Breaking News

ಮನೆ ಸೋರುತ್ತಿರುವುದರಿಂದ ನೆರವು ಕೇಳಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಅಜ್ಜಿಯ ನೋವಿಗೆ ಸ್ಪಂದಿಸಲು ಸ್ವತಃ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಭೆ ಬಿಟು ಅಜ್ಜಿ ನೋವಿಗೆ ಸ್ಪಂದಿಸಿದ ಬೆಳಗಾವಿ ಡಿಸಿ

Spread the love

ಬೆಳಗಾವಿ: ಮನೆ ಸೋರುತ್ತಿರುವುದರಿಂದ ನೆರವು ಕೇಳಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಅಜ್ಜಿಯ ನೋವಿಗೆ ಸ್ಪಂದಿಸಲು ಸ್ವತಃ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಗುರುವಾರ ಸಭೆ ಬಿಟ್ಟು ಬಂದು ಮನವಿ ಆಲಿಸಿ ಕೂಡಲೇ ಕ್ರಮಕ್ಕೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ಮಾನವೀಯತೆ ಮೆರೆದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಆರೋಗ್ಯ ಇಲಾಖೆಗೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಇದ್ದರು. ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕಚೇರಿಯ ಹೊರ ಭಾಗದಲ್ಲಿ ಗಣಪತಿ ಗಲ್ಲಿಯ ವೃದ್ಧೆ ಬಂದು, ಮನೆ ಬೀಳುವ ಹಂತದಲ್ಲಿದೆ. ಮಳೆಯಿಂದ ಹೆಚ್ಚು ಸೋರುತ್ತಿರುವುದರಿಂದ ಮನೆಯಲ್ಲಿ ಇರಲು ಆಗುತ್ತಿಲ್ಲ. ಈ ಬಗ್ಗೆ ಸೂಕ್ತ ನೆರವು ನೀಡುವಂತೆ ಕೇಳಿದರು. ಅಜ್ಜಿ ಕಚೇರಿ ಹೊರಗೆ ಬಂದಿರುವ ಬಗ್ಗೆ ಸಿಬ್ಬಂದಿಯೊಬ್ಬರು ಗಮನಕ್ಕೆ ತಂದಾಗ ಕೂಡಲೇ ಸಭೆ ಬಿಟ್ಟು ಹೊರ ಬಂದ ಜಿಲ್ಲಾಧಿಕಾರಿಗಳು, ಅಜ್ಜಿಯ ಮನವಿ ಆಲಿಸಿ ಕೂಡಲೇ ತಾತ್ಕಾಲಿಕ ಶೆಡ್‌ ನಿರ್ಮಿಸಿ ಕೊಡಬೇಕು ಎಂದು ಸೂಚಿಸಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ