Breaking News

ನವದೆಹಲಿ: ನಿಮಗೆ ನನ್ನ ಮೇಲೆ ತುಂಬಾ ಪ್ರೀತಿ ಮತ್ತು ಗೌರವ ಇದ್ದರೆ, ನೀವು ಈ ಕೋವಿಡ್ ಬಿಕ್ಕಟ್ಟು ಅಂತ್ಯಗೊಳ್ಳುವವರೆಗೂ ಕನಿಷ್ಠ ಒಂದು ಬಡ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಅದುವೇ ನನಗೆ ನೀವು ಸಲ್ಲಿಸುವ ಒಂದು ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Spread the love

ಅವರ ಈ ಹೇಳಿಕೆಗೆ ಕಾರಣ, ‘ನಾಗರಿಕರು ತಮ್ಮ ಬಾಲ್ಕನಿಗಳಲ್ಲಿ ಭಾನುವಾರ (ಏ.12) ಸಂಜೆ 5 ಗಂಟೆಗೆ ನಿಂತು ಗೌರವದಿಂದ ನಮ್ಮ ಪ್ರಧಾನಿಗೆ ನಮಸ್ಕರಿಸಬೇಕು. ಈ ಮನುಷ್ಯ ನಮಗಾಗಿ ಮತ್ತು ನಮ್ಮ ರಾಷ್ಟ್ರಕ್ಕಾಗಿ ತುಂಬಾ ಶ್ರಮಿಸಿದ್ದಾರೆ’ ಎಂಬ ಒಕ್ಕಣೆಯುಳ್ಳ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದ ತುಂಬೆಲ್ಲಾ ಹರಿದಾಡುತ್ತಿರುವುದು. ಮತ್ತು ಈ ಪೋಸ್ಟರ್‌ ಅನ್ನು ಸಾಧ್ಯವಾದಷ್ಟು ಜನರಿಗೆ ಫಾರ್ವರ್ಡ್ ಮಾಡುವಂತೆಯೂ ಮನವಿ ಮಾಡಿಕೊಳ್ಳಲಾಗಿತ್ತು.ಈ ಕುರಿತು ಟ್ವೀಟ್‌ ಮಾಡಿರುವ ಮೋದಿ ‘5 ನಿಮಿಷಗಳ ಕಾಲ ನಿಂತು ಮೋದಿಯನ್ನು ಗೌರವಿಸುವ ಅಭಿಯಾನವನ್ನು ಕೆಲವರು ನಡೆಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಮೊದಲ ನೋಟದಲ್ಲಿ ಮೋದಿಯನ್ನು ವಿವಾದಗಳಿಗೆ ಎಳೆಯುವ ಕಿಡಿಗೇಡಿತನದ ವರ್ತನೆಯಂತೆ ಇದು ತೋರುತ್ತಿದೆ’ ಎಂದು ಪ್ರಧಾನಿಯವರು ಈ ಅಭಿಯಾನದ ವಿಷಯಕ್ಕೆ ಸಂಬಂಧಿಸಿದ ತಮ್ಮ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ