Breaking News
Home / new delhi / ಹಿಡಕಲ್ ಜಲಾಶಯದಿಂದ ನೀರು ಬಿಡುತ್ತಾರೆ ಎಂಬ ಸುದ್ದಿ ಸುಳ್ಳು ; ಹುಕ್ಕೇರಿ ತಹಶೀಲ್ದಾರ ಹೂಗಾರ

ಹಿಡಕಲ್ ಜಲಾಶಯದಿಂದ ನೀರು ಬಿಡುತ್ತಾರೆ ಎಂಬ ಸುದ್ದಿ ಸುಳ್ಳು ; ಹುಕ್ಕೇರಿ ತಹಶೀಲ್ದಾರ ಹೂಗಾರ

Spread the love

 

ಘಟಪ್ರಭ; ನದಿಪಾತ್ರದ ಜನರಿಗೆ ಸುಳ್ಳು ಸುದ್ದಿ ಕೊಡುತ್ತಿರುವ ವಾಟ್ಸಪ್ ಸಂದೇಶಗಳು ಶುದ್ಧ ಸುಳ್ಳು ಎಂದು ಹುಕ್ಕೇರಿ ತಹಸಿಲ್ದಾರ ಡಿ.ಎಚ್.ಹೂಗಾರ ತಿಳಿಸಿದ್ದಾರೆ.

 

ಪ್ರಸ್ತುತ ಹುಕ್ಕೇರಿ ತಾಲೂಕಿನಲ್ಲಿ ಅತಿಯಾಗಿ ಮಳೆ ಸುರಿಯುತ್ತಿದ್ದು ಕಾರಣ ಹುಕ್ಕೇರಿ ತಾಲೂಕಿನ ಯರನಾಳ ಮದಮಕನಾಳ ಗ್ರಾಮಗಳ ಮಧ್ಯೆ ಇರುವ ಸೇತುವೆ ಹಾಗೂ ಪಾಶ್ಚಪೂರ ಕುಂದರಗಿ ಗ್ರಾಮಗಳ ಮಧ್ಯೆ ಇರುವ ಸೇತುವೆಗಳು ಸಂಪೂರ್ಣವಾಗಿ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಹಾಗೂ ಸದರಿ ಗ್ರಾಮಗಳಿಗೆ ತೆರಳಲು ಪರ್ಯಾಯ ಮಾರ್ಗಗಳು ಲಭ್ಯವಿರುತ್ತವೆ ಹಾಗೂ ಕೆಲವರು ವಾಟ್ಸಪ್ ಸಂದೇಶಗಳ ಮೂಲಕ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಮ್ ನಿಂದ ಹೆಚ್ಚಿನ ನೀರನ್ನು ಹೊರ ಬಿಡುತ್ತಿದ್ದು ಇದರಿಂದಾಗಿ ನದಿಪಾತ್ರದ ಜನರಿಗೆ ತುಂಬಾ ತೊಂದರೆಯಾಗಲಿದೆ ಅಂತ ಸುಳ್ಳು ಸುದ್ದಿಯನ್ನು ಹರಿ ಬಿಡುತ್ತಿರುತ್ತಾರೆ ಇಂತಹ ಸುಳ್ಳು ಸುದ್ದಿಯನ್ನು ಹರಿಬಿಡುತ್ತಿರುವ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಹಾಗೂ ಪ್ರಸ್ತುತ ತಾಲ್ಲೂಕಿನ ಹಿಡಕಲ್ ಡ್ಯಾಮ್ ನಲ್ಲಿ ನೀರಿನ ಒಳಹರಿವು 17000 ಸಾವಿರ ಕ್ಯುಸೆಕ್ಸ್ ಇದ್ದು. ಸದರ್ ಡ್ಯಾಮ್ನ ಸ್ಟೋರೇಜ್ 7 TMC ಇರುತ್ತದೆ. ಹಾಗೂ ಶಿರೂರ್ ಡ್ಯಾಮ್ ನಲ್ಲಿ ನೀರಿನ ಒಳಹರಿವು 1828 ಕ್ಯೂಸೆಕ್ಸ್ ಇದ್ದು ಸದರ್ ಡ್ಯಾಮಿನ ಸ್ಟೋರೇಜ್ 18ಸದರ್ ಡ್ಯಾಮಿನ ಸ್ಟೋರೇಜ್ 1599 ಟಿಎಂಸಿ ಇರುತ್ತದೆ. ಸದರ ಜಲಾಶಯಗಳು ತುಂಬಲು ಇನ್ನೂ ಸಾಕಷ್ಟು ನೀರಿನ ಅವಶ್ಯಕತೆ ಇರುತ್ತದೆ ಕಾರಣ ಸದ್ಯಕ್ಕೆ ಜಲಾಶಯಗಳಿಂದ ನೀರನ್ನು ಹೊರಬಿಡಲಾಗುತ್ತಿರುವದಿಲ್ಲ. ಹಾಗೂ ಸದ್ಯಕ್ಕೆ ನೀರನ್ನು ಹೊರಬಿಡುವ ಆಲೋಚನೆಯೂ ಇರುವುದಿಲ್ಲ.

 

ಕಾರಣ ನದಿ ಪಾತ್ರದ ಜನರು ಭಯಭೀತರಾಗುವ ಅವಶ್ಯಕತೆ ಇರುವುದಿಲ್ಲ ಮುಂದಿನ ದಿನಗಳಲ್ಲಿ ಅತಿಯಾದ ಮಳೆ ಸಂಭವಿಸಿ ಡ್ಯಾಮ್ ಗಳಲ್ಲಿ ನೀರು ಹೆಚ್ಚಾದಲ್ಲಿ ನೀರನ್ನು ಹೊರಬಿಡುವ ಮುಂಚೆ ತಾಲೂಕು ಆಡಳಿತದಿಂದ ಮುಂಚಿತವಾಗಿ ಮುನ್ಸೂಚನೆ ನೀಡಲಾಗುವುದು ಅಂತ ಪತ್ರಿಕೆ ಮೂಲಕ ತಹಶೀಲ್ದಾರರು ಪ್ರಕಟಣೆ ಹೊರಡಿಸಿದ್ದಾರೆ.


Spread the love

About Laxminews 24x7

Check Also

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 625 ಅಂಕ ಪಡೆದ ಬಾಗಲಕೋಟೆಯ ಅಂಕಿತಾ ಬಸಪ್ಪ

Spread the loveಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 625 ಅಂಕ ಪಡೆದ ಬಾಗಲಕೋಟೆಯ ಅಂಕಿತಾ ಬಸಪ್ಪ ಬೆಂಗಳೂರು ಮೇ 9: ಎಸ್‌ಎಸ್‌ಎಲ್‌ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ