Breaking News

ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ಕೆಳಗೆ ಬಿದ್ದ ವಿದ್ಯಾರ್ಥಿ – ಮೈ ಝುಮ್ಮೆನಿಸುವ ದೃಶ್ಯ ಸೆರೆ!

Spread the love

ಶಿವಮೊಗ್ಗ: ಚಲಿಸುತ್ತಿದ್ದ ಬಸ್‍ನ್ನು ಓಡಿ ಹೋಗಿ ಹತ್ತಲು ಯತ್ನಿಸಿದ ವಿದ್ಯಾರ್ಥಿಯೋರ್ವ ಬಸ್‍ನಿಂದ ಕೆಳಗೆ ಬಿದ್ದ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್‍ನಲ್ಲಿ ನಡೆದಿದೆ.

ಸಾಗರ ತಾಲೂಕಿನ ಇಡುವಾಣಿಯ ಚಿಪ್ಪಲಮಕ್ಕಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ವೈಭವ್ ಬಸ್‍ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ. ವೈಭವ್ ಬಸ್ ಹತ್ತಲು ಬಸ್ ನಿಲ್ದಾಣದ ಕಡೆ ಹೋಗುತ್ತಿದ್ದ. ಅಷ್ಟರಲ್ಲಾಗಲೇ ಬಸ್ ನಿಲ್ದಾಣದಿಂದ ಹೊರಟಿದೆ. ಹೀಗಾಗಿ ವಿದ್ಯಾರ್ಥಿ ವೈಭವ್ ಚಲಿಸುತ್ತಿದ್ದ ಬಸ್ ಹತ್ತಲು ಪ್ರಯತ್ನಿಸಿ, ಸಾಧ್ಯವಾಗದೇ ಬಸ್‍ನಿಂದ ಕೆಳಗೆ ಬಿದ್ದಿದ್ದಾನೆ. 

ವೈಭವ್ ಶಾಲಾ ಬ್ಯಾಗ್ ಅನ್ನು ಬೆನ್ನು ಹಿಂದೆ ಹಾಕಿಕೊಂಡಿದ್ದರಿಂದ ಅಂಗಾತ ಬಿದ್ದರೂ, ವಿದ್ಯಾರ್ಥಿಗೆ ಯಾವುದೇ ಗಾಯಗಳು ಆಗಿಲ್ಲ. ವಿದ್ಯಾರ್ಥಿಯನ್ನು ಶಾಲಾ ಬ್ಯಾಗ್ ಬದುಕಿಸಿದೆ. ಇದೀಗ ವಿದ್ಯಾರ್ಥಿ ಬಸ್ ಹತ್ತಲು ಹೋಗಿ ಬಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿ ವೈರಲ್ ಆಗುತ್ತಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ