Breaking News

ವಿಆರ್​ಎಲ್​ ಹೆಸರಲ್ಲಿ ವಂಚನೆ: ನಕಲಿ ವೆಬ್​​ಸೈಟ್​ ಸೃಷ್ಟಿಸಿ ಗ್ರಾಹಕರಿಗೆ ಮೋಸ, ಎಫ್​ಐಆರ್​ ದಾಖಲು

Spread the love

ಬೆಂಗಳೂರು: ವಿಆರ್​ಎಲ್​ ಕಂಪನಿಗೆ ಹೋಲುವಂತೆ ನಕಲಿ ವೆಬ್​ಸೈಟ್​ ಸೃಷ್ಟಿಸಿ, ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ದೀಪಕ್​ ಕೌಶಿಕ್​ ಎಂಬಾತನ ವಿರುದ್ಧ ಕೊಡಿಗೇಹಳ್ಳಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಆರೋಪಿ ದೀಪಕ್​ ಕೌಶಿಕ್​ ಹೈದರಾಬಾದ್​ನಲ್ಲಿರುವ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಟ್ರಾನ್ಸ್​ಪೋರ್ಟೇಷನ್​ ಮಾಡುವುದಾಗಿ ಬೆಂಗಳೂರಿನ ಬೃಂದಾ ಕೆ.ವರ್ಮಾ ಅವರಿಂದ 10500 ರೂ. ಪಾವತಿಸಿಕೊಂಡು ದೀಪಕ್​ ಕೌಶಿಕ್​ ವಂಚಿಸಿದ್ದಾನೆ. ಹೈದರಾಬಾದ್​ ಟ್ರಾನ್ಸ್​ಪೋರ್ಟೇಷನ್​ ಸಂಸ್ಥೆಗೆ ಸೇರಿದ ಪೀಣ್ಯ ಗೋದಾಮಿನಲ್ಲಿದ್ದ ಕಾರನ್ನು ಪತ್ತೆಹಚ್ಚಿರುವ ಪೊಲೀಸರು, ಬೃಂದಾ ಅವರ ವಶಕ್ಕೆ ಒಪ್ಪಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ವಂಚನೆ ಹೇಗೆ?: ಟಾಟಾನಗರದ ಬೃಂದಾ ಕೆ. ವರ್ಮಾ ಎಂಬುವರು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಮಾರುತಿ 800 ಕಾರನ್ನು ಟ್ರಾನ್ಸ್​ಪೋರ್ಟೇಷನ್​ ಸರ್ವೀಸ್​ ಕಂಪನಿ ಮೂಲಕ ಬೆಂಗಳೂರಿಗೆ ತರಿಸಿಕೊಳ್ಳಲು ಗೂಗಲ್​ ಸರ್ಚ್​ ಮಾಡಿದ್ದರು. ಆಗ ನಕಲಿ ವೆಬ್​ಸೈಟ್​ www.vrlcarcarrier.com ಲಭ್ಯವಾಗಿದ್ದು, ಅದರಲ್ಲೇ ಬುಕ್​ ಮಾಡಿದ್ದಾರೆ. ಜ.15ಕ್ಕೆ ಆರೋಪಿ ದೀಪಕ್​ ಕೌಶಿಕ್​, ಬೃಂದಾ ಅವರಿಗೆ ಕರೆ ಮಾಡಿ ಬೆಂಗಳೂರು ವಿಆರ್​ಎಲ್​ ಕಚೇರಿಯಿಂದ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮ ಕಾರನ್ನು ಬೆಂಗಳೂರಿಗೆ ತರಲು 10,500 ರೂ. ಶುಲ್ಕ ಆಗುತ್ತೆ ಎಂದು ಕೊಟೇಷನ್​ ಕಳುಹಿಸಿದ್ದ. ಬುಕ್ಕಿಂಗ್​ ಶುಲ್ಕವಾಗಿ ಮೊದಲಿಗೆ 2 ಸಾವಿರ ರೂ. ಆನ್​ಲೈನ್​ನಲ್ಲಿ ಪಾವತಿಸುವಂತೆ ತಿಳಿಸಿದ್ದ.

ಆರೋಪಿಯ ಮಾತು ನಂಬಿದ ಬೃಂದಾ, ಆತನ ಬ್ಯಾಂಕ್​ ಖಾತೆಗೆ 2 ಸಾವಿರ ರೂ. ಹಾಕಿದ್ದರು. ಮರುದಿನ ಪ್ರವಿಣ್​ ಎಂಬಾತ ರಾಜಮಂಡ್ರಿಯಲ್ಲಿದ್ದ ಕಾರು, ಬಟ್ಟೆ, ಖಾದ್ಯವಿದ್ದ 3 ಬ್ಯಾಗ್​ಗಳನ್ನು ತೆಗೆದುಕೊಂಡು ಹೋಗಿದ್ದ. 1 ಗಂಟೆ ಬಳಿಕ ಕರೆ ಮಾಡಿದ ದೀಪಕ್​ ಕೌಶಿಕ್​, ಉಳಿದ 8500 ಹಣ ಕೊಡುವಂತೆ ಒತ್ತಾಯಿಸಿದ್ದ. ಕೊನೆಗೆ ಬೃಂದಾ ಅವರು ಜ.16ರಂದು ಆರೋಪಿ ಖಾತೆಗೆ 8500 ರೂ. ವರ್ಗಾಯಿಸಿದ್ದರು. ನಂತರ ಅನುಮಾನ ಬಂದು ವಿಆರ್​ಎಲ್​ ಲಾಜಿಸ್ಟಿಕ್​ ಲಿಮಿಟೆಡ್ ಕಚೇರಿಗೆ ಕರೆ ಮಾಡಿ ದೀಪಕ್​ ಕೌಶಿಕ್​ ಬಗ್ಗೆ ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಇಲ್ಲ ಎಂದು ಗೊತ್ತಾಗಿದೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮಕ್ಕೆ ನಟ ಸಯ್ಯಾಜಿ ಶಿಂಧೆ ಭೇಟಿ

Spread the love ಶಾಂತಾಯಿ ವೃದ್ಧಾಶ್ರಮಕ್ಕೆ ನಟ ಸಯ್ಯಾಜಿ ಶಿಂಧೆ ಭೇಟಿ ಬಹುಭಾಷಾ ನಟ ಸಯ್ಯಾಜಿ ಶಿಂಧೆ ಅವರು ಬೆಳಗಾವಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ