Breaking News

ತೆರವಾಗಿರುವ ಹಾನಗಲ್ ಕ್ಷೇತ್ರದ ಮೇಲೆ ಸಿಎಂ ಪುತ್ರ ವಿಜಯೇಂದ್ರ ಕಣ್ಣು?

Spread the love

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ರಾಜಕೀಯ ಬದುಕಿಗೆ ಕ್ಷೇತ್ರದ ಸಮಸ್ಯೆ ಎದುರಾಗಿದೆ. ಅವರ ಮುಂದಿನ ರಾಜಕೀಯ ಜೀವನ ಯಾವ ಕ್ಷೇತ್ರದಿಂದ ಆರಂಭವಾಗಲಿದೆ ಎಂಬ ಗೊಂದಲ ಮೊದಲಿನಿಂದಲೂ ಇದೆ. ಇದೀಗ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರದ ಮೇಲೆ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಕಣ್ಣು ಹಾಕಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ.

ಪಕ್ಕಾ ಲಿಂಗಾಯತ ಕ್ಷೇತ್ರವಾಗಿರುವ ಹಾನಗಲ್ ಮೇಲೆ ಬಿ ವೈ ವಿಜಯೇಂದ್ರ ಒಲವು ತೋರುತ್ತಿರುವುದರಿಂದ ಸಿಎಂ ಉದಾಸಿ ಕುಟುಂಬ ಸದಸ್ಯ ಹಾಲಿ ಎಂಪಿ ಶಿವಕುಮಾರ್ ಉದಾಸಿಗೆ ಟೆನ್ಶನ್ ಶುರುವಾಗಿದೆ. ಶಿವಕುಮಾರ್ ಉದಾಸಿ ಎಂಪಿ ಆಗಿರುವುದರಿಂದ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೇಳುವಂತಿಲ್ಲ. ಟಿಕೆಟ್ ಕೇಳಿದರೂ ಹೈಕಮಾಂಡ್ ಅಷ್ಟು ಸುಲಭಕ್ಕೆ ಒಪ್ಪಲ್ಲ. ಹಾನಗಲ್ ಕ್ಷೇತ್ರ ಬೇರೆಯವರಿಗೆ, ಹೊರಗಿನವರಿಗೆ ಬಿಟ್ಟು ಕೊಡುವಂತಿಲ್ಲ. ಬಿಟ್ಟುಕೊಟ್ಟರೆ ಕ್ಷೇತ್ರ ಕೈ ತಪ್ಪಿದ ಹಾಗೆ ಆಗುತ್ತದೆ. ಇದೇ ಕಾರಣಕ್ಕೆ ಶತಾಯಗತಾಯ ಕುಟುಂಬದವರಿಗೆ ಟಿಕೆಟ್ ಕೊಡಿಸಬೇಕು. ಹಾನಗಲ್ ಕ್ಷೇತ್ರ ಉಳಿಸಿಕೊಳ್ಳಬೇಕು. ಇದು ಸದ್ಯ ಸಂಸದ , ಸಿಎಂ ಉದಾಸಿ ಪುತ್ರ

ಶಿವಕುಮಾರ್ ಉದಾಸಿ ಲೆಕ್ಕಾಚಾರವಾಗಿದೆ.

ಶಿವಕುಮಾರ್ ಉದಾಸಿ ಸಂಕಷ್ಟ ಗೊತ್ತಾಗಿ ವಿಜಯೇಂದ್ರ ಚೆಕ್ ಮೇಟ್ ಇಡಲು ಮುಂದಾಗಿದ್ದಾರೆ. ಹಾನಗಲ್ ಕ್ಷೇತ್ರದ ಮೇಲೆ ಬಿ ವೈ ವಿಜಯೇಂದ್ರ ಕಣ್ಣು ಹಾಕಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಹಾನಗಲ್ ಕ್ಷೇತ್ರಕ್ಕೆ ವಿಜಯೇಂದ್ರ ಸ್ಪರ್ಧೆ ನಿಮ್ಮ ಅಭಿಪ್ರಾಯ ಏನು? ಎಂಬ ಫೇಸ್ ಬುಕ್ ಮೂಲಕ ಅಭಿಪ್ರಾಯ ಸಂಗ್ರಹಕ್ಕೆ ಪರೋಕ್ಷವಾಗಿ ವಿಜಯೇಂದ್ರ ಮುಂದಾಗಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ದಿಕ್ಕು ದೆಸೆಯಿಲ್ಲದ ಪ್ರಗತಿ ಶೂನ್ಯ ಬಜೆಟ್: ಬೊಮ್ಮಾಯಿ

Spread the love ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ದಿಕ್ಕು ದೆಸೆ ಇಲ್ಲದ ಪ್ರಗತಿ ಶೂನ್ಯ ಬಜೆಟ್ ಆಗಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ