ಬೆಂಗಳೂರು: ನೂತನ ಸಿಎಂ ಬಸವರಾಜ್ ಬೊಮ್ಮಾಯಿಯವರ ಆರ್. ಟಿ ನಗರದ ಮನೆ ಸುತ್ತಮುತ್ತ ಬೈಕ್ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಹೆಚ್ಚಾಗಿದೆ. ಸಿಎಂ ಮನೆ ಮುಂದೆ ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನು ಪೊಲೀಸರು ಬಂಧಿಸಿದ್ದು ಬೈಕ್ಗಳನ್ನ ಸೀಜ್ ಮಾಡಿದ್ದಾರೆ.
ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಮನೆ ಸುತ್ತಮುತ್ತ ಪೊಲೀಸ್ರ ದಂಡೆ ಇದ್ದರು ಕ್ಯಾರೆ ಎನ್ನದ ಪುಂಡರ ಗುಂಪು ವ್ಹೀಲಿಂಗ್ ಮಾಡುತ್ತಿದ್ದರು. ಡಿಯೋ, ಌಕ್ಟಿವಾ ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರ ಗ್ಯಾಂಗ್ನ್ನು ಪೊಲೀಸರು ತಡೆಯಲು ಹೋದಾಗ ಪೊಲೀಸರ ಮೇಲೆಯೆ ಬೈಕ್ ಹತ್ತಿಸೋ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಕೊನೆಗೆ ಸಿಎಂ ಮನೆ ಭದ್ರತಾ ಸಿಬ್ಬಂದಿಗಳು ಪುಂಡರನ್ನು ಹಿಡಿದು ಆರ್.ಟಿ. ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮೂವರನ್ನು ವಶಕ್ಕೆ ಪಡೆದಿರೋ ಪೊಲೀಸರು ಎರಡು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.