ್ಬರು ನಾವಿವತ್ತು ಶ್ರೀ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ವಿಜಯೋತ್ಸವ ರೀತಿಯಲ್ಲಿ ಆಚರಿಸುತ್ತಿದ್ದೆವೆ.ಮೀಸಲಾತಿ ಪ್ರಮಾಣ ಹೆಚ್ಚಿಗೆ ಮಾಡುವ ಮೂಲಕ ರಾಜ್ಯ ಸರ್ಕಾರ ಶೋಷಿತರಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿದೆ ಎಂದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ನ್ಯಾಯವಾದಿ ಪ್ರೀತಿ ಕುಕಡೆ ಅವರು ಮಾತನಾಡಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡುವ ಐತಿಹಾಸಿ ನಿರ್ಧಾರವನ್ನು ವಾಲ್ಮೀಕಿ ಜಯಂತಿ ಸಂದರ್ಭದಲ್ಲೇ ರಾಜ್ಯ ಸರ್ಕಾರ ಕೈಗೊಂಡಿದೆ.ಈ ಒಂದು ನಿರ್ಧಾರದಿಂದ ನಮ್ಮ ಸಮುದಾಯದಲ್ಲಿ ಸಂತಸ ಮನೆ ಮಾಡಿದೆ.ಆದ್ದರಿಂದ ನಾವು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟಕ್ಕೆ ಧನ್ಯವಾದಗಳನ್ನು ತಿಳಿಸುತ್ತೆವೆಂದರು.
ಈ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಮಂಡಳ ಅಧ್ಯಕ್ಷರಾದ ಬಸವರಾಜ ಕಲಕಾಂಬಕರ್, ಉಪಾಧ್ಯಕ್ಷ ಕೃಷ್ಣಾ ನಾಯಿಕ,ಮಾಜಿ ಅಧ್ಯಕ್ಷರಾದ ರಾಮಚಂದ್ರ ಪೂಜಾರಿ,ಬಸವರಾಜ ಸಿದ್ರಾಯಿ ಕಲಕಾಂಬಕರ್,ಸವೀತಾ ಗುಡ್ಡಾಕಾಯಿ,ಬಾಳು ಕುರಾಡೆ,ವಿಜಯ ಕಲಕಾಂಬಕರ್, ಶಂಕರ ನಾಯಿಕ,ಶಿವರಾಜ ಕಲಕಾಂಬಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.