ವಿಶ್ವದಾಧ್ಯಂತ ಭೀತಿ ಮೂಡಿಸಿರುವ ಒಮಿಕ್ರಾನ್‍ಗೆ ಇಂಗ್ಲೆಂಡ್‍ನಲ್ಲಿ ಮೊದಲ ರೋಗಿ ಸಾವನ್ನಪ್ಪಿದ್ದಾರೆ. ಇಂಗ್ಲೆಂಡ್‍ನಲ್ಲಿ ಕೊವಿಡ್ ಲಸಿಕಾ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿದ್ದರೂ ಒಮಿಕ್ರಾನ್‍ನಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷದ ಆರಂಭದಿಂದ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾವೈರಸ್ ಇದೀಗ ರೂಪಾಂತರಿ ವೈರಸ್‍ಗಳ ರೂಪ ತಾಳಿ ಮತ್ತೆ ವಿಶ್ವವನ್ನು ಕಂಗೆಡಿಸುತ್ತಿದೆ. ಹೊಸದಾಗಿ ಪತ್ತೆಯಾಗಿರುವ ಕೊವಿಡ್ ರೂಪಾಂತರಿಯಾದ ಒಮಿಕ್ರಾನ್‍ನಿಂದ ಮತ್ತೆ ಲಾಕ್‍ಡೌನ್ ಉಂಟಾಗಬಹುದು ಎಂಬ ಭೀತಿ ನಡುವೆಯೇ ಇದೀಗ ಬ್ರಿಟನ್‍ನಲ್ಲಿ ವಿಶ್ವದ ಮೊದಲ ವ್ಯಕ್ತಿ ಒಮಿಕ್ರಾನ್‍ಗೆ ಬಲಿಯಾಗಿರುವುದರಿಂದ ಮತ್ತೆ ಪ್ರಾಣ ಭೀತಿ ಹೆಚ್ಚಾಗಿದೆ. ಡೆಲ್ಟಾ ವೈರಸ್‍ಗಿಂತಲೂ 5 ಪಟ್ಟು ವೇಗವಾಗಿ ಈ ಒಮಿಕ್ರಾನ್ ವೈರಸ್ ಹರಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಆದರೆ, ಒಮಿಕ್ರಾನ್‍ನ ರೋಗ ಲಕ್ಷಣಗಳು ಹೆಚ್ಚು ತೀವ್ರವಾಗಿರುವುದಿಲ್ಲ ಎನ್ನಲಾಗಿತ್ತು. ಆದರೆ, ಇದೀಗ ಒಮಿಕ್ರಾನ್‍ನಿಂದ ಓರ್ವ ರೋಗಿ ಸಾವನ್ನಪ್ಪಿರುವುದು ಮತ್ತಷ್ಟು ಆತಂಕ ಮೂಡಿಸಿದೆ.