ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗುರ ಉಂಟು ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮಕ್ಕೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಕೇಂದ್ರ ಶಿಸ್ತು ಸಮಿತಿ ಶಿಫಾರಸ್ಸು ಮಾಡಿದೆ.
ಲಿಂಗರಾಜ್ ಪಾಟೀಲ್ ನೇತೃತ್ವದ ಶಿಸ್ತು ಸಮಿತಿ ರಾಜ್ಯ ನಾಯಕರಿಗೆ ಈಗ ಬಿಸಿ ಮುಟ್ಟಿಸಿದೆ. ಕಳೆದ ಕೆಲವು ದಿನಗಳಿಂದ ಕೆಲವು ನಾಯಕರು ಮಾಧ್ಯಮಗಳ ಮೂಲಕ, ಬಹಿರಂಗವಾಗಿ ನಾಯಕತ್ವ ಬದಲಾವಣೆ ವಿಚಾರವಾಗಿ ಪಕ್ಷದ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ.
ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಸ್ತು ಸಮಿತಿ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್, ಎಂಪಿ ರೇಣುಕಾಚಾರ್ಯ, ಸುನೀಲ್ ಕುಮಾರ್, ಸಿಪಿ ಯೋಗೇಶ್ವರ್, ಎಚ್ ವಿಶ್ವನಾಥ್ ಮುಂತಾದವರ ಮೇಲೆ ಈಗ ಶಿಸ್ತು ಕ್ರಮದ ತೂಗುಗತ್ತಿ ನೇತಾಡುತ್ತಿದೆ.
Laxmi News 24×7