Breaking News

ತಹಸೀಲದಾರ ಹೂಗಾರ್, ತಾಪಂ ಇಒ ಸಿದ್ನಾಳ ಮೇಲೆ ಜಾತಿನಿಂದನೆ, ರಾಷ್ಟದೋಹ ಕೇಸ್ ದಾಖಲಿಸಲು ಆಗ್ರಹ

Spread the love

 

ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅಂಬೇಡ್ಕರ ಭಾವಚಿತ್ರ ಇಡದೇ ಅವಮಾನಿಸಿರುವ ಆರೋಪ

ಹುಕ್ಕೇರಿ ಪಟ್ಟಣದಲ್ಲಿ ಏರ್ಪಡಿಸಿದ್ದ ೭೫ನೇ ಸ್ವಾತಂತ್ರ್ಯದ ಅಮೃತ ಮಹೋತ್ಸದವದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಅವಮಾನ ಮಾಡಿರುವ ತಹಸೀಲದಾರ ಡಾ.ಡಿ.ಎಚ್.ಹೂಗಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಮೇಲೆ ಜಾತಿನಿಂದನೆ ಹಾಗೂ ರಾಷ್ಟ್ರದೋಹ ಕೇಸ್ ದಾಖಲಿಸುವಂತೆ ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟಿಸಿದರು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಜಮಾಯಿಸಿದ ಡಿಎಸ್‌ಎಸ್ ಪದಾಧಿಕಾರಿಗಳು, ಕರ್ತವ್ಯದಲ್ಲಿ ನಿಷ್ಕಾಳಜಿತನ ತೋರಿ ಘಟನೆಗೆ ಕಾರಣವಾದವರ ಮೇಲೆ ಕೂಡಲೇ ದೂರು ದಾಖಲಿಸಬೇಕು.

ಒಂದು ವೇಳೆ ವಿಳಂಬವಾದಲ್ಲಿ ಸರ್ಕಾರದ ವಿವಿಧ ಕಚೇರಿಗಳಿಗೆ ದಿಢೀರ್‌ನೆ ಘೇರಾವ್ ಹಾಕಲಾಗುವುದು ಎಚ್ಚರಿಸಿದರು.

ಎಸ್.ಕೆ.ಹೈಸ್ಕೂಲ್‌ನಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ತಹಸೀಲದಾರ ಡಿ.ಎಚ್.ಹೂಗಾರ್, ತಾಪಂ ಇಒ ಉಮೇಶ ಸಿದ್ನಾಳ ಅವರು ಭಾರತರತ್ನ ಡಾ.ಬಾಬಾಸಾಹೇಬ ಅಂಬೇಡ್ಕರರ ಭಾವಚಿತ್ರ ಇಟ್ಟು ಪೂಜೆ ಮಾಡದೇ ಅಗೌರವ ತೋರಿದ್ದಾರೆ. ಅಲ್ಲದೇ ದೇಶ ಕಂಡ ಅಪ್ರತೀಮ್, ಮಹಾನ್ ರಾಷ್ಟ್ರಪ್ರೇಮಿ ಅಂಬೇಡ್ಕರರಿಗೆ ಅಪಮಾನ ಎಸಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೭೫ ವರ್ಷ ಗತಿಸಿದೆ. ಆದರೆ, ಈ ಇಬ್ಬರು ಅಧಿಕಾರಿಗಳು ಇನ್ನೂ ದಲಿತ ವಿರೋಧಿ ಮನಸ್ಥಿತಿಯಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಸೇರಿದಂತೆ ಪ್ರಮುಖ ರಾಷ್ಟಿಯ ಹಬ್ಬಗಳ ಆಚರಣೆಯಲ್ಲಿ ಕಡ್ಡಾಯವಾಗಿ ಅಂಬೇಡ್ಕರ ಮತ್ತು ಆಯಾ ಸಮುದಾಯಗಳ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಇಟ್ಟು ಪೂಜಿಸಬೇಕು ಎಂಬ ನಿಯಮವಿದೆ. ಅದರಂತೆ ಸೋಮವಾರ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಈ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಹೂಗಾರ್, ಸಿದ್ನಾಳ ಸಂಪೂರ್ಣ ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಯಾದಗೂಡದ ಮಲ್ಲಿಕಾರ್ಜುನ ರಾಶಿಂಗೆ ಅವರು ಘಟನೆಗೆ ಕಾರಣವಾದ ಈ ಇಬ್ಬರು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಮಂಗಳವಾರ ದೂರು ನೀಡಿದ್ದಾರೆ.

ಪುರಸಭೆ ಸದಸ್ಯ ಸದಾಶಿವ ಕರೆಪ್ಪಗೋಳ, ಮಾಜಿ ಸದಸ್ಯ ದಿಲೀಪ ಹೊಸಮನಿ, ನ್ಯಾಯವಾದಿಗಳಾದ ಆನಂದ ಕೆಳಗಡೆ, ರಾಜು ಮೋಶಿ, ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ, ಪ್ರಕಾಶ ಮೈಲಾಖೆ, ಶ್ರೀನಿವಾಸ ವ್ಯಾಪಾರಿ, ಲಕ್ಷ್ಮಣ ಹೂಲಿ, ಕೆಂಪಣ್ಣಾ ಶಿರಹಟ್ಟಿ, ವೆಂಕಟೇಶ ಹೊಸೂರ, ಮಂಜುನಾಥ ಪಡದಾರ, ಬಸವರಾಜ ದೇವುಗೋಳ, ಆನಂದ ಖಾತೇದಾರ, ರಾಜು ಮುಥಾ, ಶಿವು ದೊಡಮನಿ, ಮಲ್ಲು ಕುರಣಿ, ಚಿದಾನಂದ ಹಿರೆಕೆಂಚನ್ನವರ, ರವಿ ಜಾಡರ, ಬಾಹುಸಾಹೇಬ ಪಾಂಡ್ರೆ, ಸುನೀಲ ಖಾತೇದಾರ ಮತ್ತಿತರರು ಉಪಸ್ಥಿತರಿದ್ದರು.

 


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ