Breaking News

ಅಕ್ರಮ ವಿದ್ಯುತ್​ ಸಂಪರ್ಕ ಪಡೆದಿದ್ದ ವ್ಯಕ್ತಿ ಅಧಿಕಾರಿಗಳ ಕಣ್ತಪ್ಪಿಸಲು ಮಾಡಿದ್ದೇನು ಗೊತ್ತಾ…?

Spread the love

ಮನೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್​ ಸಂಪರ್ಕವನ್ನ ಕಡಿತಗೊಳಿಸಲು ವ್ಯಕ್ತಿಯೊಬ್ಬ ಹಾವಿನಂತೆ ತೆವಳುತ್ತಾ ಮನೆಯ ಛಾವಣಿ ತಲುಪಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಉತ್ತರ ಪ್ರದೇಶದ ಮುರಾದ್​​ನಗರದಲ್ಲಿ ಅಕ್ರಮ ವಿದ್ಯುತ್​ ಸಂಪರ್ಕ ಹೊಂದಿದ್ದ ಮನೆಯ ಮೇಲೆ ದಾಳಿ ನಡೆಸಿದ ವೇಳೆ ವಿದ್ಯುತ್​ ಇಲಾಖೆ ಸಿಬ್ಬಂದಿ ಈ ವಿಡಿಯೋವನ್ನ ಚಿತ್ರೀಕರಿಸಿದ್ದಾರೆ.

ತಮ್ಮ ಮನೆಗೆ ವಿದ್ಯುತ್​ ಇಲಾಖೆ ಅಧಿಕಾರಿಗಳು ದಾಳಿ ಮಾಡ್ತಿದ್ದಾರೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ವ್ಯಕ್ತಿ ಹಾವಿನಂತೆ ತೆವಳುತ್ತಾ ಛಾವಣಿ ಏರಿ ವಿದ್ಯುತ್​ ಸಂಪರ್ಕ ಕಡಿತಗೊಳಿಸುವ ಮೂಲಕ ಸಾಕ್ಷ್ಯನಾಶಕ್ಕೆ ಯತ್ನಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಅಧಿಕಾರಿಗಳು ಈತನ ಮನೆಯನ್ನ ತಲುಪಿದ್ದರು. ಕೂಡಲೇ ಬಾಲ್ಕನಿಯತ್ತ ಧಾವಿಸಿದ ಅಧಿಕಾರಿಗಳು ಈ ವಿಡಿಯೋವನ್ನ ಚಿತ್ರಿಕರಿಸಿದ್ದಾರೆ. ಆದರೆ ಇನ್ನೇನು ಆತ ವಿದ್ಯುತ್​ ಸಂಪರ್ಕ ಕಡಿತ ಮಾಡಬೇಕು ಅನ್ನೋವಷ್ಟರಲ್ಲಿ ಅಧಿಕಾರಿಗಳು ಈತನನ್ನ ರೆಡ್ ಹ್ಯಾಂಡ್​ ಆಗಿ ಹಿಡಿದಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಮುರಾದ್​ನಗರ ಉಪ ವಿಭಾಗಾಧಿಕಾರಿ ಕಚೇರಿಯ ಅಧಿಕಾರಿ, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋವನ್ನ ನಮ್ಮ ವ್ಯಾಪ್ತಿಗೆ ಸೇರಿದ ಮನೆಯೊಂದರಲ್ಲಿ ನಡೆದ ಘಟನೆಯಾಗಿದೆ. ಕಳೆದ 15 ದಿನಗಳು ವಿದ್ಯುತ್​ಚ್ಛಕ್ತಿ ಪ್ರಸರಣಾ ಇಲಾಖೆ ಸವಾಲಿನ ದಿನವಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಅಕ್ರಮ ವಿದ್ಯುತ್​ ಸಂಪರ್ಕ ಹೊಂದಿದ್ದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಮುರಾದ್​​ನಗರದಲ್ಲಿ ದಾಳಿ ನಡೆಸಿದ ವೇಳೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿರುವ ವ್ಯಕ್ತಿಯ ವಿರುದ್ಧ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ರು.


Spread the love

About Laxminews 24x7

Check Also

ಶಾಸಕ ಭರಮಗೌಡ (ರಾಜು) ಕಾಗೆಗೆ ಒಲಿದು ಬಂದ ಅದೃಷ್ಟ

Spread the love  ಸಚಿವ ಸತೀಶ್ ಜಾರಕಿಹೊಳಿಯವರ ಮಧ್ಯಸ್ಥಿಕೆಯಲ್ಲಿ ನಡೆದ ಕಾಗವಾಡ ಕ್ಷೇತ್ರದ ಅವಿರೋಧ ಆಯ್ಕೆ- ಶಾಸಕ ಬಾಲಚಂದ್ರ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ