Breaking News

ಥಿಯೇಟರ್ ಗಳಿಗೆ ನೈಟ್ ಕರ್ಫ್ಯೂ ಬಿಸಿ; ಚಿತ್ರಮಂದಿರಗಳಲ್ಲಿ 4 ಶೋ ಮಾತ್ರ ಪ್ರದರ್ಶನ

Spread the love

ಬೆಂಗಳೂರು: ಹೆಚ್ಚುತ್ತಿರುವ ಒಮಿಕ್ರಾನ್ ಕಟ್ಟಿಹಾಕುವ ನಿಟ್ಟಿನಲ್ಲಿ ಇಂದಿನಿಂದ 10 ದಿನಗಳ ಕಾಲ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಾಗಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಇರಲಿದೆ.

ನೈಟ್ ಕರ್ಫ್ಯೂ ಇಫೆಕ್ಟ್ ಥಿಯೇಟರ್ ಗಳಿಗೂ ತಟ್ಟಿದ್ದು, ಇಂದಿನಿಂದ ಚಿತ್ರಮಂದಿರಗಳಲ್ಲಿ 4 ಶೋ ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 7 ಗಂಟೆಯ ಶೋ ಲಾಸ್ಟ್ ಆಗಲಿದೆ.

ನೈಟ್ ಕರ್ಫ್ಯೂ ಜಾರಿ ಇಂದಾಗಿ ನೈಟ್ ಶೋ ಸ್ಥಗಿತಗೊಂಡಿರುವುದರಿಂದ ಶೇ.30ರಷ್ಟು ಆದಾಯಕ್ಕೆ ಕತ್ತರಿ ಬಿದ್ದಿದೆ. ರಾಜ್ಯಾದ್ಯಂತ 630 ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಿವೆ. ಬೆಂಗಳೂರಿನಲ್ಲಿ ಮಲ್ಟಿಫ್ಲೆಕ್ಸ್ 45, ಸಿಂಗಲ್ ಸ್ಕ್ರೀನ್ 150 ಥಿಯೇಟರ್ ಗಳಿದ್ದು, 4 ಶೋಗಳಿಗೆ ಮಾತ್ರ ಅವಕಾಶವಿರುವುದು ಚಿತ್ರಮಂದಿರಗಳಿಗೆ ಕರ್ಫ್ಯೂ ಹೊಡೆತ ಬೀಳಲಿದೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ