ಬೆಳಗಾವಿ: ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪಿಎಸ್ ಐ ಹಾಗೂ ಇಬ್ಬರು ಪಿಸಿಗಳನ್ನು ಬಂಧಿಸಿರುವ ಘಟನೆ ಸದಲಗಾ ಠಾಣೆಯಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಸದಲಗಾ ಠಾಣೆಯಲ್ಲಿ ಪೊಲೀಸರು ಅಮಾಯಕರ ಬಳಿ ಹಣ ವಸೂಲಿ ಮಾಡುತ್ತಿದ್ದರು. ಅನಧಿಕೃತ ಪಾನ್ ಮಸಾಲಾ ಕಾರ್ಖಾನೆ ನಡೆಸುತ್ತಿದ್ದೀರಿ ಎಂದು ಹೆದರಿಸಿ ಕಾರ್ಖಾನೆ ಮಾಲೀಕ ರಾಜು ಪಾಶ್ಚಾಪುರೆ ಬಳಿ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ನೊಂದ ರಾಜು ಎಸಿಬಿಗಳಿಗೆ ದೂರು ನಿಡಿದ್ದರು.
ತಡರಾತ್ರಿ 40 ಸಾವಿರ ರೂ ಲಂಛ ಪಡೆಯುವಾಗ ಎಸಿಬಿ ದಾಳಿ ನಡೆದಿದ್ದು, ಪಿಎಸ್ ಐ ಹಾಗೂ ಇಬ್ಬರು ಪಿಸಿಗಳನ್ನು ವಶಕ್ಕೆ ಪಡೆಯಲಾಗಿದೆ.