Breaking News

‘ಲಕ ಲಕ ಲಂಬರ್ಗಿನಿ’ ಎನ್ನುತ್ತಾ ಚಂದನ್​ ಶೆಟ್ಟಿ ಜೊತೆ ಸೊಂಟ ಬಳುಕಿಸಿದ ಡಿಂಪಲ್​ ಕ್ವೀನ್

Spread the love

ರಾಜಾ-ರಾಣಿ ಶೋನಲ್ಲಿ ಬ್ಯುಸಿಯಾಗಿದ್ದ ಚಂದನ್​ ಯಾವುದೇ ಆಲ್ಬಂ ಸಾಂಗ್​ಗಳನ್ನ ಘೋಷಣೆ ಮಾಡಿರಲಿಲ್ಲ. ಇತ್ತೀಚಿಗೆ ಶೋ ಗ್ರ್ಯಾಂಡ್​ ಆಗಿ ಎಂಡ್​ ಆಗಿದ್ದು, ಚಂದನ್​-ನಿವೇದಿತಾ ಮೂರನೇ ಸ್ಥಾನ ಪಡೆಯುವುದರ ಮೂಲಕ ಜನರ ಮನಸ್ಸನ್ನ ಗೆದ್ದಿದ್ದರು. ಈಗ ಚಂದನ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಒಂದನ್ನ ನೀಡಿದ್ದಾರೆ.

ರಾಪರ್​ ಚಂದನ್​ ಶೆಟ್ಟಿ ಅವರು ಏನೇ ಮಾಡಿದ್ರು ಸಖತ್​ ಡಿಫರೆಂಟ್​ ಆಗಿ ಮಾಡ್ತಾರೆ. ಕ್ಯಾಚಿ ಸಾಹಿತ್ಯ, ಅದ್ಧೂರಿ ಸೆಟ್​, ಕಾಸ್ಟೂಮ್​ಗಳು ಅವರ ಆಲ್ಬಂ ಸಾಂಗ್ಸ್​ಗಳಲ್ಲಿ ನೀವು ನೋಡಿರ್ತಿರಾ. ಇನ್ನು ಸಂಗೀತ ನಿರ್ದೇಶನದ ಸ್ಟೈಲೇ ಬೇರೆ. ಹೊಸ ಹೊಸ ಪ್ರಯೋಗಗಳನ್ನ ಮಾಡ್ತಾನೆ ಇರ್ತಾರೆ. ಇದಕ್ಕೆ ಸಾಕ್ಷಿ ಅವರು ಈ ಹಿಂದೆ ಮಾಡಿದ್ದ ಪಕ್ಕಾ ಚಾಕಲೇಟ್​ ಗರ್ಲ್​, 3 ಪೇಗ್​, ಗೊಂಬೆ ಗೊಂಬೆ, ಇತ್ತೀಚಿನ ನನ್ನವಳು ಗೀತೆಗಳು.

ಸದ್ಯ ಚಂದನ್​ ತಮ್ಮ ಹೊಸ ಆಲ್ಬಂ ಸಾಂಗ್​ ಒಂದನ್ನ ಘೋಷಿಸಿದ್ದು, ಲಕ ಲಕಾ ಲಂಬರ್ಗಿನಿ ಮೂಲಕ ಚಂದನ್​ ಬರ್ತಿದ್ದಾರೆ. ಇದಕ್ಕಾಗಿ ಹೊಸ ಹೇರ್​ ಸ್ಟೈಲ್​ ಕೂಡ ಮಾಡಿಸಿದ್ದಾರೆ. ಸದ್ದಿಲ್ಲದೇ ಬೆಂಗಳೂರಿನಲ್ಲಿ ಚಿತ್ರಿಕರಣ ಕೂಡ ಮುಗಿಸಿದ್ದಾರೆ ಚಂದನ್​..

ಇನ್ನೊಂದು ವಿಶೇಷ ಅಂದ್ರೇ ಇತ್ತೀಚಿಗೆ ಏಕ್​ ಲವ್​ ಯಾ ಚಿತ್ರದಲ್ಲಿ ಹುಡುಗಿರ ಬ್ರೇಕ್​ಪ್​ ಸಾಂಗ್​ನಲ್ಲಿ ಹೆಜ್ಜೆ ಹಾಕಿ ಹೊಸ ಟ್ರೆಂಡ್​ ಸೃಷ್ಟಿರುವ ಚಂದನವನದ ಡಿಂಪಲ್​ ಕ್ವೀನ್​ ರಚಿತಾ ರಾಮ್ ಲಕ ಲಕಾ ಲಂಬರ್ಗಿನಿಯಲ್ಲಿ ಚಂದನ್​ ಜೊತೆ ಹೆಜ್ಜೆ ಹಾಕಿದ್ದಾರೆ.

ಇನ್ನೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಂದನ್​, ಮಹಿಳೆಯರನ್ನ ಲಂಬರ್ಗಿಣಿ ಎಂದು ಕರೆಯಲಾಗುತ್ತದೆ. ಹಾಗಾಗಿ ಯಾರಾದರೂ ಸ್ಟಾರ್​ ನಟಿ ಅವರನ್ನ ಈ ಸಾಂಗ್​ನಲ್ಲಿ ನಟಿಸಲು ಹುಡುಕಾಟ ನಡಿಸಿದ್ವಿ. ಆಗ ನಾವು ರಚಿತಾ ರಾಮ್ ಅವರನ್ನು ಸಂಪರ್ಕಿಸಿದೆವು. ಮೊದಲು ಅವರು ಆಲ್ಬಂ ಹಾಡು ಅಂದ ತಕ್ಷಣ ಹಿಂಜರಿದರು. ಆದ್ರೇ ಸಾಹಿತ್ಯವನ್ನು ಕೇಳಿದ ನಂತರ ಅವರು ಖುಷಿಯಿಂದ ಒಪ್ಕೊಂಡ್ರು. ವಾಸ್ತವ ಪ್ರಪಂಚದಿಂದ ಹಾಡು ಶುರುವಾಗಿ ನಂತರ ಫ್ಯಾಂಟಸಿ ರೂಪ ಪಡೆದುಕೊಳ್ಳುತ್ತದೆ ಎಂದಿದ್ದಾರೆ.

ಮಾಸ್ ಬೀಟ್ಸ್ ಮತ್ತು ಕ್ಯಾಚಿ ಸಾಹಿತ್ಯವನ್ನ ಬರೆದಿದ್ದಾರೆ ಅಂತೆ ಚಂದನ್​. ಇನ್ನೂ ರೋಷನ್ ಅಯ್ಯಪ್ಪ, ಶಿಲ್ಪಾ ಹೆಗ್ಡೆ ಮತ್ತು ವರ್ಷಿಣಿ ಜಾನಕಿರಾಮ್ ಕಾಸ್ಟ್ಯೂಮ್‌ಗಳನ್ನ ಡಿಸೈನ್​ ಮಾಡಿದ್ದು, ಗ್ಲಾಮರ್ಸ್​ಗೆ ಹೆಚ್ಚು ಒತ್ತು ನೀಡಿದ್ದಾರಂತೆ. 3 ಬೃಹತ್ ಸೆಟ್‌ಗಳನ್ನ ನಿರ್ಮಿಸಿ ಚಿತ್ರೀಕರಣ ಮಾಡಲಾಗಿದೆ. ನಂದ ಕಿಶೋರ್ ಈ ಹಾಡಿಗೆ ನಿರ್ದೇಶನ ಮಾಡಿದ್ದು, ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ