Breaking News

ಕಡಿಮೆ ಬೆಲೆಗೆ ಸಿಗುತ್ತೆ ಅಂತ ಗೋವಾದಿಂದ ಈ ಇಬ್ಬರು ತಂದ ಮದ್ಯ ಎಷ್ಟು ಗೊತ್ತಾ.? ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ.?

Spread the love

ಕಾರವಾರ: ಗೋವಾದಲ್ಲಿ ಮದ್ಯದ ದರ ಕರ್ನಾಟಕಕ್ಕೆ ಹೋಲಿಕೆ ಮಾಡಿದ್ರೇ ಕಡಿಮೆ. ಹೀಗೆ ಕಡಿಮೆ ರೇಟ್ ಗೆ ಸಿಗುತ್ತೆ ಅಂತ ಇಬ್ಬರು ಆಸಾಮಿಗಳು ಮಾತ್ರ ತಂದಿದ್ದು ಲಕ್ಷ ಗಟ್ಟಲೇ ಮದ್ಯ. ಹಾಗಾದ್ರೇ.. ಅವರು ತಂದಿ ಮದ್ಯವೆಷ್ಟು, ಸಿಕ್ಕಿ ಹಾಕಿಕೊಂಡಿದ್ದೇಗೆ ಎನ್ನುವ ಬಗ್ಗೆ ಮುಂದೆ ಓದಿ..

 

ಸಾಗರ-ಪಣಜಿ ನಡುವೆ ಓಡಾಡುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಅನ್ನು ಗೋವಾದಲ್ಲಿ ಶಿವಮೊಗ್ಗ ಮೂಲಕ ನಾಗರಾಜ್ (35) ಹಾಗೂ ಸಾಗರ್ (25) ಹತ್ತಿದ್ದಾರೆ. ಅವರಿಬ್ಬರು ತಲಾ ಮೂರು ಬ್ಯಾಗ್ ಕೂಡ ಇತ್ತು.

 

ಆದ್ರೇ.. ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಅಬಕಾರಿ ಇಲಾಖೆ ಹಾಗೂ ಪೊಲೀಸರು ಹೀಗೆ ಗೋವಾದಿಂದ ಬಂದಂತ ಕೆ ಎಸ್ ಆರ್ ಟಿ ಸಿ ಬಸ್ ತಪಾಸಣೆ ಮಾಡಿದ್ದಾರೆ. ಈ ವೇಳೆ ನಾಗರಾಜ್ ಹಾಗೂ ಸಾಗರ್ ಬಳಿಯಲ್ಲಿದ್ದಂತ ಬ್ಯಾಗ್ ಗಳನ್ನು ಅನುಮಾನದಿಂದ ಪರಿಶೀಲಿಸಿದ್ದಾರೆ.

 

ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಬ್ಯಾಗ್ ತಪಾಸಣೆ ಮಾಡಿದಾಗ ಬರೋಬ್ಬರಿ 1.27 ಲಕ್ಷ ಮೌಲ್ಯದ ಗೋವಾ ಮದ್ಯ ಸಿಕ್ಕಿದೆ. ವಿವಿಧ ಬ್ರಾಂಡ್ ನ ಗೋವಾ ಮದ್ಯವನ್ನು ಅಕ್ರಮವಾಗಿ ಕರ್ನಾಟಕಕ್ಕೆ ತಂದಂತ ಇಬ್ಬರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ