Breaking News

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಆಯಂಬುಲೆನ್ಸ್​​ ಚಾಲನೆ: 4 ವಾಹನಗಳಿಗೆ ಡಿಕ್ಕಿ

Spread the love

ತ್ತರಕರ್ನಾಟಕದಲ್ಲಿ ಮಳೆ ಜೀವಗಳಿಗೆ ಕಂಟಕವಾಗಿದೆ. ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು 25 ವರ್ಷದ ಕವಿತಾ ಎಂಬ ಯುವತಿಯೊಬ್ಬಳು ಸಾವನಪ್ಪಿದ್ದಾಳೆ.ಬೆಂಗಳೂರು: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಆಯಂಬುಲೆನ್ಸ್ ಚಲಾಯಿಸಿ, 4 ವಾಹನಗಳಿಗೆ ಡಿಕ್ಕಿ ಹೊಡೆದಿರುವಂತಹ ಘಟನೆ ಬೆಂಗಳೂರಿನ ವಿಲ್ಸನ್​ ಗಾರ್ಡನ್​ ಠಾಣಾ ವ್ಯಾಪ್ತಿಯ 10ನೇ ಕ್ರಾಸ್​ ಬಳಿ ನಡೆದಿದೆ.

ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಸಂಜೀವ್​​ನನ್ನು ಹಿಡಿದು ಜನ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಲ್ಸನ್​ ಗಾರ್ಡನ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಸಿಡಿಲು ಬಡಿದು ಯುವತಿ ಸಾವು:

ಬೆಳಗಾವಿ: ಉತ್ತರಕರ್ನಾಟಕದಲ್ಲಿ ಮಳೆ ಜೀವಗಳಿಗೆ ಕಂಟಕವಾಗಿದೆ. ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು 25 ವರ್ಷದ ಕವಿತಾ ಎಂಬ ಯುವತಿಯೊಬ್ಬಳು ಸಾವನಪ್ಪಿದ್ದಾಳೆ. ಸವದತ್ತಿ ತಾಲೂಕಿನ ದಡೇರಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಇನ್ನು ಬೆಳಗಾವಿ ನಗರದ ವಂಟಮೂರಿ ಕಾಲೋನಿಯ ಗಣಪತಿ ಮಂಟಪಕ್ಕೆ ನುಗ್ಗಿದ ನೀರು‌, ಮೂರ್ತಿ ಪ್ರತಿಷ್ಠಾಪನಗೆೆ ತೊಂದರೆಯಾಗಿದೆ.

 

ಸಿಡಿಲು ಬಡಿದು ಮಹಿಳೆ ದುರ್ಮರಣ:

ಕೋಲಾರ: ಕೋಲಾರದಲ್ಲೂ ಸಿಡಿಲು ಬಡಿದು ಹೊಲದಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯೊಬ್ರು ಬಲಿಯಾಗಿದ್ದಾರೆ. ಮುಳಬಾಗಿಲು ತಾಲೂಕಿನ ಮಣಿಘಟ್ಟೆ ಮಿಟ್ಟೆ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, 28ವರ್ಷದ ರವಳಿ ಎಂಬಾಕೆ ಮೃತ ದುರ್ದೈವಿಯಾಗಿದ್ದಾರೆ.

ಗುದನಾಳದಲ್ಲಿ ಚಿನ್ನವಿಟ್ಟುಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ