Breaking News

ಭಗವಂತ ಖೂಬಾ ಹೇಳಿಕೆಗೆ ದಿನೇಶ್‌ ಗುಂಡೂರಾವ್‌ ಆಕ್ರೋಶ

Spread the love

ಬೆಂಗಳೂರು: ಬೆಲೆ ಏರಿಕೆ ಎಲ್ಲಿದೆ ಎಂದಿರುವ ಸಚಿವ ಭಗವಂತ ಖೂಬಾ ಯಾವ ಗ್ರಹದಲ್ಲಿದ್ದಾರೆ. ಜನ ಬೆಲೆ ಏರಿಕೆಯ ವಿರುದ್ಧ ಬೀದಿಗಿಳಿದಿರುವುದು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

ಬೆಲೆ ಏರಿಕೆಯ ವಿರುದ್ಧ ಜನ ಅಸಹನೆ ಆಕ್ರೋಶದ ರೂಪ ಪಡೆಯುತ್ತಿದೆ. ಇಷ್ಟಾದರೂ ಅದ್ಯಾವ ಭಂಡತನದಿಂದ ಬೆಲೆ ಏರಿಕೆ ಆಗಿಲ್ಲ ಎಂದು ಹೇಳುತ್ತೀರಿ ಎಂದಿದ್ದಾರೆ.

80 ರೂ. ಇದ್ದ ಅಡುಗೆ ಎಣ್ಣೆ 180 ರೂ. ಆಗಿದೆ. 75 ರೂ. ಇದ್ದ ಪೆಟ್ರೋಲ್‌ 113 ರೂ .ಆಗಿದೆ. 60 ರೂ. ಇದ್ದ ಡೀಸೆಲ್‌ 103 ರೂ. ಆಗಿದೆ. 500 ರೂ. ಇದ್ದ ಅಡುಗೆ ಅನಿಲ ಸಿಲಿಂಡರ್‌ 910 ರೂ. ಆಗಿದೆ. ಇದು ಬೆಲೆ ಏರಿಕೆ ಅಲ್ಲವೇ ಖೂಬಾ ಅವರೇ ಎಂದು ಕೇಳಿದ್ದಾರೆ.

ನೀವು ಸಚಿವರು, ಇದು ನಿಮಗೆ ದುಬಾರಿ ಎನಿಸದಿರಬಹುದು. ಆದರೆ, ಜನಸಾಮಾನ್ಯರ ಪಾಡೇನು, ಅವರೇನು ನಿಮ್ಮಷ್ಟು ಸಿರಿವಂತಿಕೆಯ ಕುಳಗಳೇ ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ