Breaking News

ಪಿಯುಸಿ ಪಾಸಾದರೂ ಕೇದನೂರ ಯುವಕ ಆತ್ಮಹತ್ಯೆ ..! ಆತ್ಮಹತ್ಯೆಗೆ ಬೇರೊಂದು ಕಾರಣದ ವಾಸನೆ..?

Spread the love

ಬೆಳಗಾವಿ: ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದ ಹೊರವಲಯದಲ್ಲಿರುವ ರಾಜಾಯಿ ಗಲ್ಲಿಯ 19 ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಶಾಲ ಮುರಾರಿ ರಾಜಾಯಿ ಆತ್ಮಹತ್ಯೆ ಮಾಡಿಕೊಂಡ ಯುವಕ.

ಒಬ್ಬನೇ ಗಂಡು ಮಗನಾಗಿದ್ದ ವಿಶಾಲ ಇತ್ತೀಚಿಗೆ ಪಿಯುಸಿ ಪಾಸಾಗಿದ್ದನು. ಮುಂದಿನ ವಿದ್ಯಾಭ್ಯಾಸಕ್ಕಾಗಿ ತಯಾರಿ ನಡೆಸಿದ್ದನು. ಆದರೆ ಈ ಮದ್ಯೆ ಹಲವು ದಿನಗಳಿಂದ ಏಕಾಂಗಿಯಾಗಿ ಇರುತ್ತಿದ್ದ. ಆತ್ಮಹತ್ಯೆಗೆ ಖಿನ್ನತೆಯೇ ಕಾರಣವೇಂದು ಮೃತರ ತಂದೆ ಕಾಕತಿ ಪೋಲೀಸರಿಗೆ ನೀಡಿರುವ ದೂರದಲ್ಲಿ ತಿಳಿಸಿದ್ದಾರೆ.

ಆದರೆ ಆತ್ಮಹತ್ಯೆಗೆ ಬೇರಾವುದೋ ಕಾರಣವಿದೆ ಎಂದು ಗ್ರಾಮದ ಜನ ಗಾಳಿ ಸುದ್ದಿ ಹಬ್ಬಿಸಿದ್ದಾರೆ. ನಿಖರವಾದ ಕಾರಣ ತಿಳಿಯಬೇಕಾದರೇ ಪೋಲೀಸರಿಂದ ಹೆಚ್ಚಿನ ತನಿಖೆ ನಡೆಯಬೇಕಾಗಿದೆ.

ಕಾಕತಿ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸ್ಥಳಕ್ಕೆ ಎಎಸ್ ಐ ನಾರಾಯಣ ಪಟವರ್ಧನ್ ಸಿಬ್ಬಂದಿ ಹೊಂಡಪ್ಪನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ