ಪ್ರಿಯಕರನ ಜೊತೆಗೂಡಿ ಮತ್ತೊಬ್ಬ ಪ್ರಿಯಕರನನ್ನು ಪ್ರೇಯಸಿಯೊಬ್ಬಳು ಕೊಂದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ರಾಮಚಂದ್ರಪುರದಲ್ಲಿ ನಡೆದಿದೆ.
ಹಿಂದೂಪುರ ಮೂಲದ ಫುಜೈಲ್ ಖಾನ್ ಪ್ರೇಯಸಿ ಪ್ರಮೀಳಾ ಮತ್ತು ಆಕೆಯ 2ನೇ ಪ್ರಿಯಕರ ಸುರೇಶ್ ನಿಂದ ಕೊಲೆಯಾದ ವ್ಯಕ್ತಿ.
ಸುರೇಶ್ ಜೊತೆಗಿನ ಸಂಬಂಧಕ್ಕೆ ಅಡ್ಡಿಪಡಿಸಿದ್ದ ಹಿನ್ನೆಲೆಯಲ್ಲಿ ಫುಜೈಲ್ ಖಾನ್ ನನ್ನು ವಿಧುರಾಶ್ವತ್ಥ ರಾಮಚಂದ್ರಪುರದ ಅರಣ್ಯಕ್ಕೆ ಕರೆದೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ.
ಮದ್ಯದ ಬಾಟಲಿ ಹಗ್ಗದಿಂದ ಕತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು ಅಲ್ಲಿಯೇ ಹೂತು ಹಾಕಿ ಬಂದಿದ್ದರು. ಪ್ರಕರಣವನ್ನು ಭೇದಿಸಿದ ಪೊಲೀಸರು ಪ್ರಮೀಳಾ ಹಾಗೂ ಆಕೆಯ 2ನೇ ಪ್ರಿಯಕರ ಸುರೇಶ್ ನನ್ನು ಬಂಧಿಸಿದ್ದಾರೆ.
Laxmi News 24×7