Breaking News

ವಿಷಾಹಾರ ಸೇವನೆ; ಒಂದೇ ಕುಟುಂಬದ 7 ಜನರ ಸ್ಥಿತಿ ಗಂಭೀರ

Spread the love

ಬಾಗಲಕೋಟೆ; ವಿಷಾಹಾರ ಸೇವಿಸಿದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಕುಟುಂಬದ 7 ಸದಸ್ಯರು ಅಸ್ವಸ್ಥರಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಮನೆಯಲ್ಲಿಯೇ ತಯಾರಿಸಿದ ಗೋಧಿ ಚಪಾತಿ ಸೇವಿಸಿದ ಬಳಿಕ ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ವಾಂತಿ-ಭೇದಿ ಶುರುವಾಗಿದೆ. ತಾಯಿ, ಮಗ, ಸೊಸೆ, ಮೊಮ್ಮಕ್ಕಳು ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

ದುಂಡವ್ವ ಮಹಾರುದ್ರಪ್ಪ (60), ಮಗ ಲಕ್ಷ್ಮಣ (38), ಸೊಸೆ ಶಾಂತಾ (28) ಮೊಮ್ಮಕ್ಕಳಾದ ತೇಜಸ್ವಿನಿ (12), ಪಲ್ಲವಿ (10), ಪ್ರಥಮ್ (8) ಹಾಗೂ ಸಾಕ್ಷಿ (6) ಅಸ್ವಸ್ಥರು. ಎಲ್ಲರನ್ನೂ ರಾಮದುರ್ಗದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ