Breaking News

27 ಲಕ್ಷ ಮಂದಿ ರೈಲ್ವೆ ಟಿಕೆಟ್‌ ಇಲ್ಲದೆ ಪ್ರಯಾಣ : 143.87 ಕೋಟಿ ರೂ. ದಂಡ ಸಂಗ್ರಹ

Spread the love

ನವದೆಹಲಿ: ಸೋಂಕಿನ ಹಿನ್ನೆಲೆಯಲ್ಲಿ ಹಲವು ನಿಯಮಗಳು ಜಾರಿ ಇದ್ದರೂ ರೈಲುಗಳಲ್ಲಿ ಟಿಕೆಟ್‌ ಇಲ್ಲದೆ 27 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿದ ಸಚಿವಾಲಯ 2020 ಏಪ್ರಿಲ್‌ನಿಂದ ಪ್ರಸಕ್ತ ವರ್ಷ ಮಾರ್ಚ್‌ ವರೆಗೆ 27.57 ಲಕ್ಷ ಮಂದಿ ಟಿಕೆಟ್‌ ಇಲ್ಲದೆ ಪ್ರಯಾಣಿಸಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 25ಕ್ಕೂ ಕಡಿಮೆ ಪ್ರಕರಣಗಳು ಎಂದಿದೆ. ಅಷ್ಟೂ ಮಂದಿಯಿಂದ 143.87 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.

2019-20 ರಲ್ಲಿ 1.10 ಕೋಟಿ ಜನ ಟಿಕೆಟ್‌ ಖರೀದಿಸದೆ ಪ್ರಯಾಣಿಸಿದ್ದು, 561.73 ಕೋಟಿ ರೂ. ದಂಡ ಪಾವತಿಸಿದ್ದಾರೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ