Breaking News

ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವೃದ್ಧ.

Spread the love

 

 

 

ಬೆಳಗಾವಿ : ಬೆಳಗಾವಿಯ ಹಳೆ ಗಾಂಧಿನಗರದ ಬಳಿಯಿರುವ ರೈಲು ಹಳಿಯ ಮೇಲೆ ವೃದ್ಧನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

 

 

ಬೆಳಗಾವಿಯ ಹಳೆ ಗಾಂಧಿನಗರ ಹೈವೆ ಸೇತುವೆ ಹತ್ತಿರ ಇರುವ ರೈಲು ಹಳಿಯ ಮೇಲೆ ಆ ವೃದ್ಧ ಬೆಳಿಗ್ಗೆಯಿಂದ ಕುಳಿತಿದ್ದನಂತೆ, ಮಧ್ಯಾಹ್ನ 3:15 ರ ವೇಳೆಗೆ ಬೆಳಗಾವಿ – ಶೇಡಬಾಳ ರೈಲು ಸಾಂಬ್ರಾ ಕಡೆಯಿಂದ ಬರುತ್ತಿದ್ದಂತೆಯೇ ತಕ್ಷಣ ಹಳಿಯ ಮೇಲೆ ಜಿಗಿದ್ದಿದ್ದಾನೆ ಎನ್ನಲಾಗುತ್ತಿದೆ. ರೈಲು ಹೋದಾಗ ವೃದ್ಧನ ಕೈ ತುಂಡರಿಸಿ ರೈಲ್ವೆ ಹಳಿಯ ಮೇಲೆ ಬಿದ್ದಿತು ಎಂದು ಸ್ಥಳೀಯರು ಮಾಹಿತಿ ನೀಡಿದರು. ವೃದ್ಧನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲಾ.

 

 

ರೈಲ್ವೆ ಪೊಲೀಸ್ ಪಿಎಸ್‍ಐ ಶ್ರೀರಾಮುಲು ವಿನೋದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆದಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ