Breaking News

ವಿಜಯಪುರ ಹೆಸ್ಕಾಂ ಎಇಇ ಸಿದ್ದರಾಮ ಬಿರಾದಾರ ಮನೆ ಮೇಲೆ ಎಸಿಬಿ ದಾಳಿ; ದಾಖಲೆ ಪರಿಶೀಲನೆ

Spread the love

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ನಗರದಲ್ಲಿರುವ ಕೆಪಿಟಿಸಿಎಲ್ ಎಇಇ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಎಂಬ ಕೆಪಿಟಿಸಿಎಲ್ ಕಚೇರಿಯ ಎಇಇ ಮನೆ ಮೇಲೆ ದಾಳಿ ನಡೆಸಿದ್ದಾರೆ.

ವಿಜಯಪುರ ನಗರದ ಸುಕೂನ್ ಲೇಔಟ್ ನಲ್ಲಿರುವ ಕೆಪಿಟಿಸಿಎಲ್ ಎಇಇ ಸಿದ್ದರಾಮ ಬಿರಾದಾರಗೆ ಸೇರಿದ ನಗರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ, ಬಿ.ಕೆ.ಲೋಣಿ ಗ್ರಾಮದ‌ ಮನೆ, ತೋಟದ ಮನೆ ಮಾತ್ರವಲ್ಲದೇ ಸಿದ್ದರಾಮ ಅಳಿಯ ಅರ್ಜುನ ಬಿರಾದಾರ್ ಮನೆ ಮೇಲೂ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ದಾಖಲೆ ಪರಿಶೀಲನೆ ಮುಂದುವರೆಸಿದ್ದಾರೆ.

ಎಸಿಬಿ ಡಿಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ವಿಜಯಪುರ ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆ ಎಸಿಬಿ‌ ಇನ್ಸಪೆಕ್ಟರ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ