ಬೆಳಗಾವಿ: ಅಂದಾಜು 2.5 ಕೋಟಿಯ ಚಿನ್ನದ ಕಹಾನಿಗೆ ಬೀಗ್ ಟ್ವಿಸ್ಟ್ : ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಕುಡಾ ಹಠಾತ್ ವರ್ಗಾವಣೆ

ನಿನ್ನೆಯಷ್ಠೇ ರಾಜ್ಯವನ್ನು ಬೆಚ್ಚಿಬಿಳಿಸಿದ್ದ ಚಿನ್ನ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿಯೇ ಸರಕಾರ ಮೂವರು ಪೊಲೀಸ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಕಾರಿನಲ್ಲಿದ್ದ ಚಿನ್ನದ ಕದ್ದ ಕಿರಣ ಎಂಬಾತನು ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ಅವರ ಆಪ್ತ ಎಂಬ ಮಾತುಗಳು ಕೇಳಿ ಬಂದ ಪರಿಣಾಮ ಎಚ್ಚೆತ್ತುಕೊಂಡ ಸರಕಾರ ಹಾಗೂ ಪೊಲೀಸ ಇಲಾಖೆ ಹಠಾತ್ತನೆ ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿದ್ದ ರಾಘವೇಂದ್ರ ಸುಹಾಸ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಒಟ್ಟಾರೆಯಾಗಿ ಚಿನ್ನದ ಬೆನ್ನತ್ತಿ ಇಲಾಖೆಯ ಮಾನ ಹರಾಜು ಮಾಡಿದ ಇಂತಹ ಇನ್ನೇಷ್ಟು ಕುಳಗಳು ಪೊಲೀಸ ಇಲಾಖೆಯಲ್ಲಿ ಅಡಗಿಕೊಂಡಿದ್ದಾರೆ ಎಂಬುದನ್ನು ಈ ಪ್ರಕರಣದ ತನಿಖೆ ನಡೆಸುವ ಹೊನೆ ಹೊತ್ತ ಸಿಓಡಿ ಅವರ ನಿಖರವಾದ ತನಿಖೆಯಿಂದ ಹೊರ ಬರಬೇಕಾಗಿದೆ.
Laxmi News 24×7